ಧುರ್ಯೋಧನನಾಗಿ ಎಂಟ್ರಿ ಕೊಟ್ಟ ಗಣಪತಿ ಬಪ್ಪ..

ಗಣೇಶ ಚತುರ್ಥಿ ಹಬ್ಬಕ್ಕೆ ಉಳಿದಿರುವುದಿನ್ನು ಬೆರಳೆಣಿಕೆಯಷ್ಟು ದಿನಗಳು ಮಾತ್ರ..ಅದಾಗಲೇ ಮಾರುಕಟ್ಟೆಯ ತುಂಬಾ ಭಿನ್ನ ವಿಭಿನ್ನ ಬಗೆಯ ಗಣೇಶನ ಮೂರ್ತಿಗಳು ಬಂದಿದ್ದು ಎಲ್ಲರ ಚಿತ್ತವನ್ನು ತನ್ನತ್ತ ಸೆಳೆಯುತ್ತಿದೆ..ಗಣೇಶ ಹಬ್ಬದ ವಿಶೇಷತೆ ಎಂದರೆ ಪ್ರತಿ ಬಾರಿಯೂ ಒಂದಿಲ್ಲೊಂದು ವಿಭಿನ್ನ ಗಣೇಶನ ಮೂರ್ತಿಗಳು ಮಾರುಕಟ್ಟೆಯಲ್ಲಿ ಕಾಣಸಿಗೋದು..
ಹೌದು..ಈ ಬಾರಿಯ ವಿಶೇಷ ಗಣಪ ಹೇಗಿದ್ದಾನೆ ಗೊತ್ತಾ.? ಸ್ಯಾಂಡಲ್ ವುಡ್‍ನಲ್ಲಿ ಹವಾ ಹೆಚ್ಚಿಸಿಕೊಂಡಿರುವ ಕುರುಕ್ಷೇತ್ರ ಸಿನಿಮಾದ ದುರ್ಯೋಧನ ಪಾತ್ರಧಾರಿಯಂತಿರುವ ಗಣೇಶ ಸದ್ಯ ಡಿ ಬಾಸ್ ಅಭಿಮಾನಿಗಳಿಗೆ ಮೆಚ್ಚುಗೆ ಗಳಿಸಿದೆ.

ಕುರುಕ್ಷೇತ್ರ ಚಿತ್ರದಲ್ಲಿ ದರ್ಶನ್ (ದುರ್ಯೋಧನ) ಕುಳಿತಿರುವ ಸ್ಟೈಲ್ ನಲ್ಲಿ ದುರ್ಯೋಧನ ಗಣೇಶವನ್ನ ಕೂಡ ಡಿಸೈನ್ ಮಾಡಲಾಗಿದೆ. ಸಿಂಹಾಸನದ ಮೇಲೆ ದುರ್ಯೋಧನ ಗಣೇಶ ಕೂತಿದ್ದು, ಕೈಯಲ್ಲಿ ಗದೆ ಹಿಡಿದುಕೊಂಡಿವರುವಂತೆ ತಯಾರು ಮಾಡಲಾಗಿದೆ. ಬಹುಶಃ ಈ ಬಾರಿಯ ಗಣೇಶ ಉತ್ಸವದಲ್ಲಿ ದುರ್ಯೋಧನ ಗಣೇಶ ಪ್ರಮುಖ ಆಕರ್ಷಣೆಯಾಗಬಹುದು. ದುರ್ಯೋಧನ ಗಣೇಶನಂತೆ ಈಗಾಗಲೇ ಪೈಲ್ವಾನ್ ಗಣೇಶ ಕೂಡ ಮಾರುಕಟ್ಟೆಗೆ ಬಂದಿದೆ. ಜೊತೆಗೆ ಕೆಜಿಎಫ್ ಶೈಲಿಯ ಗಣೇಶ ಕೂಡ ತಯಾರಾಗಿದೆ.

Exit mobile version