ಪ್ರವಾಹ ಪರಿಹಾರ ಕಾರ್ಯದಲ್ಲಿ ಯಾವುದೇ ಲೋಪವಾಗೋದಿಲ್ಲ : ಕಂದಾಯ ಸಚಿವ ಆರ್.ಅಶೋಕ್

ಬೆಂಗಳೂರು, ಸೆ.03: ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಕೇಂದ್ರ ಸರ್ಕಾರ ಮೊದಲ ಕಂತಿನ ನೆರವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಪ್ರವಾಹ ಪರಿಸ್ಥಿತಿ ವಿಚಾತ ಪರಿಹಾರ, ಪುನರ್ವಸತಿ ಕಾರ್ಯಗಳು ಉತ್ತಮವಾಗಿ ನಡೀತಿವೆ.ಪರಿಹಾರದ ಕೆಲಸಗಳಲ್ಲಿ ವಿಳಂಬ ಆಗ್ತಿಲ್ಲ ಅಧಿಕಾರಿಗಳಿಗೆ ರಜೆ ತಗೊಳ್ದೇ ಕೆಲಸ ಮಾಡಬೇಕೆಂಬ ಕಟ್ಟುನಿಟ್ಟಿನ ಆದೇಶ ಕೊಟ್ಟಿದೀವಿ ಎಂಬುದಾಗಿ ಕಂದಾಯ ಸಚಿವ ಆರ್.ಅಶೋಕ್ ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ.

ಸಿಎಂ, ನಾವು ಎಲ್ಲ ಪರಿಹಾರಕ್ಕೆ ಮನವಿ ಮಾಡ್ತೇವೆ. ನಾವು ಕೇಂದ್ರಕ್ಕೆ ನಷ್ಟದ ವರದಿ ಕೊಟ್ಟಿದ್ದೇವೆ. 38 ಸಾವಿರ ಕೋಟಿ ರೂ ಕೇಳಿದ್ದೇವೆ. ಶೀಘ್ರದಲ್ಲೇ ಮೊದಲ‌ ಕಂತಿನ ಪರಿಹಾರ ಬರೋ ನಿರೀಕ್ಷೆ ಇದೆ. ಕೇಂದ್ರದಿಂದ ಪರಿಹಾರ ವಿಳಂಬ ಆರೋಪ ವಿಚಾರ 7ರಂದು ಪ್ರಧಾನಿ ರಾಜ್ಯಕ್ಕೆ ಬರ್ತಿದ್ದಾರೆ. ಈ ವೇಳೆ ಮತ್ತೊಮ್ಮೆ ಪರಿಹಾರ ಬಿಡುಗಡೆಗೆ ಮನವಿ ಮಾಡಲಾಗುವುದು.

ರಾಜ್ಯ ಸರ್ಕಾರ ಪ್ರವಾಹ ಪರಿಹಾರ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಿದೆ. ಪರಿಹಾರ ಕಾರ್ಯದಲ್ಲಿ ಯಾವುದೇ ಲೋಪವಾಗದಂತೆ ಅಧಿಕಾರಿಗಳು ಹಗಲಿರುಳು ಶ್ರಮಿಸಿದ್ದಾರೆ. ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಅನುದಾನ ಸಮರ್ಪಕವಾಗಿ ಬಳಕೆಯಾಗಬೇಕು. ಇದರಲ್ಲಿ ದುರುಪಯೋಗವಾದರೆ ಕಠಿಣ ಕ್ರಮ ಜರುಗಿಸಲಾಗುವುದು ಸಚಿವ ಆರ್.ಅಶೋಕ್ ಸ್ಪಷ್ಟನೆ ನೀಡಿದ್ದಾರೆ.

Exit mobile version