ಡ್ರಗ್ಸ್ ಪ್ರಕರಣ: ಅನುಶ್ರೀ ನನ್ನ ಫ್ಯ್ಲಾಟ್ಗೆ ಬರುತ್ತಿದ್ದರು, ಬಂಧಿತ ಆಸ್ಕಾ ಹೇಳಿಕೆ

ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಬಂಧನಕ್ಕೆ ಒಳಗಾಗಿರುವ ಆಸ್ಕಾ, ತಮ್ಮ ಅಪಾರ್ಟ್ಮೆಂಟ್ಗೆ ಆ್ಯಂಕರ್ ಅನುಶ್ರೀ ಬರುತ್ತಿದ್ದರು ಎಂಬ ಸ್ಪೋಟಕ ಮಾಹಿತಿಯೊಂದನ್ನು ನೀಡಿದ್ದಾರೆ ಎನ್ನಲಾಗಿದೆ.

ಪ್ರರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ವಿಚಾರಣೆಯಲ್ಲಿ ಈ ಬಗ್ಗೆ ಹೇಳಿಕೆ ನೀಡಿರುವ ಆಸ್ಕಾ, ತಮಗೂ ನಿರೂಪಕಿ ಅನುಶ್ರೀ ಅವರಿಗೆ ಪರಿಚಯವಿದ್ದು, ಅವರು ತಮ್ಮ ಗ್ಲೋಬಲ್ ಅಪಾರ್ಟ್ಮೆಂಟ್ ಫ್ಲ್ಯಾಟ್ ನಂ.103ಕ್ಕೆ ಆಗಾಗ್ಗೆ ಬರುತ್ತಿದ್ದರು ಎಂಬ ಮಾಹಿತಿಯನ್ನು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.

ಆಸ್ಕಾ ನೀಡಿರುವ ಈ ಹೇಳಿಕೆ, ಇತ್ತೀಚೆಗೆ ಸಿಸಿಬಿ ತನಿಖೆ ಎದುರಿಸಿದ್ದ ನಿರೂಪಕಿ ಅನುಶ್ರೀ ಅವರಿಗೆ ಮತ್ತೆ ಕಂಟಕ ಎದುರಾಗುವ ಆತಂಕ ತಂದೊಡ್ಡಿದೆ.

Exit mobile version