ಧರ್ಮಪುರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ದುಸ್ಥಿತಿ

No doctor, no medicine, it is Hassana govt hospital fate |  ಹಾಸನ ಆಸ್ಪತ್ರೆ | citizen journalist

ನಮ್ಮ ರಾಜ್ಯದ ಕೆಲ ಆರೋಗ್ಯ ಕೇಂದ್ರಗಳು ಅನಾರೋಗ್ಯ ಕೇಂದ್ರಗಳಾಗಿವೆ. ಅವು ಜನರ ಆರೋಗ್ಯ ರಕ್ಷಣೆ ಮಾಡೋ ಬದಲು ಜನರ ಪ್ರಾಣ ಹಿಂಡೋ ಕೇಂದ್ರಗಳಾಗಿವೆ. ಇದಕ್ಕೆ ಸ್ಪಷ್ಟ ಉದಾಹರಣೆ ಹಾಸನ ಜಿಲ್ಲೆಯ  ಧರ್ಮಪುರಿ ಗ್ರಾಮದಲ್ಲಿರೋ ಸರ್ಕಾರಿ ಆರೋಗ್ಯ ಕೇಂದ್ರ. ಅಲ್ಲಿ ಬಡ ಜನರು ಯಾವ ರೀತಿ ಸಮಸ್ಯೆ ಎದುರಿಸುತ್ತಿದ್ದಾರೆ ಅನ್ನೋದನ್ನು ಸಿಟಿಜನ್ ಜರ್ನಲಿಸ್ಟ್‌ ಗಣೇಶ್ ಸ್ನೇಹ ಜೀವಿ ವರದಿ ಮಾಡಿದ್ದಾರೆ ನೋಡೋಣ ಬನ್ನಿ ಇದು ಹಾಸನ ಜಿಲ್ಲೆಯ ಮಾಲೂರು ತಾಲೂಕಿನ ಚಿಕ್ಕ ಹಳ್ಳಿಯಾದ ಧರ್ಮಪುರಿ ಗ್ರಾಮದ ಸಮಸ್ಯೆ ಸರ್ಕಾರಿ ಆರೋಗ್ಯ ಕೇಂದ್ರ. ಇದು ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಆದ್ರೆ ಇಲ್ಲಿ ರೋಗಿಗಳಿಗೆ ಚಿಕಿತ್ಸೆ ಕೊಡಲು ಡಾಕ್ಟರೂ ಇಲ್ಲ ನರ್ಸ್‌ಗಳೂ ಇಲ್ಲ. ಆಸ್ಪತ್ರೆ ಸಿಬ್ಬಂದಿಯಂತೂ ಇಲ್ಲವೇ ಇಲ್ಲ.

 ಧರ್ಮಪುರಿ ಗ್ರಾಮದಲ್ಲಿ ನೂರಾರು ಕುಟುಂಬಗಳು ವಾಸ ಇವೆ. ಇಲ್ಲಿನ ಜನರಿಗೆ ಸಣ್ಣ ಪುಟ್ಟ ಕಾಯಿಲೆಗಳು ಬಂದ್ರೂ ದೂರದ ಊರಿಗೆ ಹೋಗಬೇಕು. ಇನ್ನು ದೊಡ್ಡ ದೊಡ್ಡ ಕಾಯಿಲೆ ಅಥವಾ ಅಪಘಾತಗಳಾದ್ರೆ ಸಾವೇ ಗತಿ. ಊರಿನ ಪಕ್ಕದಲ್ಲೇ ಆಸ್ಪತ್ರೆ ಇದ್ದರೂ ಜನರಿಗೆ ಪ್ರಯೋಜನವಿಲ್ಲದೆ ಪಾಳುಬಿದ್ದಿದೆ.  ಹೇಮಾವತಿ ಜಲಾಶಯದ ಹಿನ್ನೀರಿನಿಂದ ಮುಳುಗಡೆಗೊಂಡಂತಹ ಊರಿನ ಜನರಿಗೆ ಧರ್ಮಪುರಿ ಗ್ರಾಮವನ್ನು ಸರಕಾರವೇ  ರಚಿಸಿತ್ತು. ಆದ್ರೆ ದುರಂತ ನೋಡಿ, ಪುನರ್ವಸತಿ ನಡೆದು 10 ವರ್ಷ ಕಳೆದ್ರೂ ಇಲ್ಲಿನ ಜನರಿಗೆ ಇವತ್ತಿಗೂ ಸರ್ಕಾರ ಮೂಲಭೂತ ಸೌಕರ್ಯ ನೀಡದೆ ಸತಾಯಿಸುತ್ತಿದೆ. ಅದ್ರಲ್ಲೂ ಒಂದು ಪುಟ್ಟ ಆರೋಗ್ಯ ಕೇಂದ್ರವನ್ನೂ ಸಮರ್ಪಕವಾಗಿ ನಿಭಾಯಿಸದೆ ಜನರ ಜೀವದ ಜೊತೆ ಚಲ್ಲಾಟ ಆಡುತ್ತಿದೆ.  ಧರ್ಮಪುರಿ ನಿವಾಸಿಗಳು ಆಸ್ಪತ್ರೆಗೆ ವೈದ್ಯರನ್ನು ಕಲ್ಪಿಸಲು ಅನೇಕ ಬಾರಿ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಆದ್ರೆ ಯಾರೂ ಇವರ ದೂರನ್ನು ಕೇಳಿಸಿಕೊಳ್ಳುತ್ತಿಲ್ಲ. ಜನರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ.

 ಈ ಆಸ್ಪತ್ರೆಯ ಕಟ್ಟಡ ಸುಭದ್ರವಾಗಿದೆ. ಅಲ್ಲದೆ ಇಲ್ಲಿ ಸಿಬ್ಭಂದಿಗೆ ವಾಸಿಸಲು ಸೌಲಭ್ಯವೂ ಇದೆ. ಆದ್ರೆ  ಇಲ್ಲಿಗೆ ಯಾರೂ ಡಾಕ್ಟರ್ ಅಥವಾ ನರ್ಸ್ ಗಳು ಬರದೆ ಪಾಳು ಬಿದ್ದಿದೆ.ಸುತ್ತ ಮುತ್ತೆಲ್ಲಾ ಹುಲ್ಲು ಬೆಳೆದು ಹಾವುಗಳು ವಾಸ ಮಾಡುವ ತಾಣವಾಗಿದೆ. ಜನಪ್ರತಿನಿಧಿಗಳು  ಅಧಿಕಾರಿಗಳು ಕೇವಲ ಓಟು ಕೇಳಲು ಮಾತ್ರ ಬರುತ್ತಾರೆ, ಹೊರತು ಜನರ ಯಾವುದೇ  ಕಷ್ಟಗಳನ್ನು ಆಲಿಸುತ್ತಿಲ್ಲ ಧರ್ಮಪುರಿ ಊರು ಎಂಬುದು ಇದೆಯೋ ಇಲ್ವೋ ಅವರಿಗೆ ಗೊತ್ತಿಲ್ಲ. ಓಟು ಪಡೆದು ಹೋದರೆ  ಮತ್ತೆ ಈ ಕಡೆ ತಿರುಗಿ ನೋಡುವುದಿಲ್ಲ ಅಂತಾರೆ ಊರಿನ ಮಂದಿ.  ಧರ್ಮಪುರಿ ಗ್ರಾಮದ ಈ ಸರ್ಕಾರಿ ಆಸ್ಪತ್ರೆ ನರ್ಸ್ ಗಳು ಡಾಕ್ಟರ್ ಗಳನ್ನು ನೇಮಿಸಿದ್ರೆ ಇಲ್ಲಿನ 10 ಗ್ರಾಮಗಳಿಗೆ ಉಪಯೋಗವಿದೆ. ಬಸ್ ಸಂಖ್ಯೆಗಳೂ ಈ ಪ್ರದೇಶದಲ್ಲಿ ಕಡಿಮೆ ಇರೋದ್ರಿಂದ ದೂರ ಹೋಗುವುದು ಕಷ್ಟಸಾದ್ಯ. ಆದ್ದರಿಂದ ಈ ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯ ಗಳನ್ನು ಒದಗಿಸಿದ್ರೆ ಜನ ಸಾಮಾನ್ಯರಿಗೆ ಅನುಕೂಲವಾಗಲಿದೆ.ನೋಡಿದಿರಲ್ಲ ಹಾಸನ ಜಿಲ್ಲೆಯ ಧರ್ಮಪುರಿ ಗ್ರಾಮದ ಜನರ ಸಮಸ್ಯೆಗಳನ್ನು.  ಇನ್ನಾದರೂ ಅಲ್ಲಿನ ಜನರ ಬೇಡಿಕೆಗಳು ಈಡೇರಲಿ. ಆಸ್ಪತ್ರೆಗೆ ಡಾ , ನರ್ಸ್ ಗಳು ನೇಮಕವಾಗಲಿ, ಅಧಿಕಾರಿಗಳು ಇತ್ತ ಗಮನ ಹರಿಸಲಿ ಎಂಬುದು ವಿಜಯಾಟೈಮ್ಸ್ ಆಶಯವಾಗಿದೆ.

Exit mobile version