ಪ್ರಧಾನಿಯಿಂದ ‘ಆರೋಗ್ಯ ವನ’ ಉದ್ಘಾಟನೆ

ಅಹಮದಾಬಾದ್, ಅ. 30: ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ಗೆ ಬೇಟಿ ನೀಡಿದ್ದು ನರ್ಮದಾ ಜಿಲ್ಲೆಯ ಕೆವಾಡಿಯಾದಲ್ಲಿ ಆರೋಗ್ಯವನ ಉದ್ಘಾಟನೆ ಮಾಡಿದ್ದು ಕೆವಾಡಿಯಾ ಮತ್ತು ಅಹಮದಾಬಾದ್ ನಡುವೆ ಸೀಪ್ಲೇನ್ ಸೇವೆ ಕೆಲವು ಯೋಜನೆಗಳನ್ನು ಆರಂಭಿಸಲು ನಿರ್ಧಾರ ಮಾಡಿದ್ದಾರೆ.

ನೂರಾರು ಬಗೆಯ ಔಷಧೀಯ ಸಸ್ಯಗಳು ಹಾಗೂ ಗಿಡಮೂಲಿಕೆಗಳನ್ನು ಹೊಂದಿರುವ ‘ಆರೋಗ್ಯವನ್’ ಅನ್ನು ಉದ್ಘಾಟಿಸಿ ಅದರ ಬಳಕೆ ಮತ್ತು ಮಹತ್ವದ ಬಗ್ಗೆ ಮಾಹಿತಿ ಪಡೆದು ಮಾತನಾಡಿದರು. ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ರಾಜ್ಯಪಾಲ ಆಚಾರ್ಯ ದೇವವ್ರತ್ ಉಪಸ್ಥಿತರಿದ್ದರು.

ಸುಮಾರು ೧೭ ಎಕರೆ ಪ್ರದೇಶದಲ್ಲಿ ಈ ವನ ಹರಡಿಕೊಂಡಿದ್ದು, ೩೮೦ ಜಾತಿಯ ೫ ಲಕ್ಷ ಸಸ್ಯಗಳನ್ನು ಹೊಂದಿದೆ. ಕಮಲದ ಕೊಳ, ಆಲ್ಫಾ ಉದ್ಯಾನ, ಸುವಾಸನೆಯ ಉದ್ಯಾನ, ಯೋಗ ಮತ್ತು ಧ್ಯಾನ ಉದ್ಯಾನ, ಒಳಾಂಗಣ ಸಸ್ಯ ವಿಭಾಗ, ಡಿಜಿಟಲ್ ಮಾಹಿತಿ ಕೇಂದ್ರ, ಸ್ಮಾರಕ ಅಂಗಡಿ ಮತ್ತು ಆಯರ‍್ವೇದ ಆಹಾರ ಪೂರೈಸುವ ಕೆಫೆಟೇರಿಯಾವನ್ನು ಒಳಗೊಂಡಿದೆ. ಪಿಎಂ ಮೋದಿ ಕೆವಾಡಿಯಾ ಏಕ್ತಾ ಮಾಲ್ ಮತ್ತು ಮಕ್ಕಳ ನ್ಯೂಟ್ರಿಷನ್ ಹಾಗೂ ಪಾರ್ಕ್‌ನ್ನು ಕೂಡಾ ಉದ್ಘಾಟಿಸಿದ್ದಾರೆ  ಎಂದು ಅಧಿಕೃತ ಮಾಹಿತಿಯಿಂದ ತಿಳಿದುಬಂದಿದೆ.

Exit mobile version