ತುಳಸಿಯಿಂದ ಆರೋಗ್ಯ, ತುಳಸಿಯಿಂದ ಆನಂದ:

ತುಳಸಿಯಲ್ಲಿ ಎರಡು ವಿಧಗಳಿವೆ. ಒಂದು ರಾಮ ತುಳಸಿ ಇನ್ನೊಂದು  ಕಷ್ಣ ತುಳಸಿ . ರಾಮ ತುಳಸಿ ಮತ್ತು ಕ್ರಷ್ಣ ತುಳಸಿ ಇವೆರಡೂ ತದ್ವಿರುದ್ದ ಗುಣಗಳನ್ನು ಹೊಂದಿದ್ದರೂ ಉತ್ತಮ ಆರೋಗ್ಯದಲ್ಲಿ ಮಹತ್ತರ ಪಾತ್ರ ವಹಿಸಿದೆ. ರಾಮ ತುಳಸಿ ತಂಪಿನ ಗುಣವನ್ನು ಹೊಂದಿದ್ದು ಕ್ರಷ್ಣ ತುಳಸಿ ಉಷ್ಣದ ಗುಣವನ್ನು ಹೊಂದಿದೆ.

ತುಳಸಿ ಗಿಡದಲ್ಲಿ ಮಾನವನಿಗೆ ಬೇಕಾಗುವ ಔಷದೀಯ ಗುಣಗಳನ್ನು ಹೊಂದಿದ್ದು  ಎಲ್ಲಾ ಸರ್ವಗುಣ ಸಂಪನ್ನತೆಯನ್ನು ಈ ಗಿಡ ಹೊಂದಿದೆ. ದಿನಾಲು ಬೆಳಗ್ಗೆದ್ದು ತುಳಸಿ ಗಿಡದ ಬಳಿ ನಿಂತು ತುಳಸಿ ಗಿಡದ ಎಲೆಗಳಿಂದ ಬರುವ  ಗಾಳಿಯನ್ನು ತೆಗೆದುಕೊಂಡರೆ ನಮ್ಮ ಶ್ವಾಸ ಕೋಶದ ಒಳಗೆ ಎನಾದರೂ ಇನ್ ಪೆಕ್ಷನ್ ಇದ್ದರೆ ನಿವಾರಣೆಯಾಗುತ್ತದೆ ಹಾಗೂ ದೇಹಕ್ಕೆ ಬರುವ ಯಾವುದೇ ತೊಂದರೆಗಳಿದ್ದರೂ ದೂರವಾಗುತ್ತವೆ.

ಮನೆ ಸುತ್ತ ಮುತ್ತ ಯತೇಷ್ಟವಾಗಿ ಈ ಗಿಡಗಳನ್ನು ಬೆಳೆಸುವುದರಿಂದ ಸೊಳ್ಳೆಗಳ ಕಾಟವು ಕಡಿಮೆಯಾಗುತ್ತದೆ.ಯಾವುದೇ ಚರ್ಮ ರೋಗಗಳು ಹಾಗೂ ಅಲರ್ಜಿಯಂತಹ ರೋಗಗಳಿಂದ ಮುಕ್ತಿ ಹೊಂದಬಹುದಾಗಿದೆ. ಚರ್ಮರೋಗಗಳು ಇದ್ದಲ್ಲಿ ತುಳಸಿ ರಸಕ್ಕೆ ಲಿಂಬು ರಸವನ್ನುಹಾಗೂ ಅರಿಶಿನ ಪುಡಿಯ ಮಿಶ್ರಣವನ್ನು ಮಾಡಿಕೊಂಡು ಹಚ್ಚಿದರೆ ಗುಣಮುಖವಾಗುತ್ತದೆ. ಇನ್ನು ತುಳಸಿ ರಸಕ್ಕೆ ಜೇನು ತುಪ್ಪವನ್ನು ಬೆರೆಸಿ ದಿನಕ್ಕೆರಡು ಬಾರಿ ಕುಡಿಯುವುದರಿಂದ ಕೆಮ್ಮು ನೆಗಡಿಯಂತಹ ಕಾಯಿಲೆಗಳು ದೂರವಾಗುತ್ತವೆ ಮಾತ್ರವಲ್ಲ ಕುಷ್ಠರೋಗ ನಿವಾರಣೆಗೂ ಇದನ್ನು ಪ್ರತೀ ದಿನ ತೆಗೆದು ಕೊಂಡರೆ ಗುಣಪಡಿಸಲಾಗುತ್ತದೆ.

ಹೊಟ್ಟೆಯಲ್ಲಿ ಅಜೀರ್ಣವಾದಾಗಲೂ ತುಳಸಿ ಎಲೆಗಳ ಜೊತೆ ಸ್ವಲ್ಪ ಕಾಳುಮೆಣಸನ್ನು ಹಾಗೂ ಏಲಕ್ಕಿಯನ್ನೂ ಮಿಕ್ಸ್ ಮಾಡಿಕೊಂಡು ಜಜ್ಜಿ ರಸ ತೆಗೆದು ಕುಡಿದರೆ ಅಜೀರ್ಣವು ದೂರವಾಗಿ ಹೊಟ್ಟೆ ಹಗುರವಾಗಿ ಹಸಿವು ಪ್ರಾರಂಭವಾಗುತ್ತದೆ.ಒಂದು ಚಮಚ ಜೇನು ತುಪ್ಪದೊಂದಿಗೆ ತುಳಸಿ ರಸವನ್ನು ಸೇವಿಸುತ್ತಾ ಬಂದರೆ ಗಂಟಲು ನೋವಿನ ಸಮಸ್ಯೆಯು ಪರಿಹಾರವಾಗುತ್ತದೆ. ಹಲ್ಲು ನೋವಿನ ಸಮಸ್ಯಗೂ ಇದು ಪರಿಹಾರ ನೀಡುತ್ತದೆ. ಹಲ್ಲು ನೋವಾಗುತ್ತದ್ದರೆ, ತುಳಸಿ ಎಲೆ ಮತ್ತು ಉಪ್ಪನ್ನು ಸೇರಿಸಿ ಜಜ್ಜಿ ಹಲ್ಲಿನ ಬದಿಯಲ್ಲಿಟ್ಟುಕೊಂಡರೆ ನೋವು ಉಪಶಮನವಾಗುತ್ತದೆ.

ಹೀಗೆ ತುಳಸಿ ಬಹೂಪಯೋಗಿ ಗಿಡವಾಗಿದ್ದು ನಮ್ಮ ನಿತ್ಯ ಜೀವನಕ್ಕೆ ಬಹಳ ಪರಿಣಾಮಕಾರಿಯಾಗಿದೆ. ಈ ಎಲೆಯ ಗಾಳಿಯನ್ನು ಉಸಿರಾಡುವುದರಿಂದ ಕ್ಯಾನ್ಸರ್ ನಂತಹ ರೋಗಾಣುಗಳೂ ದೇಹದೊಳಗೆ ಹೋಗದಂತೆ ತಡೆಯುತ್ತವೆಂದು ಹೇಳಲಾಗುತ್ತದೆ. ಇನ್ನು ದೇಹದ ತೂಕ ಇಳಿಸಿಕೊಳ್ಳುವಲ್ಲೂ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಮಜ್ಜಿಗೆಯೊಂದಿಗೆ ಸ್ವಲ್ಪ ತುಳಸಿ ಎಲೆಗಳನ್ನು ಸೇರಿಸಿ ಕುಡಿಯುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು. ತುಳಸಿ ಗಿಡದಿಂದ ಹಲವಾರು ಔಷದೀಯ ಗುಣಗಳು ನಮಗೆ ಸಿಗುತ್ತವೆ.

ಮನೆಯ ಮುಂದೆ ತುಳಸಿ ಗಡವಿದ್ದರೆ ಮನೆಗೂ ಲಕ್ಷಣ ನಮ್ಮ ಮನಸಿಗೂ ಆನಂದ ಬೆಳಗ್ಗೆದ್ದು ನಾವು ಮನೆಯಿಂದ ಹೊರಗೆ ಬರುವಾಗ ಮೊದಲು ನೋಡುವುದೇ ತುಳಸಿ ಕಟ್ಟೆಯಲ್ಲಿರುವ ತುಳಸಿ ಗಿಡವನ್ನು. ಇದೊಂದು ದೈವಾಂಶ ಗಿಡವೂ ಹೌದು. ಆದ್ದರಿಂದ ಆದಷ್ಟು ತುಳಸಿ ಬೆಳೆಸಿ. ಆರೋಗ್ಯ ಉಳಿಸಿ.

Exit mobile version