ಮುಂಬೈ, ಅ. 23: ಶುಕ್ರವಾರವಾದ ಇಂದು ದಿನದ ಆರಂಭದಲ್ಲಿ ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ 11 ಪೈಸೆ ಇಳಿಕೆ ಕಂಡು 73.65ಕ್ಕೆ ವಿನಿಮಯಗೊಂಡಿದೆ. ಗುರುವಾರ ಡಾಲರ್ ಎದುರು ರೂಪಾಯಿ ಮೌಲ್ಯ 4 ಪೈಸೆ ಏರಿಕೆಯಾಗಿ 73.54ರಷ್ಟಿತ್ತು. ಇತರೆ ಕರೆನ್ಸಿಗಳ ಎದುರು ಡಾಲರ್ ಮೌಲ್ಯ 0.11ರಷ್ಟು ಏರಿಕೆಯಾಗಿ 93.05 ರಂತೆ ವಿನಿಮಯಗೊಂಡಿತ್ತು.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರ ಶೇ 0.31ರಷ್ಟು ಏರಿಕೆಯಾಗಿ ಒಂದು ಬ್ಯಾರೆಲ್ಗೆ 42.59 ಡಾಲರ್ಗೆ ಮಾರಾಟವಾಯಿತು.