ಚೀನಾಗೆ ತೆರಳಲಿದೆ ವಿಶ್ವ ಆರೋಗ್ಯ ಸಂಸ್ಥೆ ತಂಡ

ಕೋವಿಡ್-19 ವೈರಸ್ ಸೋಂಕಿನ ಬಗ್ಗೆ ಮಾಹಿತಿ ನೀಡಲು ಚೀನಾ ನಿಧಾನ ಮಾಡುತ್ತಿದ್ದು. ಜಾಗತಿಕ ಕಳವಳಗಳು ಹೆಚ್ಚಾಗುತ್ತಿದೆ. ಈ ಮಧ್ಯೆ, ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‍ಒ) ಮುಂದಿನವಾರ ಚೀನಾಕ್ಕೆ ವೈರಸ್ ಉಗಮ ಮತ್ತು ಮಾನವರಿಗೆ ಹರಡುತ್ತಿರುವ ಬಗ್ಗೆ ತನಿಖೆ ನಡೆಸಲು ತಂಡವನ್ನು ಕಳುಹಿಸುತ್ತಿದೆ. ವೈರಲ್ ನ್ಯುಮೋನಿಯಾ ಪ್ರಕರಣಗಳ ಕುರಿತು ಚೀನಾದ ಡಬ್ಲ್ಯುಎಚ್‍ಒನ ಕಂಟ್ರಿ ಆಫೀಸ್ ವುಹಾನ್ ಮುನ್ಸಿಪಲ್ ಹೆಲ್ತ್ ಕಮಿಷನ್‍ನಿಂದ ಹೇಳಿಕೆ ಪಡೆದು 6 ತಿಂಗಳ ನಂತರ ಭೇಟಿಗೆ ಸಿದ್ಧವಾಗಿದೆ.
ಸದ್ಯ ವೈರಸ್ ಮೂಲವನ್ನು ತಿಳಿಯುವುದು ಬಹಳ ಮುಖ್ಯ ಎಂದು ಡಬ್ಲ್ಯುಎಚ್‍ಒ ಹೇಳುತ್ತಿದೆ. ವೈರಸ್ ಉಗಮವಾಗಿದ್ದು ಹೇಗೆ, ಹೇಗೆ ಪ್ರಾರಂಭವಾಯಿತು ಎನ್ನುವುದು ತಿಳಿದರೆ ವೈರಸ್ ವಿರುದ್ಧ ಹೋರಾಡಲು ಸಹಾಯಗುತ್ತದೆ ಎಂದು ಡಬ್ಲ್ಯುಎಚ್‍ಒನ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ತಿಳಿಸಿದ್ದಾರೆ .

Exit mobile version