ನಿಗೂಢ ರೀತಿಯಲ್ಲಿ ಆಫ್ರಿಕಾದ 350 ಆನೆಗಳ ಸಾವು

ನಿಗೂಢ ರೀತಿಯಲ್ಲಿ ಬೋಟ್ಸ್ಟಾನಾದ ಉತ್ತರ ಒಕಾವಾಂಗೋದ ಭಾಗದ ವಾಯುವ್ಯ ಪ್ರದೇಶದಲ್ಲು ನೂರಾರು ಆನೆಗಳ ಶವಪತ್ತೆಯಾಗಿದೆ.
ಸುಮಾರು 350 ಕ್ಕು ಹೆZಮನÀ್ಚು ಆನೆಗಳು ಸಾವನ್ನಪ್ಪಿದ್ದು ಆನೆಗಳ ದೇಹದಲ್ಲಿ ಯಾವುದೇ ಗಾಯದ ಗುರುತಾಗಲಿ ಇಲ್ಲ. ಜತೆಗ ಇದು ಬೇಟೆಗಾರರ ಕೆಲಸವೂ ಕೂಡ ಅಲ್ಲ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಈ ಬಗ್ಗೆ ವಿಜ್ಞಾನಿಗಳು, ಸಂಶೋಧಕರು ಆನೆಗಳ ಸಾವಿನ ಕಾರಣವನ್ನು ಪತ್ತೆಹಚ್ಚುತ್ತಿದ್ದಾರೆ.


ಮೇ ತಿಂಗಳಿನಿಂದ ಇಲ್ಲಿಯವರೆಗೆ ಆನೆಗಳ ಶವ ನೀರಿನ ಹೊಂಡಗಳ ಬಳಿಕಂಡು ಬಂದಿದೆ. ಆದ್ದರಿಂದ ನೀರುಕುಡಿಯಲು ಬಂದು ಕಾಲು ಜಾರಿ ಬಿದ್ದು ಸತ್ತಿರಬೇಕು ಎಂಬ ಶಂಕೆ ಇದೆ. ಆದರೆ ಸದ್ಯಕ್ಕೆ ನೀರಿಗಾಗಿ ಅಲೆದಾಡುವಷ್ಟು ಬರಗಾಲ ಇನ್ನು ಪ್ರದೇಶದಲ್ಲಿ ಬಂದಿಲ್ಲ.
ಇನ್ನು ಕರೋನಾ ವೈರಸ್ ಸೋಂಕಿನ ಭೀತಿ ಇರುವುದರಿಂದ ಮಾನವರ ವಸಾಹತುಗಳಿಗೆ ಹೊಂದಿಕೊಂಡಂತೆ ಇರುವ ರಕ್ಷಿತಾರಣ್ಯಗಳಲ್ಲಿ ಈ ರೀತಿ ಸರಣಿ ಸಾವು ಸಂಭವಿಸಿದರೆ ಮೊದಲು ಸಾಂಕ್ರಾಮಿಕ ರೋಗಗಳ ಭೀತಿ ಉಂಟಾಗುತ್ತದೆ ಇದರಿಂದಾಗಿ ತನಿಖೆ ನಡೆಸಲಾಗುತ್ತಿದೆ.
ಆನೆಗಳ ಮೃತ ದೇಹದಲ್ಲಿ ವಿಷದ ಅಂಶ ಇದೆಯೇ ಎಂದು ಪರೀಕ್ಷೆ ಮಾಡಲಾಗುತ್ತಿದೆ. ಆದರೆ ವಿಜ್ಞಾನಿಗಳು ಆನೆಗಳ ಮರಣೋತ್ತರ ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸಿಲ್ಲ ಎಂದು ವಿಜ್ಞಾನಿಗಳು ಆರೋಪಿಸಿದ್ದಾರೆ.

Exit mobile version