ಜಿಯೋ ಆಯ್ತು..ಈಗ ಏರ್ ಟೆಲ್ ಹಾಗೂ ವೊಡಾಫೋನ್‌ ಸರದಿ…

ನವದೆಹಲಿ.ನ,19: ಇತ್ತೀಚೆಗಷ್ಟೇ ಜಿಯೋ, ತನ್ನ ಗ್ರಾಹಕರು ಇತರೆ ನೆಟ್‌ವರ್ಕ್ಗಳಿಗೆ ಮಾಡುವ ಉಚಿತ ಕರೆಗಳನ್ನು ರದ್ದುಪಡಿಸಿ, ರೀಚಾರ್ಜ್ ಅನಿವಾರ್ಯ ಮಾಡುವ ಮೂಲಕ ಶಾಕ್‌ ನೀಡಿತ್ತು. ಜಿಯೋ ತನ್ನ ಗ್ರಾಹಕರಿಗೆ ಶಾಕ್ ಮುಟ್ಟಿಸಿರುವ ಬೆನ್ನಲ್ಲೇ ಏರ್ ಟೆಲ್ ಮತ್ತು ವೊಡಾಪೋನ್  ಸಹ ಶಾಕಿಂಗ್ ನ್ಯೂಸ್ ನೀಡಿದೆ.. ವೊಡಾಫೋನ್‌ ಐಡಿಯಾ ಹಾಗೂ ಭಾರ್ತಿ ಏರ್‌ಟೆಲ್‌ ಕಂಪನಿಗಳು ಡಿಸೆಂಬರ್‌ 1ರಿಂದ ತನ್ನ ಸೇವೆಗಳ ದರಗಳನ್ನು ಏಕಾಏಕಿ ಏರಿಕೆ ಮಾಡುವುದಾಗಿ ಘೋಷಿಸಿವೆ.


ಜುಲೈ-ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ 50,922 ಕೋಟಿ ರೂ. ನಷ್ಟ ಸಂಭವಿಸಿದ ಬೆನ್ನಲ್ಲೇ ವೊಡಾಫೋನ್‌ ಬೆಲೆ ಏರಿಕೆ ತೀರ್ಮಾನ ಪ್ರಕಟಿಸಿದೆ. ಭಾರತದಲ್ಲಿ ಮೊಬೈಲ್‌ ಡೇಟಾ ದರಗಳು ವಿಶ್ವದಲ್ಲಿಯೇ ಅಗ್ಗವಾಗಿದ್ದು, ಡಿಸೆಂಬರ್‌ 1ರಿಂದ ಕಂಪನಿ ಸೂಕ್ತ ರೀತಿಯಲ್ಲಿ ದರವನ್ನು ಏರಿಸಲಿದೆ ಎಂದು ವೊಡಾಫೋನ್‌ ಐಡಿಯಾ ತಿಳಿಸಿದೆ.

ಇನ್ನು ಈ ಬಾರಿಯ ತ್ರೈಮಾಸಿಕ ಅವಧಿಯಲ್ಲಿ 23,044 ಕೋಟಿ ನಷ್ಟ ಅನುಭವಿಸಿರುವ ಏರ್‌ಟೆಲ್‌ ಸಹ ದರ ಏರಿಕೆ ಅನಿವಾರ್ಯ ಎಂದಿದೆ. ಒಟ್ನಲ್ಲಿ ಇವೆಲ್ಲದರಿಂದ ನೇರ ಪರಿಣಾಮ ಅನುಭವಿಸುವವರು ಮಾತ್ರ ನಸಾಮಾನ್ಯರು..

Exit mobile version