ತೃತೀಯ ಟೆಸ್ಟ್: ಕುತೂಹಲ ಘಟ್ಟದಲ್ಲಿ ಪಂದ್ಯ

ಸಿಡ್ನಿ, ಜ. 11: ಅತಿಥೇಯ ಆಸ್ಟ್ರೇಲಿಯಾ ಹಾಗೂ ಪ್ರವಾಸಿ ಭಾರತ ನಡುವಿನ 3ನೇ ಟೆಸ್ಟ್ ಪಂದ್ಯ ಕುತೂಹಲ ಘಟ್ಟ ತಲುಪಿದ್ದು 5ನೇ ದಿನದಾಟದ ಎಲ್ಲರ ಚಿತ್ತ ಮೂಡಿದೆ.

ಸಿಡ್ನಿ ಅಂಗಳದಲ್ಲಿ ನಡೆಯುತ್ತಿರುವ ಬಾರ್ಡರ್- ಗವಾಸ್ಕರ್ ಟ್ರೋಫಿಯ 3ನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 98 ರನ್‌ಗಳಿಸಿರುವ ಭಾರತದ ಗೆಲುವಿಗೆ 309 ರನ್‌ಗಳಿಸಬೇಕಿದೆ. ದ್ವಿತೀಯ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾಕ್ಕೆ ರೋಹಿತ್ ಶರ್ಮಾ(52) ಹಾಗೂ ಶುಭ್ಮನ್ ಗಿಲ್(31) ಉತ್ತಮ ಆರಂಭ ಒದಗಿಸಿದರು. ಇವರಿಬ್ಬರ ‌ವಿಕೆಟ್ ಪತನದ ನಂತರ ಬಂದ
ಪೂಜಾರ(9) ಹಾಗೂ ರಹಾನೆ(4) ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಇದಕ್ಕೂ ಮೊದಲು ದ್ವಿತೀಯ ಇನ್ನಿಂಗ್ಸ್ ನಲ್ಲಿ ಆಸೀಸ್ ತಂಡ ಆರು ವಿಕೆಟ್ ನಷ್ಟಕ್ಕೆ 312 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್ ಮತ್ತು ಗ್ರೀನ್ ಅರ್ಧಶತಕ ಸಿಡಿಸಿ ಮಿಂಚಿದರು. ಲಬುಶೇನ್ 73 ರನ್ ಗಳಿಸಿದರೆ, ಸ್ಮಿತ್ 81 ರನ್ ಗಳಿಸಿದರು. ವೇಗವಾಗಿ ಬ್ಯಾಟ್ ಬೀಸಿದ ಗ್ರೀನ್ ನಾಲ್ಕು ಸಿಕ್ಸರ್ ನೆರವಿನಿಂದ 84 ರನ್ ಗಳಿಸಿದರು. ನಾಯಕ ಪೇನ್ ಅಜೇಯ 39 ರನ್ ಗಳಸಿದರು. ಗ್ರೀನ್ ಔಟಾಗುತ್ತಿದ್ದಂತೆ ಆಸೀಸ್ ಡಿಕ್ಲೇರ್ ಮಾಡಿಕೊಂಡಿತು.

Exit mobile version