ನಾನ್ಯಾಕೆ ಡಿಸಿಎಂ ಆಗಲಿ ? ಅದು ಸಾಂವಿಧಾನಿಕ ಹುದ್ದೆಯಲ್ಲ; ಜಗದೀಶ್ ಶೆಟ್ಟರ್

ಬೆಂಗಳೂರು, ಆಗಸ್ಟ್ 27: ಬಿಜೆಪಿಯಲ್ಲಿ ಈಗ ಎಲ್ಲೆಡೆ ಗೊಂಡಲದ ವಾತಾವರಣ..ಖಾತೆ ಹಂಚಿಕೆ ವಿಚಾರವಾಗಿ ಎಲ್ಲರಲ್ಲೂ ಅಸಮಾಧಾನ.. ಒಂದೆಡೆ ಸಿಟಿ ರವಿ, ಆರ್‌ ಅಶೋಕ್, ವಿ ಸೋಮಣ್ಣ ಖಾತೆ ಹಂಚಿಕೆ ಕುರಿತು ಅಸಮಾಧಾನ ಹೊರಹಾಕುತ್ತಿದ್ದದೆ ಇನ್ನೊಂದೆಡೆ ಶ್ರೀರಾಮುಲು, ಈಶ್ವರಪ್ಪ ಬೆಂಬಲಿಗರು ಕೂಡ ತಮ್ಮ ಅಸಮಾಧಾನ ತೋರ್ಪಡಿಸುತ್ತಿದ್ದಾರೆ.

ಇತ್ತ ಮಾಜಿ ಸಿಎಂ ಜಗದೀಶ್ ಶೆಟ್ಟರ್ ರವರು ಖಾತೆ ಹಂಚಿಕೆ ವಿಚಾಋವಾಗಿ ತಮ್ಮ ಅಸಮಾಧಾನವನ್ನು ತೋರಿಸಿಕೊಂಡಿದ್ದಾರೆ. ನೀವು ಡಿಸಿಎಂ ಹುದ್ದೆ ಅಕಾಂಕ್ಷಿಯೇ ಎಂಬ ಮಾಧ್ಯಮ ಮಿತ್ರರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಶೆಟ್ಟರ್ ರವರು ನಾನ್ಯಾಕೆ ಡಿಸಿಎಂ ಆಗಲಿ…? ನಿಜ ಹೇಳಬೇಕೆಂದರೆ ಡಿಸಿಎಂ ಹುದ್ದೆ ಸಂವಿಧಾನ ಬದ್ಧ ಹುದ್ದೆಯೇ ಅಲ್ಲ.. ಸಿಎಂ ಹಾಗೂ ಸದಸ್ಯರ ಹುದ್ದೆ ಮಾತ್ರ ಸಾಂವಿಧಾನಿಕವಾದುದು. ಅಲ್ಲದೆ ನಾಣು ಈ ಮೊದಲೇ ಮುಖ್ಯಮಂತ್ರಿಯಾದವನು..ಒಮ್ಮೆ ಮುಖ್ಯಮಂತ್ರಿಯಾದವನು ಮತ್ತೆ ಡಿಸಿಎಂ ಆಗಬಾರದು ಎಂಬುದಾಗಿ ತಮ್ಮ ಇರಿಸುಮುರಿಸನ್ನು ತೋರ್ಪಡಿಸಿಕೊಂಡಿದ್ದಾರೆ.

Exit mobile version