ಜನರಿಗೆ ತಲೆ ಬಿಸಿಯಾದ ತರಕಾರಿ ಬೆಲೆ

ಬೆಂಗಳೂರು: ಈಗಾಗಲೇ ಕೊರೋನಾದಿಂದ  ಜನ ಸಾಕಷ್ಟು ಸಂಕಷ್ಟಗಳನ್ನು ಅನುಭವಿಸಿ ಆರ್ಥಿಕ ಸಂಕಷ್ಟದಿಂದ ನರಳುವಂತಾಗಿದೆ .ಜೀವನ ನಿರ್ವಹಣೆಗೆ ಪರದಾಡುವಂತಾಗಿದೆ.ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುವವರು ಇದ್ದಾರೆ. ಈ ಸಂದರ್ಭದಲ್ಲಿ ಹಲವು ದಿನಗಳಿಂದ ತರಕಾರಿ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ.

ಕಳೆದ ಹಲವು ದಿನಗಳಿಂದ 60 ರೂಪಾಯಿಗಿಂತ ಕಡಿಮೆಗೆ ಯಾವ ತರಕಾರಿಗಳೂ ಸಿಗುತ್ತಿಲ್ಲ .40 ರೂಪಾಯಿಗೆ ಸಿಗುತ್ತಿದ್ದ ಹುರುಳಿಕಾಯಿಗೆ 80 ರೂಪಾಯಿ 30 ರೂಪಾಯಿಗೆ ಸಿಗುತ್ತಿದ್ದ ಟೊಮೆಟೋಗೆ 60 ರೂಪಾಯಿ  100 ರೂ ಗೆ 5 ಕೆ ಜಿ ಸಿಗುತ್ತಿದ್ದ ಈರುಳ್ಳಿಗೆ 3 ಕೆ ಜಿ ಅಷ್ಟೇ ಸಿಗುತ್ತಿದೆ .ಹೀಗಾದರೆ ಜನ ಹೇಗೆ ಜೀವನ ಮಾಡುವುದು ?

ಈ ರೀತಿ ಜೇಬಿಗೆ ಕತ್ತರಿ ಹಾಕುವ ಕೆಲಸ ಆದ್ರೆ ಬಡವರು ಬದುಕುವುದಾದರೂ ಹೇಗೆ? ಮಳೆ ಬೆಳೆ ಚೆನ್ನಾಗಿದ್ದರೂ  ಈ ರೀತಿ ಆದರೆ ಗ್ರಾಹಕರ ಗೋಳು ಯಾರಿಗೆ ಹೇಳಲಿ? ಹಣ್ಣು ಹಂಪಲುಗಳೂ ಸಹಿತ 40 ರೂಪಾಯಿ ಇದ್ದ ಬೆಲೆ ದಿಢೀರನೆ 60ಕ್ಕೆ ಏರಿದೆ. ಇದರಿಂದ ಸಾಮಾನ್ಯ ಜನರಿಗೆ ಕಷ್ಟವಾಗುತ್ತಿದೆ.

Exit mobile version