ಜಮ್ಮು: ಜಮ್ಮು ಮತ್ತು ಕಾಶ್ಮೀರ ಮಂದಿಗೆ ಗುಡ್ ನ್ಯೂಸ್. ಇಲ್ಲಿ ವಾಸವಿದ್ದ ಸುಮಾರು 18.52 ಲಕ್ಷ ಜನರಿಗೆ ಸರ್ಕಾರ ವಾಸ ದೃಡೀಕರಣ ಪತ್ರ ನೀಡಿದೆ.
ಇಲ್ಲಿನ 20 ಜಿಲ್ಲೆಗಳಲ್ಲಿ ಒಟ್ಟು 21.99 ಲಕ್ಷ ಜನರು ವಾಸ ದ್ರಢೀಕರಣ ಪತ್ರಕ್ಕಾಗಿ ಅರ್ಜಿ ಸಲ್ಲಿಕೆ ಮಾಡಿದ್ರು. ಇದರಲ್ಲಿ 20.87 ಲಕ್ಷ ಅರ್ಜಿಗಳು ಅಗತ್ಯ ದಾಖಲೆಗಳನ್ನು ಹೊಂದಿದ್ದವು. ಇನ್ನುಳಿದ ಅರ್ಜಿಗಳಲ್ಲಿ ಸೂಕ್ತ ದಾಖಲೆಗಳಿಲ್ಲದ ಕಾರಣ ತಿರಸ್ಕ್ರತಗೊಂಡಿವೆ.
ಈ ಪೈಕಿ 18.52 ಲಕ್ಷ ಜನರಿಗೆ ವಾಸ ದ್ರಢೀಕರಣ ಪ್ರಮಾಣ ಪತ್ರವನ್ನು ನೀಡಲಾಗಿದೆ ಎಂದು ಜಮ್ಮು ಕಾಶ್ಮೀರ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.
ಕೇಂದ್ರಾಡಳಿತ ಪ್ರದೇಶದ 20 ಜಿಲ್ಲೆಗಳ ಇನ್ನುಳಿದ ಅರ್ಜಿಗಳನ್ನು ಪರಿಶೀಲಿಸುವ ಪ್ರಕ್ರಿಯೆ ಮುಂದುವರಿದಿದೆ ಎಂದೂ ತಿಳಿಸಿದ್ದಾರೆ. ಜಮ್ಮು ಕಾಶ್ಮೀರದಲ್ಲಿ 370ನೆ ವಿಧಿಯ ರದ್ದು ಬಳಿಕ ಕಾಶ್ಮೀರದ ಜನತೆಗೆ ಸಹಾಯವಾಗಿದೆ. ಈ ವಿಧಿಯ ರದ್ದು ಬಳಿಕ ನಿವೇಶನಕ್ಕೆ ಅರ್ಜಿ ಹಾಕಿದವರಿಗೆ ಸರ್ಕಾರ ಬೆಂಬಲವಾಗಿ ನಿಂತು ನಿವೇಶನ ದ್ರಢೀಕರಣ ಪತ್ರ ನೀಡಿದೆ.