ಚಿನ್ನ ಸುಡ್ತಿದ್ದಾರೆ ರಾಜ್ಯದ ರೈತರು; ಟೆಂಡರ್‌ ಗೋಲ್ಮಾಲ್‌ಗೆ ಜನ ಬಲಿ

Burning gold? Tender Golmal ! | ಚಿನ್ನಸುಡ್ತಿದ್ದಾರೆ ರಾಜ್ಯದ ರೈತರು: ಟೆಂಡರ್‌ ಗೋಲ್ಮಾಲ್‌ಗೆ ಜನ ಬಲಿ | CJ

ಇದು ಹಾನಗಲ್ ತಾಲೂಕಿನ ಉಪ್ಪರಿಗೇನಹಳ್ಳಿ ಗ್ರಾಮದಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿರೋ ದೃಶ್ಯ. ಈ ಹೊಗೆ ಇಲ್ಲಿನ ಜನರಿಗೆ ಅಸ್ತಮಾ, ಶ್ವಾಸಕೋಶದ ಸಮಸ್ಯೆ ಕೊಡುತ್ತಿದೆ. ಹೌದು ಉಪ್ಪರಿಗೇನಹಳ್ಳಿ ಗ್ರಾಮದ ಮಂದಿ ಮಾಡುತ್ತಿರೋ ತಪ್ಪು. ಇವರು ಲಕ್ಷ್ಮೀ ರೂಪದಲ್ಲಿರೋ  ಅಡಿಕೆ ಸಿಪ್ಪೆಯನ್ನು ಸುಡುತ್ತಿದ್ದಾರೆ. ರಸ್ತೆಯಲ್ಲಿ ಅಡಿಕೆ ಸಿಪ್ಪೆಯನ್ನು ಬೆಂಕಿ ಹಾಕಿ ಸುಡೋದ್ರಿಂದ ವಾಯುಮಾಲಿನ್ಯ ಉಂಟಾಗುತ್ತಿದೆ. ಇದರಿಂದ ರಸ್ತೆಯಲ್ಲಿ ಮಕ್ಕಳು ಹಾಗೂ ಮಹಿಳೆಯರು ಬಟ್ಟೆಯಿಂದ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಉಂಟಾಗಿದೆ. ಇದು ಸ್ಥಳೀಯರ ಆರೋಗ್ಯದ ಮೇಲೆ ಭಾರೀ ದುಷ್ಪರಿಣಾಮ ಬೀಳುತ್ತಿದೆ. ಅಡಿಕೆ ಸುಡುವ ಬದಲು ಅದನ್ನು ಅತ್ಯುತ್ತಮ ಗೊಬ್ಬರವನ್ನಾಗಿ ಮಾಡಬಹುದು. ಬಹಳ ಸುಲಭವಾಗಿ ಈ ಅಡಿಕೆ ಸಿಪ್ಪೆಯಿಂದ ಕಡಿಮೆ ಖರ್ಚಲ್ಲಿ ಅತಿ ಬೆಲೆ ಬಾಳುವ ಸಾವಯವ ಗೊಬ್ಬರ ತಯಾರಿಸಬಹುದು.

ಕೃಷಿ ತ್ಯಾಜ್ಯವಾದ ಅಡಿಕೆ ಸಿಪ್ಪೆಯನ್ನು ರಸ್ತೆಯಲ್ಲಿ ಹಾಕಿ ಸುಡುತ್ತಿರುವುದು ಸರಿಯಲ್ಲ. ರೈತಬಾಂಧವರು ಈ ಅಡಿಕೆ ತ್ಯಾಜ್ಯವನ್ನು ಸುಡುವ ಬದಲು, ಅದನ್ನ ಕೃಷಿ ಭೂಮಿಗೆ ಸಾವಯವ ಗೊಬ್ಬರವಾಗಿ ಪರಿರ್ತಿಸಿದ್ರೆ ಉತ್ತಮ. ಇದು ಉಪ್ಪರಿಗೇನಹಳ್ಳಿ ಗ್ರಾಮ ಒಂದರ ಸಮಸ್ಯೆಯಲ್ಲ. ಚಿತ್ರದುರ್ಗ, ತುಮಕೂರು ಜಿಲ್ಲೆಯ ಅನೇಕ ರೈತರು ಚಿನ್ನದ ಬೆಲೆ ಬಾಳೋ ಅಡಿಕೆ ಸಿಪ್ಪೆಯನ್ನು ಸುಡುತ್ತಿದ್ದಾರೆ. ಆದ್ರೆ ಇದನ್ನು ತಡೆಯಲು ಜಿಲ್ಲಾಡಳಿತ ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ. ರೈತರಲ್ಲಿ ಜಾಗೃತಿಯನ್ನೂ ಮೂಡಿಸುತ್ತಿಲ್ಲ. ಇನ್ನು ಈ ಅಡಿಕೆ ಸಿಪ್ಪೆಯನ್ನು ರಸ್ತೆ ಬದಿ ಹಾಕಿ ಬೆಂಕಿ ಇಟ್ಟು ಸುಡಲಾಗುತ್ತಿದೆ. ಇದರಿಂದ ಅಲ್ಲಿ ಹೊಗೆ ತುಂಬಿಕೊಂಡು ವಾಹನಗಳಿಗೆ ರಸ್ತೆಯೇ ಕಾಣದಂತಾಗಿದೆ. ಇದೆ ಕಾರಣಕ್ಕೆ ಹಲವು ಸಲ ಅಪಘಾತಗಳೂ ಸಂಭವಿಸಿವೆ.ಇದೇ ರೀತಿ ಕೃಷಿ ತ್ಯಾಜ್ಯವನ್ನು ಸುಡುತ್ತಿದ್ದರೆ, ಮುಂದೊಂದು ದಿನ ನಮ್ಮ ರಾಜ್ಯಕ್ಕೂ ದೆಹಲಿ ದುಸ್ಥಿತಿ ಬರಬಹುದು. ಜನ ಹೊಗೆಯಿಂದ ಉಸಿರಾಡೋದೇ ಕಷ್ಟಸಾಧ್ಯ ಆಗಬಹುದು

Exit mobile version