ಬಡವರನ್ನು ಕಾಡುವ ಕೊರೋನಾ

ನವದೆಹಲಿ, ಅ.13:  ಇಡೀ ವಿಶ್ವದ ಎಲ್ಲೆಡೆ ಜನರನ್ನು ಕೊರೊನಾ ವೈರಸ್ ಕಿತ್ತು ತಿನ್ನುತ್ತಿದೆ. ದೇಶದಲ್ಲಿ ಮಂಗಳವಾರ 55,342 ಹೊಸ ಕೇಸ್  ಪತ್ತೆಯಾಗಿದೆ, 706 ಜನರು ಸಾವನ್ನಪ್ಪಿದ್ದಾರೆ.  ಈ ಮೂಲಕ ಕೊರೋನಾ ಸೋಂಕು 71 ಲಕ್ಷ ದಾಟಿದೆ. ಗುಣಮುಖರಾದವರ ಸಂಖ್ಯೆ 61 ಲಕ್ಷ ದಾಟಿದೆ.  ದೇಶದಲ್ಲಿ ಒಟ್ಟು ಪ್ರಕರಣಗಳು 71,75,881 ಆಗಿದ್ದರೆ, ಸಾವಿನ ಸಂಖ್ಯೆ 1,09,856. ಈ ಪೈಕಿ 8,38,729 ಸಕ್ರಿಯವಾಗಿದ್ದು,ಚೇತರಿಸಿಕೊಂಡ ಪ್ರಕರಣಗಳು 62,27,296. ಕೇಂದ್ರ ಆರೋಗ್ಯ ಸಚಿವಾಲಯವು ಈ ಮಾಹಿತಿಯನ್ನು ಇಂದು ಬೆಳಿಗ್ಗೆ ನವೀಕರಿಸಿದೆ.

ಕೊರೊನಾ ವೈರಸ್ ನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನ ನಡೆಯುತ್ತಿದ್ದು, ಕೊರೊನಾ ಲಸಿಕೆಯ ಬಗ್ಗೆ ದಿನಕ್ಕೊಂದು ಸಂಶೋಧನೆ ನಡೆಯುತ್ತಿದೆ. ಕೊರೊನಾ ಆರಂಭದಲ್ಲಿ ವೃದ್ಧರು ಮತ್ತು  ಪುರುಷರನ್ನುಹೆಚ್ಚು ಕಾಡುತ್ತದೆ ಹಾಗೂ ಅದರಲ್ಲೂ ಪುರುಷರ ಸಾವಿನ ಸಂಖ್ಯೆ ಹೆಚ್ಚು ಎಂದು ಸಂಶೋಧನೆಯೊಂದು ತಿಳಿಸಿತ್ತು.

ಈಗ ಕೊರೊನಾ ಬಗ್ಗೆ ಮತ್ತೊಂದು ಆಘಾತಕಾರಿ ಸಂಗತಿ ಹೇಳಲಾಗಿದೆ. ಕೊರೊನಾ ಬಗ್ಗೆ ಸ್ವೀಡನ್ ಸ್ಟಾಕ್ಹೋಮ್ ವಿಶ್ವವಿದ್ಯಾಲಯವು ಸಂಶೋಧನೆಯೊಂದನ್ನು ನಡೆಸಿದ್ದು, ಸ್ವೀಡನ್ ನಲ್ಲಿ ಕೊರೊನಾದಿಂದ ಸಾವನ್ನಪ್ಪಿದ ಜನರ ಅಂಕಿ-ಅಂಶದ ಕುರಿತಾಗಿದೆ. ಈ ಸಂಶೋಧನೆಯಲ್ಲಿ 20 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ಜನರ ಸಾವಿಗೆ ಕಾರಣವೇನು ಎಂಬುದನ್ನು ಪತ್ತೆ ಮಾಡುವ ಪ್ರಯತ್ನ ನಡೆದಿದೆ.

ಈ ಸಂಶೋಧನಾ ವರದಿಯ ಪ್ರಕಾರ, ಬಡವರು, ಕಡಿಮೆ ಮಟ್ಟದ ಶಿಕ್ಷಣ ಪಡೆದವರು, ಮದುವೆಯಾಗದ ಯುವಕರ ಸಾವಿನ ಸಂಖ್ಯೆ ಹೆಚ್ಚಿದೆಯಂತೆ. ಸ್ವೀಡನ್‌ನಲ್ಲಿ ಕಡಿಮೆ ಶಿಕ್ಷಣ ಹೊಂದಿದ ಹಾಗೂ ಕಡಿಮೆ ಆದಾಯವಿರುವ ಯುವಕರು ಕೊರೊನಾಗೆ ಹೆಚ್ಚು ಸಾವನ್ನಪ್ಪಿದ್ದಾರೆ. ಹಾಗೂ ವಿವಾಹವಾದ ಮಹಿಳೆ, ಪುರುಷರಿಗಿಂತ ಶೇಕಡಾ 1.5 ರಷ್ಟು ಅಪಾಯ ಅವಿವಾಹಿತ ಯುವಕ, ಯುವತಿಯರಿಗೆ ಎಂದು ಸಂಶೋಧನೆಯು ಸ್ಫೋಟಕ ಮಾಹಿತಿಯನ್ನು ಬಹಿರಂಗ ಪಡಿಸಿದೆ.

Exit mobile version