ಡ್ರಗ್ಸ್ ಪ್ರಕರಣ: ಆರೋಪಿ ವಿರೇನ್ ಖನ್ನಗೆ ಪಾಲಿಗ್ರಾಫ್ ಪರೀಕ್ಷೆ

ಬೆಂಗಳೂರು, ಅ. 19: ಸ್ಯಾಂಡಲ್​ವುಡ್ ಡ್ರಗ್ಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ, ​ ಈಗಾಗಲೇ ಡ್ರಗ್ಸ್​ ಪೆಡ್ಲರ್​ಗಳ ಜೊತೆಗೆ ನಂಟು ಹೊಂದಿದ್ದ ಆರೋಪದಲ್ಲಿ ಖ್ಯಾತ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಪರಪ್ಪನ ಅಗ್ರಹಾರದಲ್ಲಿ ವಾಸಿಸುತ್ತಿದ್ದ, ಸಿಸಿಬಿ ಪೊಲೀಸರು ಈಗಾಗಲೇ ಸಾಕಷ್ಟು ಡ್ರಗ್ಸ್​ ಪೆಡ್ಲರ್​ಗಳನ್ನು ಬಂಧಿಸಿ ಪರಪ್ಪನ ಅಗ್ರಹಾರದಲ್ಲಿ ಬಂಧಿಸಿದ್ದಾರೆ.

ಇದರಲ್ಲಿ ಪ್ರಮುಖ ಪೆಡ್ಲರ್​ ವಿರೇನ್​ ಖನ್ನ ಕೂಡ ಒಬ್ಬರು. ಈಗಾಗಲೇ ಪೊಲೀಸ್​ ವಿಚಾರಣೆ ಎದುರಿಸುತ್ತಿರುವ ಆರೋಪಿ ವಿರೇನ್ ಖನ್ನ ಅಧಿಕಾರಿಗಳಗಳಿಗೆ ಸುಳ್ಳು ಮಾಹಿತಿಯನ್ನು ನೀಡುತ್ತಿದ್ದಾನೆ ಎಂಬ ಆರೋಪಿಸಲಾಗಿದೆ. ಈ ಸುಳ್ಳು ಮಾಹಿತಿಯನ್ನು ಪತ್ತೆಹಚ್ಚಲು ಪೊಲೀಸರು ಸುಳ್ಳುಪತ್ತೆ ಪಾಲಿಗ್ರಾಫ್ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಪಡ್ಲರ್​ಗಳಾದ ರವಿ ಶಂಕರ್ ಮತ್ತು ಅಶ್ವಿನ್ ಬೂಗಿ ವಿಚಾರಣೆ ಬೆನ್ನಲ್ಲೇ ವಿರೇನ್ ಖನ್ನನಿಂದ ಬಾಯ್ಬಿಡಿಸಲು ಸಿಸಿಬಿ ಅಧಿಕಾರಿಗಳು ಮುಂದಾಗಿದ್ದರು. ಆದರೆ, ಎರಡು ಬಾರಿ ಪೊಲೀಸರು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದರೂ ಸಹ ಆತ ಸರಿಯಾದ ಮಾಹಿತಿಯನ್ನು ಬಾಯಿ ಬಿಟ್ಟಿರಲಿಲ್ಲ.

ಆದ್ದರಿಂದ ಇನ್ನೆರಡು ದಿನಗಳಲ್ಲಿ ವಿರೇನ್ ಖನ್ನನನ್ನು ಬಾಡಿವಾರೆಂಟ್ ಪಡೆದು ಗುಜರಾತ್ ಅಹಮದಾಬಾದ್ ನ ಎಫ್ಎಸ್ಎಲ್‌ನಲ್ಲಿ ಸಿಸಿಬಿ ಅಧಿಕಾರಿಗಳು ಫಾಲಿಗ್ರಾಫ್ ಪರೀಕ್ಷೆ ನಡೆಸಲಿದ್ದಾರೆ ಎಂಬ ಮಾಹಿತಿ ಮಾಧ್ಯಮಗಳಿಗೆ ಲಭ್ಯವಾಗಿದೆ. ಫಾಲಿಗ್ರಾಫ್ ಪರೀಕ್ಷೆಯಿಂದ ಸುಳ್ಳು ಹೇಳಿಕೆಗಳನ್ನು ಕಂಡುಹಿಡಿಯಬಹುದು. ಮಡಿವಾಳದಲ್ಲೇ ಎಫ್ ಎಸ್ ಎಲ್ ವಿಭಾಗವಿದೆ. ಆದರೆ, ತಾಂತ್ರಿಕ ದೋಷವಿರುವ ಕಾರಣ ಅಧಿಕಾರಿಗಳು ಈ ಪರೀಕ್ಷೆಯನ್ನು ಗುಜರಾತ್​ನಲ್ಲಿ ನಡೆಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

Exit mobile version