download app

FOLLOW US ON >

Saturday, May 28, 2022
Breaking News
ತೃತೀಯ ರಂಗಕ್ಕೆ ದೇವೇಗೌಡರ ಮಾರ್ಗದರ್ಶನ ; ಕೆಸಿಆರ್ ತಂತ್ರ!ಹಳೇ ಪಠ್ಯಪುಸ್ತಕವನ್ನೇ ಮುಂದುವರೆಸಲು ಕರವೇ ನಾರಾಯಣಗೌಡ ಆಗ್ರಹ!ಹಿಂದಿನ ಸರ್ಕಾರಗಳು ತಂತ್ರಜ್ಞಾನವನ್ನು ಬಡವರ ವಿರೋಧಿ ಎಂದು ಬಿಂಬಿಸಿದ್ದವು : ಮೋದಿ!ಬಿಜೆಪಿಗೆ ಡಿಕೆಶಿ ಅವರಂತ ಕಳ್ಳರ ಅವಶ್ಯಕತೆ ಇಲ್ಲ : ಯತ್ನಾಳ್!ಇಂದಿರಾ ಕ್ಯಾಂಟೀನ್ ನಿರ್ವಹಣೆ ಇಸ್ಕಾನ್‍ಗೆ ವಹಿಸಲು ಚಿಂತನೆ!ಮೋದಿ ಮೂಲಗುರಿ ಪ್ರಾದೇಶಿಕ ಪಕ್ಷಗಳ ಮೂಲೋತ್ಪಾಟನೆ : ಹೆಚ್.ಡಿ ಕುಮಾರಸ್ವಾಮಿ!ಚೆನ್ನಪಟ್ಟಣದಲ್ಲಿ ಡಿಕೆಶಿ ವಿರುದ್ದವೇ ಬಂಡಾಯ ಸಾರಿದ ಭಾವ ಶರತ್‍ಚಂದ್ರ!ಸಂವಿಧಾನಕ್ಕೆ ಶಿರಸಾಷ್ಟಾಂಗ ನಮಸ್ಕಾರ, ಇತ್ತ ‘ಆಪರೇಷನ್ ಕಮಲ’ : ಮೋದಿಗೆ ಹೆಚ್.ಡಿ.ಕೆ ಟಾಂಗ್!ಆರ್‍ಎಸ್‍ಎಸ್‍ನವರು ಮೂಲ ಭಾರತೀಯರಲ್ಲ : ಸಿದ್ದರಾಮಯ್ಯ!ದಾಳಿ ವೇಳೆ ನನ್ನ ಗೌಪ್ಯ ದಾಖಲೆಗಳನ್ನು ವಶಪಡಿಸಿಕೊಂಡಿದೆ ಸಿಬಿಐ : ಕಾರ್ತಿ ಚಿದಂಬರಂ!
English English Kannada Kannada

ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆಯನ್ನು ಬಯಲಿಗೆಳದ `ವಿಜಯ ಟೈಮ್ಸ್’ ತಂಡ!

ಬ್ಯಾನಾಗುತ್ತಾ ಅಕ್ರಮ ಮರಳು ದಂಧೆ. ಎನ್ಜಿಟಿ(NGT)ಆದೇಶವನ್ನ ಕಾಲ ಕಸ ಮಾಡುತ್ತಿದೆ ಗಣಿ ಮತ್ತು ಭೂವಿಜ್ಞಾನ ಇಲಾಖೆ. ಹೌದು, ವಿಜಯಟೈಮ್ಸ್ ಕಾರ್ಯಾಚರಣೆಯಲ್ಲಿ ಮರಳುದಂಧೆಯ ಕರಾಳ ಮುಖ ಬಯಲಾಗಿದೆ. ಸರ್ಕಾರದ ಆದೇಶ ಧಿಕ್ಕರಿಸಿದ ಮರಳು ದಂಧೆ ! ಯಾರಿಗೂ ಹೆದರದೆ, ಯಾವುದಕ್ಕೆ ಲೆಕ್ಕಿಸದೇ ಉಡುಪಿಯಲ್ಲಿ ನಡೆಯುತ್ತಿದೆ ಭರ್ಜರಿ ಅಕ್ರಮ ಮರಳುಗಾರಿಕೆ. ಗಣಿ ಅಧಿಕಾರಿಗಳ ಸಮ್ಮುಖದಲ್ಲೇ ಮರಳು ಲೂಟಿ. ವಿಜಯಟೈಮ್ಸ್ ರಹಸ್ಯ ಕಾರ್ಯಾಚರಣೆಯಲ್ಲಿ ಮರಳುದಂಧೆಯ ಕರಾಳ ಮುಖ ಬಯಲು ಮಾಡುವ ಮೂಲಕ ದಂಧೆಕೋರರ ಆಟಗಳನ್ನು ಪರಿ ಪರಿಯಾಗಿ ತಿಳಿಸಿದೆ.

cover story

ಈ ಮರಳು ದಂಧೆಕೋರರು ಎನ್ಜಿಟಿ ಆದೇಶವನ್ನು ಕಾಲಿನಡಿ ಹಾಕಿ, ಪೊಲೀಸರ ಸಹಾಯ ತೆಗೆದುಕೊಂಡು ಮಾಡುತ್ತಿದ್ದಾರೆ ಮರಳುಗಾರಿಕೆ. ರಾಜಕಾರಣಿಗಳ ಬೆಂಬಲದಿಂದಲೇ ಉಡುಪಿ ಜಿಲ್ಲೆಯಲ್ಲಿ ನಡಿತಿದೆ ಗಣಿ ಲೂಟಿ. ಉಡುಪಿ ಹೈಟೆಕ್ ಮರಳು ಲೂಟಿ ಬಗ್ಗೆ ತಿಳಿದ ವಿಜಯ ಟೈಮ್ಸ್ ತಂಡ ಹಂತ ಹಂತವಾಗಿ ಕಳ್ಳರ ಹಾದಿಯನ್ನು ಹುಡುಕಿಕೊಂಡು ಹೋದಾಗ ತಿಳಿದದ್ದು, ರಾಜಕಾರಣಿಗಳ ಬೆಂಬಲದಿಂದಲೇ ಜಿಲ್ಲೆಯಲ್ಲಿ ಗಣಿ ಲೂಟಿ ನಡೆಯುತ್ತಿದೆ ಎಂಬುದು. ಜಿಪಿಎಸ್, ಹೈಟೆಕ್ ತಂತ್ರಜ್ಞಾನ ಇದ್ರೂ ಮರಳು ಕಳ್ಳತ್ತನ ಮಾಡುತ್ತಿದ್ದಾರೆ. ಹೈಟೆಕ್ ಮರಳುಗಾರಿಕೆಗೆ ಗಣಿ ಅಧಿಕಾರಿಗಳಿಂದೇ ಫುಲ್ ಸಾಥ್, ಫುಲ್ ಪ್ರೋಟೆಕ್ಷನ್.

cover story

ಭಯಾನಕ ಮರಳು ದಂಧೆಯೂ ಉಡುಪಿಯಲ್ಲಿ ನಡೆಯುತ್ತಿದೆ ಎಂಬ ಮಾಹಿತಿಯನ್ನು ಇಂಚಿಂಚೂ ತಿಳಿದುಕೊಂಡ ವಿಜಯ ಟೈಮ್ಸ್ ಇವರ ಭರ್ಜರಿ ಅಕ್ರಮ ಮರಳು ದಂಧೆ ಬ್ರೇಕ್ ನೀಡಲು ಮುಂದಾಯಿತು. ಈ ದಂಧೆಗೆ ಭರ್ಜರಿ ಲಂಚ ಪಡೆದು ಅಕ್ರಮ ಮರುಳುಗಾರಿಕೆಗೆ ಕುಮ್ಮಕ್ಕು ನೀಡಲಾಗಿದೆ. ಇಲ್ಲಿನ ಶಾಸಕರು, ಜಿಲ್ಲಾಧಿಕಾರಿಗಳ ಕಣ್ಣಿಗೆ ಈ ಅಕ್ರಮ ಮರಳುಗಾರಿಕೆ ಕಾಣಿಸ್ತಿಲ್ವಾ? ಅಥವಾ ಕಾಣ್ಣಿಸಿದರೂ ಕೂಡ ಕಾಣಿಸದಂತೆ ವರ್ತಿಸುತ್ತಿದ್ದಾರೋ ತಿಳಿಯದು.

ಉಡುಪಿ ಕೃಷ್ಣನ ನಾಡಲ್ಲೇ ಮರಳು ಕಳ್ಳತನದ ದರ್ಶನ! ರಾಜಕಾರಣಿಗಳ ಬೆಂಬಲದಿಂದಲೇ ಜಿಲ್ಲೆಯಲ್ಲಿ ಗಣಿ ಲೂಟಿ ಮಾಡಲಾಗುತ್ತಿದೆ. ಜಿಪಿಎಸ್, ಹೈಟೆಕ್ ತಂತ್ರಜ್ಞಾನ ಇದ್ರೂ ಮರಳು ಕದೀತ್ತಿದ್ದಾರೆ. ವಿಜಯಟೈಮ್ಸ್ ರಹಸ್ಯ ಕಾರ್ಯಾಚರಣೆಯಲ್ಲಿ ಮರಳುದಂಧೆಯ ಕರಾಳ ಮುಖ ಬಯಲಾಗಿದೆ. ಅಕ್ರಮ ಮರಳುಗಾರಿಕೆ ವಿರುದ್ಧ ದೂರು ಕೊಟ್ರೂ ಇಲ್ಲಿ ಕ್ರಮಕೈಗೊಳ್ಳಲು ಇಲ್ಲ ಯಾವುದೇ ಅಧಿಕಾರಿ. ಟ್ರಿಪ್ ಶೀಟ್ ನೀಡದೇ ಲಾರಿಯಲ್ಲಿ ಲೋಡ್ ಹಾಕುತ್ತಾರೆ. 15 ಟನ್ ಸಾಮರ್ಥ್ಯದ ಲಾರಿಯಲ್ಲಿ 18 ಟನ್ ಏರಿಸುತ್ತಾರೆ.

cover story

ಇದನ್ನು ಕೇಳುವುದಿಲ್ಲ ಯಾವುದೇ ಪೊಲೀಸರು, ಅಕಸ್ಮಾತ್ ಕಂಡರು ಜೋಬಿಗೆ ಸೇರಿಸಿಕೊಂಡು ಹಾಗೆ ಸುಮ್ಮನಾಗುತ್ತಾರೆ. ವಿಜಯಟೈಮ್ಸ್ ರಹಸ್ಯ ಕಾರ್ಯಾಚರಣೆಯಲ್ಲಿ ಮರಳುದಂಧೆಯ ಕರಾಳ ಮುಖ ಇಂಚಿಂಚೂ ಕರಾಳ ಮುಖಗಳು ಬಯಲಾಯಿತು. ಬುದ್ದಿವಂತರ ನಾಡು, ವಿದ್ಯಾವಂತರ ನಾಡು ಅಂತಾನೇ ಖ್ಯಾತಿವೆತ್ತ ಗಳಿಸಿರುವ ಉಡುಪಿ ಜಿಲ್ಲೆಯ ಹೈಟೆಕ್ ಮರುಳು ದಂಧೆಕೋರರ ಮುಖವಾಡ ಬಯಲು ಮಾಡಲು ಹೊರಟಿದ್ದು, ಶ್ರೀ ಕೃಷ್ಣನನ್ನು ಆರಾಧಿಸುವ ನಾಡು ಉಡುಪಿ ಜಿಲ್ಲೆಯಲ್ಲಿ. ಕಠಿಣ ನಿಯಮಗಳನ್ನು ವಿಧಿಸಿ, ಕರಾವಳಿಯ ಪರಿಸರಕ್ಕೆ ಧಕ್ಕೆ ಆಗದ ರೀತಿಯಲ್ಲಿ ಮರಳು ತೆಗೆಯಲು ಹಸಿರು ನ್ಯಾಯಾಧೀಕರಣ ಅವಕಾಶ ನೀಡಿದೆ. ಆದರೆ ಆ ಅವಕಾಶ ಇದ್ದರೂ ಕೂಡ ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿರೋದೇ ಬೇರೆ, ಇಲ್ಲಿ ಬರೀ ಅಕ್ರಮ ಮರಳುಗಾರಿಕೆಯದ್ದೇ ದರ್ಬಾರು.

ಇಲ್ಲಿ ಹಸಿರು ನ್ಯಾಯಾಧಿಕರಣದ ನಿಯಮಗಳನ್ನು ಕಾಲ ಕಸ ಮಾಡಿ ಕಂಡ ಕಂಡಲ್ಲಿ ಮರಳನ್ನು ಕದಿಯಲಾಗ್ತಿದೆ. ಇಂಥಾ ಖದೀಮರನ್ನೇ ಬೆನ್ನಟ್ಟಿ ಹೊರಟಿತು ನಮ್ಮ ಕವರ್ ಸ್ಟೋರಿ ತಂಡ. ಉಡುಪಿ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆಗೆ ಸಂಪೂರ್ಣ ಬ್ರೇಕ್ ಹಾಕಬೇಕು ಅನ್ನೋ ದೃಷ್ಟಿಯಿಂದ ಒಂದಿಷ್ಟು ಹೈಟೆಕ್ ತಂತ್ರಜ್ಞಾನಗಳನ್ನು ಅಳವಡಿಸಲಾಯಿತು. ಜಿಪಿಎಸ್ ಟ್ರಾಕಿಂಗ್ ಸಿಸ್ಟಮ್, ಆನ್ಲೈನ್ ಮರಳು ಬುಕ್ಕಿಂಗ್ ಹೀಗೆ ನಾನಾ ಬಗೆಯ ತಂತ್ರಜ್ಞಾನಗಳನ್ನು ಅಳವಡಿಸಲಾಯಿತು. ಆದರೆ ಮರಳು ದಂಧೆಕೋರರು ಇವೆಲ್ಲವನ್ನು ಮೀರಿ ಹೈಟೆಕ್ಕಾಗಿ ಮರಳನ್ನು ಕದ್ದು, ಸರ್ಕಾರದ ಬೊಕ್ಕಸಕ್ಕೆ ಮೋಸ ಮಾಡಿ, ನೆಲದ ಕಾನೂನು ಮೀರಿ ಹೈಟೆಕ್ಕಾಗಿಯೇ ಮರಳು ಸಾಗಾಟ ಮಾಡ್ತಿದ್ದಾರೆ.

cover story


ಹಸಿರು ನ್ಯಾಯಾಧಿಕರಣದ ಆದೇಶದ ಮೇರೆಗೆ ಸಿಆರ್ಝೆಡ್ ಹಾಗೂ ನಾನ್ ಸಿಆರ್ಝೆಡ್ ಪ್ರದೇಶದಲ್ಲಿ ಒಟ್ಟು 171 ಮರಳು ತೆಗೆಯೋ ಜಾಗಗಳನ್ನು ಗುರುತಿಸಲಾಗಿದೆ. ಸಾಕಷ್ಟು ಪರಿಸರ ನಿಯಮಗಳನ್ನು ಹಾಕಿ ಅಲ್ಲಿ ಮರಳು ತೆಗೆಯಲು ಅವಕಾಶ ನೀಡಲಾಗಿದೆ. ಆದ್ರೆ ಅಸಲಿಗೆ ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿರುವುದೇ ಬೇರೆ. ಅದೇನು ಅಂತೀರಾ ಮುಂದೆ ಓದಿ. ಬೆರಳೆಣಿಕೆಯಷ್ಟು ಮಂದಿ ಮಾತ್ರ ಸಕ್ರಮ ಮರಳುಗಾರಿಕೆ ಮಾಡುತ್ತಿದ್ರೆ, ಉಳಿದವರೆಲ್ಲಾ ಅಕ್ರಮದಲ್ಲಿ ತೊಡಗಿ ನ್ಯಾಯಾಲಯದ ಆದೇಶವನ್ನು ಉಡಾಫೆ ಮಾಡುತ್ತಿದ್ದಾರೆ. ಈ ವಿಡಿಯೋವನ್ನೊಮ್ಮೆ ನೋಡಿ, ಈ ಲಾರಿಗೆ ಹದಿನೈದು ಟನ್ ಮರಳು ಸಾಗಿಸೋ ಸಾಮರ್ಥ್ಯ ಇದೆ. ಆದರೆ ಈ ಲಾರಿ ಮಾಲೀಕರು ಪ್ರತಿದಿನ ಟ್ರಿಪ್ ಶೀಟ್ ತೆಗೆಯೋ ಬದಲು ಹದಿನೈದು ದಿನಕ್ಕೊಮ್ಮೆ, ತಿಂಗಳಿಗೊಮ್ಮೆ ಒಂದು ಟ್ರಿಪ್ ಶೀಟ್ ತೆಗೆದು ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ರಾಯಲ್ಟಿ ಮೋಸ ಮಾಡ್ತಿದೆ. ಈ ಚಿತ್ರಗಳನ್ನೇ ನೋಡಿ.

ಸಿಆರ್ಝಡ್ ಭಾಗದಲ್ಲಿ ಎಲ್ಲಿಯೂ ಮರಳನ್ನು ಸ್ಟಾಕ್ ಮಾಡುವಂತಿಲ್ಲ. ಅಲ್ಲದೆ ಜಿಪಿಎಸ್ ಜಿಯೋಫೆನ್ಸಿಂಗ್ ಮಾರ್ಕ್ನ ಒಳಗೇ ಮರಳನ್ನು ಸ್ಟಾಕ್ ಮಾಡಬೇಕು. ಆದರೆ ಈ ನೀಯಮವನ್ನು ಬ್ರೇಕ್ ಮಾಡಿ ಅಕ್ರಮವಾಗಿ ಎಲ್ಲೆಂದರಲ್ಲಿ ಮರಳು ಸ್ಟಾಕ್ ಮಾಡಿ ಜಿಪಿಎಸ್ ಇಲ್ಲದ ಲಾರಿಗಳಲ್ಲಿ ಮರಳನ್ನು ಸಾಗಿಸಲಾಗುತ್ತಿದೆ. ಯಾರ ಭಯವೂ ಇಲ್ಲದೆ, ಲಾರಿಗಳ ಚಲನವಲನಗಳನ್ನು ನಿಗಾ ಇಡಬೇಕಾದ ಜಿಪಿಎಸ್ ತಂತ್ರಜ್ಞಾನವನ್ನೇ ನಿಷ್ಕ್ರಿಯಗೊಳಿಸಿ, ಸರ್ಕಾರಕ್ಕೆ ರಾಯಲ್ಟಿಯನ್ನೂ ಕಟ್ಟದೆ, ಹಾಡ ಹಗಲೇ ಮರಳು ಲೂಟಿ ಮಾಡಲಾಗುತ್ತಿದೆ. ಇನ್ನು ಅತ್ತ ದಕ್ಷಿಣ ಕನ್ನಡ, ಇತ್ತ ಉಡುಪಿ ಜಿಲ್ಲೆ ಮಧ್ಯದಲ್ಲಿ ಬರೋ ಸೌಪರ್ಣಿಕಾ ನದಿಯ ಮರಳನ್ನು ಯಾವ ಪರವಾನಗಿಯೇ ಇಲ್ಲದೆ ದರೋಡೆ ಮಾಡಲಾಗುತ್ತಿದೆ. ಬಳಕುಂಜೆ, ಇನ್ನ, ಪಲಿಮಾರುಮ ಸಂಕಲಕರಿಯ ಭಾಗದಲ್ಲಂತು ವರ್ಷವಿಡೀ ಯಾರ ಭಯವಿಲ್ಲದೇ ಅಕ್ರಮವಾಗಿ ಮರಳು ಸಾಗಿಸಿದ್ರೂ ಹೇಳುವವರು, ಕೇಳುವವರು ಯಾರೂ ಇಲ್ಲದಾಗಿದೆ. ಜಿಲ್ಲೆಯ ಗಣಿ ಇಲಾಖೆ ಅಧಿಕಾರಿಗಳಿಗೆ ಈ ಭಾಗಕ್ಕೆ ಹೋಗಿ ಮರಳುಗಾರಿಕೆಗೆ ಬ್ರೇಕ್ ಹಾಕೋ ತಾಕತ್ತೇ ಇಲ್ಲದಂತಾಗಿದೆ.

cover story

ಇಲ್ಲಿ ಅಕ್ರಮ ಮರಳು ದಂಧೆ ಎಷ್ಟೊಂದು ಕರಾಳವಾಗಿ ನಡೀತಿದೆ ಅನ್ನೋದಕ್ಕೆ ಅವರ ಅರ್ಥವಿಲ್ಲದ, ನಡುಕವಿರುವ ಮಾತುಗಳೇ ಸಾಕ್ಷಿ. ಈಗ ನಿಮಗೆ ಕೆಲವು ದಾಖಲೆ ತೋರಿಸ್ತೀನಿ. ಅದ್ರಲ್ಲಿ ಗಣಿ ಅನುಮತಿ ಹೊಂದಿದವರು ಹಾಗೂ ಲಾರಿಯವರ ಅಡ್ಜೆಸ್ಟ್ಮೆಂಟ್ ಹೇಗಿರುತ್ತೆ ಮತ್ತು ಸರ್ಕಾರಕ್ಕೆ ಹೇಗೆ ಲಾರಿಯವರು ಮೋಸ ಮಾಡ್ತಾರೆ ನೋಡಿ. ಈ ಟಿಪ್ಪರ್ ಲಾರಿಗಳಲ್ಲಿ ಒಂದು ಟನ್, ಎರಡು ಟನ್ ಹಾಗೂ ಐದು ಟನ್ ಮರಳು ತುಂಬಿರುವ ಬಗ್ಗೆ ಮಾಹಿತಿ ಇದೆ. ಆದ್ರೆ ಅಸಲಿಗೆ ಇವರು ಒಂದೊಂದು ಬಾರಿ ಸಣ್ಣ ಲಾರಿ ಆದ್ರೆ ಮೂರರಿಂದ ಐದು ಹಾಗೂ ದೊಡ್ಡ ಲಾರಿ ಆದ್ರೆ ಹತ್ತರಿಂದ ಹನ್ನೆರಡು ಟನ್ ಮರಳು ತುಂಬಿ ಸಾಗಿಸ್ತಾರೆ. ದಾಖಲೆಯಲ್ಲಿ ಒಂದು ಟನ್ ಸಾಗಿಸೋದು ಹತ್ತು ಟನ್.

ಕಾನೂನು ಪ್ರಕಾರ ಮೂರು ಟನ್ ಮತ್ತು ಹತ್ತು ಟನ್ ಮರಳು ಸಾಗಿಸಲು ಅವಕಾಶ ಇದೆ. ಜಿಪಿಎಸ್ ನಿಷ್ಕ್ರಿಯಗೊಳಿಸಿ ಅಥವಾ ಆನ್, ಆಫ್ ಮಾಡೋ ಬಟನ್ ಹಾಕಿ, ಟ್ರಿಪ್ ಶೀಟ್ ತೆಗೆಯದೆ ನಿರಂತರವಾಗಿ ನಿತ್ಯ 500 ಕ್ಕೂ ಹೆಚ್ಚು ಲೋಡ್ ಅಕ್ರಮವಾಗಿ ಮರಳು ಸಾಗಿಸಲಾಗುತ್ತೆ. ಅದೂ ಹೈವೇ ದಾರಿಯಲ್ಲೇ ಸಾಗಿಸಿದ್ರೂ ಪೊಲೀಸರಾಗಲಿ, ಗಣಿ ಅಧಿಕಾರಿಗಳಾಗಲಿ ಕಣ್ಣಿಗೆ ಕಾಣೋದೇ ಇಲ್ಲ. ಇವರು ಜಿಪಿಎಸ್ ಹೇಗೆ ಬಂದ್ ಮಾಡಿ ಲೋಡ್ ಸಾಗಿಸ್ತಾರೆ ಅನ್ನೋದಕ್ಕೆ ನಮ್ಮ ಬಳಿ ಇದೆ ದಾಖಲೆ. ಒಂದು ಗಾಡಿ ಮುಂಜಾನೆ 6.27ಕ್ಕೆ ಪ್ರಯಾಣ ಪ್ರಾರಂಭಿಸುತ್ತೆ ಆಮೇಲೆ ಜಿಪಿಎಸ್ ಕೆಲಸ ಮಾಡಲ್ಲ. ಮತ್ತೆ 11.01ಕ್ಕೆ ಆನ್ ಆಗುತ್ತೆ ಆಫ್ ಆಗುತ್ತೆ. ಮತ್ತೆ 2.58ಕ್ಕೆ ಆನ್ ಆಗುತ್ತೆ, ಆಮೇಲೆ ಆನ್ಲ್ಲೇ ಇರುತ್ತೆ. ಇದು ಹೇಗೆ ಸಾಧ್ಯ. ಹಾಗಾದ್ರೆ ಜಿಪಿಎಸ್ ತಂತ್ರಜ್ಞಾನ ಯಾವ ಕರ್ಮಕ್ಕೆ ಮಾಡಿದ್ದು. ಜಿಲ್ಲೆಯಲ್ಲಿ ನಡೆಯುವ ಅಕ್ರಮಗಳು ಕಾಣದ ಹಾಗೆ ಕಣ್ಣಿಗೆ ಪೊರೆ ಬರಿಸಿರುವ ನಮ್ಮ ಭ್ರಷ್ಟ ಅಧಿಕಾರಿಗಳ ಕಣ್ಣಿನ ಪೊರೆ ಕಳಚಲು ನಾವು ಜಿಪಿಎಸ್, ಟ್ರಿಪ್ ಶೀಟ್ ಮೋಸ ಮಾಡೋ ಗಾಡಿಗಳನ್ನು ಚೇಸ್ ಮಾಡುತ್ತಾ ಸಾಗಿದೆವು.ನಾಲ್ಕು ದಿನದ ಹಿಂದೆ ತೆಗೆದ ಟ್ರಿಪ್ ಶೀಟ್, ಒಂದೇ ಟ್ರಿಪ್ ಶೀಟ್ 2-3 ಲೋಡ್.

cover story

ಇನ್ನು ಅಕ್ರಮವಾಗಿ ಮರಳು ಸಂಗ್ರಹಿಸಿಡೋ ಜಾಗಗಳನ್ನು ನೋಡಿದ್ರೆ ನಿಮಗೆ ಅಚ್ಚರಿಯಾಗುತ್ತೆ. ಎಲ್ಲೆಲ್ಲೂ ಅಕ್ರಮ ಮರಳಿನ ಗುಡ್ಡೆಯೇ ಕಾಣಿಸುತ್ತದೆ. ಇನ್ನು ಜಿಲ್ಲೆ ತುಂಬಾ ಅಕ್ರಮ ಮರಳು, ಕಲ್ಲು ಗಣಿಗಾರಿಕೆಯೇ ನಡೆಯುತ್ತಿದ್ರೂ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ಗಮ್ಮತ್ತಲ್ಲಿದ್ದಾರೆ. ಇವರು ಸಾರ್ವಜನಿಕರ ದೂರಿಗೆ ಸ್ಪಂದಿಸುವ ರೀತಿ ಕೇಳಿದ್ರೆ ಇವರೂ ಅಕ್ರಮದಲ್ಲಿ ನೇರ ಭಾಗಿಗಳಾ ಅನ್ನೋ ಅನುಮಾನ ಮೂಡುತ್ತೆ. ಈ ಅಕ್ರಮದ ಬಗ್ಗೆ ನೇರವಾಗಿ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ಕೇಳಿದ್ರೆ ಅವರೋ ತಮಗೂ ಅದಕ್ಕೂ ಸಂಬಂಧವೇ ಇಲ್ಲ ಅನ್ನೋ ರೀತಿಯಲ್ಲಿ ವರ್ತಿಸಿದ್ರು. ಇನ್ನು ಗಣಿ ಇಲಾಖೆ ಅಧಿಕಾರಿ ಸಂದೀಪ್ ಅವರು ಜಿಲ್ಲೆಯಲ್ಲಿ ಅಕ್ರಮವೇ ನಡೀತಿಲ್ಲ.

cover story

ನಡೆಸಿದ್ರೆ ನಾವು ದಂಡ ಹಾಕ್ತೀವಿ ಅಂತ ಹೇಳಿ ನಮಗೆ ದಂಡ ಹಾಕಿದ ಪಟ್ಟಿಯನ್ನೂ ಹೆಮ್ಮೆಯಿಂದ ಕೊಟ್ರು. ಇನ್ನು ಜಿಪಿಎಸ್ ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳಲು ನಾವು ಕಂಟ್ರೋಲ್ ರೂಮ್ಗೆ ಹೋದ್ರೆ ಅಲ್ಲಿ ಜಿಪಿಎಸ್ ವರ್ಕೇ ಆಗ್ತಿರಲಿಲ್ಲ. ಅದನ್ನು ನಾವು ಪ್ರಶ್ನಿಸಿದಾಗ ಅಲ್ಲಿನ ಸಿಬ್ಬಂದಿ ತಮ್ಮ ತಪ್ಪನ್ನು ಒಪ್ಪಿಕೊಂಡ್ರು. ಹೇಗಿದೆ ನೋಡಿ ನಮ್ಮ ಸರ್ಕಾರದ ವ್ಯವಸ್ಥೆಗಳು. ಅಕ್ರಮಕ್ಕೆ ಅಧಿಕಾರಿಗಳೇ ಅವಕಾಶ ಮಾಡಿ ಕೊಡ್ತಿದ್ದಾರೆ ಅನ್ನೋದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇರೇ ಬೇಕಾ. ದೇಶದ ಸಂಪತ್ತು ಉಳಿಸಬೇಕಾದ ಜಿಲ್ಲಾಡಳಿತ, ಶಾಸಕರು, ಸಂಸದರೇ ದೇಶದ್ರೋಹ ಕೆಲಸ ಮಾಡುವವರಿಗೆ ಬೆಂಬಲ ಕೊಡುತ್ತಿರುವುದು ನಿಜವಾಗ್ಲೂ ಲಜ್ಜೆಗೇಡಿ ಕೆಲಸ. ಇಂಥಾ ವ್ಯವಸ್ಥೆಗೆ ನಮ್ಮದೊಂದು ಧಿಕ್ಕಾರ! ಮರಳು ದಂಧೆಯ ಕವರ್ ಸ್ಟೋರಿಯ ವೀಡಿಯೋ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

Share News on

Share on facebook
Facebook
Share on google
Google+
Share on twitter
Twitter
Share on linkedin
LinkedIn
Share on whatsapp
WhatsApp
error: Content is protected !!

Submit Your Article