ಪಿಂಚಣಿದಾರರಿಗೆ ಅಂಚೆ ಇಲಾಖೆಯಿಂದ ಗುಡ್‌ ನ್ಯೂಸ್‌

ನವದೆಹಲಿ, ನ. 12: ಇತ್ತೀಚೆಗೆ ವಯಸ್ಸಾದವರು ತಮ್ಮ ಪಿಂಚಣಿ ಹಣಕ್ಕಾಗಿ ಬ್ಯಾಂಕ್‌ಗಳಿಗೆ ಪೋಸ್ಟ್‌ ಆಫೀಸ್‌ಗಳಿಗೆ ಅಲೆಯುವುದು ಸಾಮಾನ್ಯವಾಗಿದೆ. ಇದೀಗ ಪಿಂಚಣಿ ಪಡೆಯುವ ಹಿರಿಯ ನಾಗರಿಕರಿಗೆ ಅಂಚೆ ಇಲಾಖೆ ಡಿಜಿಟಲ್ ಜೀವನ ಪ್ರಮಾಣ ಪತ್ರ ಸೇವೆಯನ್ನು ಸರಕಾರ ಪ್ರಾರಂಭಿಸಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಪಿಂಚಣಿ ಪಡೆಯುವ ಹಿರಿಯ ನಾಗರಿಕರಿಗೆ ಈ ಸೇವೆಯನ್ನು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಸಹಯೋಗದಲ್ಲಿ ಅಂಚೆ ಇಲಾಖೆ ಈ ಸೇವೆಯನ್ನು ಪ್ರಾರಂಭಿಸಿದೆ. ಈ ಸೇವೆಯ ಮೂಲಕ ಹಿರಿಯ ನಾಗರಿಕರು ಸುಲಭವಾಗಿ, ಪಿಂಚಣಿ ಬಿಡುಗಡೆ ಮಾಡುವ ಏಜೆನ್ಸಿಯ ಕಚೇರಿಗೆ ಹೋಗದೇ ಜೀವಂತ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡಬಹುದಾಗಿದೆ.

ಕೇಂದ್ರ ಸರ್ಕಾರ/ರಾಜ್ಯ ಸರ್ಕಾರಿ/ ಪಿಎಸ್ ಯು/ ಪಿಎಸ್ ಬಿ ಹಾಗೂ ಇತರೆ ಸರ್ಕಾರಿ ಕಚೇರಿಗಳ ನಿವೃತ್ತ ನೌಕರರಿಗೆ ಈ ಸೇವೆಯಿಂದ ಅನುಕೂಲವಾಗಲಿದೆ.

ಸ್ಥಳೀಯ ಅಂಚೆಕಚೇರಿ, ಅಂಚೆ ಕಚೇರಿಯಿಂದ ಲಭ್ಯವಿರುವ ಮನೆಬಾಗಿಲಿಗೇ ಬರುವೆ ಬ್ಯಾಂಕಿಂಗ್ ಸೇವೆಗಳು, ಪೋಸ್ಟ್ ಮೆನ್/ ಗ್ರಾಮೀಣ ಅಂಚೆ ಸೇವಕರ (ಗ್ರಾಮೀಣ್‌ ಡಾಕ್‌ ಸೇವಕ್) ಗಳಿಂದ ಜೀವಂತ ಪ್ರಮಾಣಪತ್ರವನ್ನು ಪಡೆದುಕೊಳ್ಳಬಹುದಾಗಿದೆ.

ಇದಕ್ಕಾಗಿ http://ccc.cept.gov.in/covid/request.aspx ಲಿಂಕನ್ನು ಕ್ಲಿಕ್ ಮಾಡಿ, ‘ಸೆಲೆಕ್ಟ್ ಸರ್ವೀಸ್’ ಟ್ಯಾಬ್ನಲ್ಲಿ ‘IPPB’ ಆಯ್ಕೆ ಮಾಡಿ. ಅದರಲ್ಲಿ ‘IPPB Service type’ನಲ್ಲಿ ಜೀವನ ಪ್ರಮಾಣ ಆಯ್ಕೆಯನ್ನು ಸಲ್ಲಿಸಿ.

ಡಿಜಿಟಲ್ ಜೀವನ ಪ್ರಮಾಣ ಪತ್ರವನ್ನು ಪಡೆದುಕೊಳ್ಳಲು ಪಿಂಚಣಿದಾರರು ತಮ್ಮ ಪ್ರದೇಶದ ಸ್ಥಳೀಯ ಅಂಚೆ ಸೇವಕರನ್ನು ಸಂಪರ್ಕಿಸಬಹುದಾಗಿದೆ ಅಥವಾ ಪೋಸ್ಟ್ ಇನ್ಫೋ ಆಪ್ ಮೂಲಕ ತಮ್ಮ ಬೇಡಿಕೆಯನ್ನು ನೋಂದಾಯಿಸಬಹುದಾಗಿದೆ.

ಈ ಪ್ರಕ್ರಿಯೆಗಾಗಿ ಪಿಂಚಣಿದಾರರು ತಮ್ಮ ಆಧಾರ್, ಮೊಬೈಲ್ ನಂಬರ್, ಪಿಂಚಣಿ ವಿವರಗಳನ್ನು ನೀಡಬೇಕಾಗುತ್ತದೆ. ಮನೆ ಬಳಿಯೇ ಡಿಜಿಟಲ್ ಜೀವನ ಪ್ರಮಾಣ ಪತ್ರಗಳ ವ್ಯವಸ್ಥೆ ಮಾಡಲು 70 ರೂಪಾಯಿಗಳ ಶುಲ್ಕ ವಿಧಿಸಲಾಗುತ್ತದೆ.

Exit mobile version