ಡಿಜಿಟಲ್ ಪಾವತಿ ಮೂಲಕ ರಸಗೊಬ್ಬರ ಮಾರಾಟ

ಬೆಂಗಳೂರು, ಅ. 29: “ಕೇಂದ್ರ ಸರ್ಕಾರದಿಂದ ರಸಗೊಬ್ಬರದಲ್ಲಿ  ನೇರ ನೆರವು ವರ್ಗಾವಣೆ ಯೋಜನೆಯಡಿ ಎಲ್ಲಾ ರಸಗೊಬ್ಬರ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ರೈತರಿಗೆ ರಸಗೊಬ್ಬರವನ್ನು ಮಾರಾಟ ಮಾಡಲು ನಗದು ರಹಿತ/ಡಿಜಿಟಲ್ ಪಾವತಿ ವ್ಯವಸ್ಥೆಯನ್ನು  ಉತ್ತೇಜಿಸಲಾಗುತ್ತಿದೆ.

ರಸಗೊಬ್ಬರ ಚಿಲ್ಲರೆ ಮಾರಾಟಗಾರರು ತಮ್ಮ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ರಸಗೊಬ್ಬರಗಳ ಮಾರಾಟಕ್ಕಾಗಿ ಡಿಜಿಟಲ್ ಪಾವತಿಗಳನ್ನು ಸ್ವೀಕರಿಸುವ ವ್ಯವಸ್ಥೆಯನ್ನು ಮಾಡಲು ನಿರ್ದೇಶಿಸಲಾಗಿದೆ. ಆದ್ದರಿಂದ  ಎಲ್ಲಾ ಚಿಲ್ಲರೆ ಮಾರಾಟಗಾರರು ತಮ್ಮ ಮಳಿಗೆಗಳಲ್ಲಿ ತಪ್ಪದೇ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಕೈಗೊಂಡು  ಸಹಕರಿಸಲು ಪ್ರಕಟಣೆ ತಿಳಿಸಿದೆ.

Exit mobile version