ಸೈನಿಕರೊಂದಿಗೆ ಜಮ್ಮು ಮತ್ತು ಕಾಶ್ಮೀರದ ನೌಶೇರಾದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ದೀಪಾವಳಿ

ಭಾರತದ ಪ್ರಧಾನ ಶ್ರೀ ನರೇಂದ್ರ ಮೋದಿಯವರು ಇಂದು ಬೆಳಿಗ್ಗೆಜಮ್ಮು ಮತ್ತು ಕಾಶ್ಮೀರದ ಜಮ್ಮು ರಜೌರಿ ಜಿಲ್ಲೆ (ನೌಶೇರಾ)ದಲ್ಲಿ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿದರು.

ನೌಶೇರಾದಲ್ಲಿ ಮೋದಿಯವರು ಹುತಾತ್ಮ ಯೋಧರಿಗೆ ನಮನ ಸಲ್ಲಿಸಿ,ಪ್ರತಿ ವರ್ಷದಂತೆ ಈ ವರ್ಷ ಕೂಡ ಸೈನಿಕರೊಂದಿಗೆ ಹಬ್ಬವನ್ನು ಆಚರಿಸಿದರು.ಈ ಸಮದರ್ಭದಲ್ಲಿ ಮಾತನಾಡಿದ ಅವರು ಸೈನಿಕರು ನಮ್ಮ ಭಾರತ ಮಾತೆಯ  ರಕ್ಷಣಾ ಕವಚ ,ನಿಮ್ಮಿಂದಲೇ ಇವತ್ತು ನಮ್ಮ ದೇಶದ ಜನರು ನೆಮ್ಮದಿಯಿಂದ ನಿದ್ರಿಸುವಂತಾಗಿದೆ ಎಂದು ಹೇಳಿದರು.

ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು ಇವತ್ತು ನಾನೊಬ್ಬನೇ ಬಂದಿಲ್ಲ,130 ಕೋಟಿ ಜನರ ಆಶೀರ್ವಾದವನ್ನು ತಂದಿದ್ದೇನೆ ಎಂದು ಹೇಳಿದರು.

Exit mobile version