ಟ್ವಿಟರ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ 60 ಮಿಲಿಯನ್‍ ಫಾಲೋವರ್ಸ್

Modi on twitter

ಸಾಮಾಜಿಕ ಜಾಲತಾಣ ಟ್ವಿಟರ್‍ನಲ್ಲಿ ಸದಾ ಸಕ್ರಿಯವಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಟ್ವಿಟರ್ ಫಾಲೋವರ್ಸ್‍ಗಳ ಸಂಖ್ಯೆ 60 ಮಿಲಿಯನ್‍ ದಾಟಿದ್ದು, ಆ ಮೂಲಕ ಜಾಗತಿಕವಾಗಿ ಹೆಚ್ಚು ಫಾಲೋವರ್ಸ್‍ಗಳನ್ನು ಹೊಂದಿರುವ 3ನೇ ವ್ಯಕ್ತಿ ಎನಿಸಿದ್ದಾರೆ. ಪ್ರತಿನಿತ್ಯವೂ ಟ್ವಿಟರ್‍ನಲ್ಲಿ ಸಕ್ರಿಯವಾಗಿರುವ ಪ್ರಧಾನಿ ನರೇಂದ್ರ ಮೋದಿ, ದೇಶದ ಜನರೊಂದಿಗೆ ಹಲವು ವಿಷಯಗಳನ್ನು ಟ್ವಿಟರ್ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ ಹೆಚ್ಚು ಫಾಲೋವರ್ಸ್ ಹೊಂದಿರುವ ಪ್ರಧಾನಿ ಮೋದಿ, ಇದೀಗ 60 ಮಿಲಿಯನ್ ಫಾಲೋವರ್ಸ್ ಹೊಂದುವ ಮೂಲಕ ಜಾಗತಿಕವಾಗಿ 3ನೇ ಸ್ಥಾನದಲ್ಲಿದ್ದಾರೆ. ಸದ್ಯ ಟ್ವಿಟರ್‍ನಲ್ಲಿ 120 ಮಿಲಿಯನ್ ಫಾಲೋವರ್ಸ್ ಹೊಂದಿರುವ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ 1ನೇ ಸ್ಥಾನದಲ್ಲಿದ್ದರೆ. ಅಮೆರಿಕಾದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 83 ಮಿಲಿಯನ್‍ಗೂ ಅಧಿಕ ಫಾಲೋವರ್ಸ್ ಹೊಂದುವ ಮೂಲಕ 2ನೇ ಸ್ಥಾನದಲ್ಲಿದ್ದಾರೆ.

Exit mobile version