ಚಿನ್ನದ ಸ್ಮಗ್ಲಿಂಗ್ ಕೇಸ್‌: ದಾವೂದ್ ಇಬ್ರಾಹಿಂ ನಂಟು

ibrahim

ಕೊಚ್ಚಿ, ಅ. 15: ಚಿನ್ನದ ಸ್ಮಗ್ಲಿಂಗ್​ ಕೇಸ್​ನ ಆಳಕ್ಕೆ ಹೋದಷ್ಟೂ ತನಿಖಾಧಿಕಾರಿಗಳಿಗೆ ಹೊಸಹೊಸ ವಿಷಯಗಳು ಲಭಿಸುತ್ತಿದ್ದು, ಕೇರಳ ಸರ್ಕಾರವನ್ನೇ ಅಲ್ಲಾಡಿಸುವ ಹಂತಕ್ಕೆ ತಲುಪಿದೆ. ಈ ವಿಚಾರಕ್ಕೆ ಸಾಕ್ಷಿಯೆಂಬಂತೆ ಪ್ರಕರಣಕ್ಕೆ ನೇರವಾಗಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ನಂಟಿದೆ ಎಂಬ ಅನುಮಾನವಿರುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್​ಐಎ) ಸಂಶಯ ವ್ಯಕ್ತಪಡಿಸಿದೆ.

ಈ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆಯು ಚಿನ್ನ ಕಳ್ಳ ಸಾಗಾಟ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದಂತಾಗಿದೆ ಎಂದು ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ. ಇದಕ್ಕೆ ಸಂಬಂಧಿಸಿದಂತೆ ಎನ್​ಐಎ, ಈಗಾಗಲೇ ತನಿಖೆ ನಡೆಸುತ್ತಿದ್ದು, ತಾಂಜಾನಿಯಾ ಭೂಗತ ಪಾತಕಿಯ ದಾವೂದ್ ಇಬ್ರಾಹಿಂ ಜತೆಗೆ ನೇರವಾದ ನಂಟನ್ನು ಹೊಂದಿದ್ದು, ಆರೋಪಿಗಳು ಹಲವು ಬಾರಿ ಭೇಟಿ ನೀಡಿದ್ದಾರೆ ಎಂಬ ವಿಷಯವನ್ನು ಬಹಿರಂಗಪಡಿಸಿದೆ.

ಈ ಪ್ರಕರಣದ ಬೆನ್ನಟ್ಟಿ ಹೋಗಿದ್ದ ತನಿಖಾಧಿಕಾರಿಗಳಿಗೆ ನೇರವಾಗಿ ಮುಖ್ಯಮಂತ್ರಿ ಕಾರ್ಯಾಲಯದ ಲಿಂಕ್​ ಇರುವುದೂ ತಿಳಿದಿತ್ತು. ನಂತರ ದೊಡ್ಡ ದೊಡ್ಡ ಅಧಿಕಾರಿಗಳು, ರಾಜಕಾರಣಿಗಳು ಇದರಲ್ಲಿ ಭಾಗಿಯಾಗಿರುವ ವಿಚಾರ ಹೊರಬಿದ್ದಿತ್ತು. ಈ ಗೋಲ್ಡ್​ ಮಾಫಿಯಾ ಕೇಸ್​ ಇದೀಗ ದಾವೂದ್​ ಇಬ್ರಾಹಿಂವರೆಗೆ ಬಂದು ನಿಂತಿದೆ.

Exit mobile version