ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ದೇಶದ್ರೋಹಿಯಾಗಿದ್ಯಾಕೆ ?

ಮಂಗಳವಾರ ರಾತ್ರಿ  ಜೆ ಎನ್ ಯು ಕ್ಯಾಂಪಸ್‍ಗೆ ಏಕಾಏಕಿ ಬಾಲಿವುಡ್‍ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಎಂಟ್ರಿಕೊಟ್ಟಿದ್ದು ,15 ನಿಮಿಷಗಳ ಕಾಲ ಇಬ್ಬರು ವಿದ್ಯಾರ್ಥಿನಿಯರ ಜೊತೆ ಮಾತುಕತೆ ನಡೆಸಿ ಕ್ಯಾಂಪಸ್‍ನಿಂದ ಹೊರ ಬಂದಿದ್ದಾರೆ ..ಜೆ ಎನ್ ಯು ಕ್ಯಾಂಪಸ್‍ಗೆ ಡಿಪ್ಪಿ ಎಂಟ್ರಿಕೊಟ್ಟ ಬೆನ್ನಲೇ ಸಾಮಾಜಿಕ ಜಾಲತಾಣಗಳಲ್ಲಿ  ಭಾರಿ ವಿರೋಧ ವ್ಯಕ್ತವಾಗಿದ್ದು   ವಿದ್ಯಾರ್ಥಿನಿಯರಿಗೆ ಬೆಂಬಲ ನೀಡಲು  ದೀಪಿಕಾ ಪಡುಕೋಣೆ ಕ್ಯಾಂಪಸ್‍ಗೆ ಭೇಟಿ ಕೊಟ್ಟಿದ್ದರು ಅನ್ನೋ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ . ಈ ಹಿನ್ನಲೆ ಜನವರಿ 10 ರಂದು ರಿಲೀಸ್ ಆಗಬೇಕಿದ್ದ ದೀಪಿಕಾ ಅಭಿನಯದ  ಚಪಾಕ್ ಸಿನಿಮಾ ನಿಷೇಧಕ್ಕೆ  ನೆಟ್ಟಿಗರು ಪಟ್ಟು ಹಿಡಿದಿದ್ದಾರೆ.

 ಇನ್ನು ದೆಹಲಿಯ ಪ್ರತಿಷ್ಠಿತ ವಿದ್ಯಾಸಂಸ್ಥೆ ಜೆ ಎನ್ ಯು ಕ್ಯಾಂಪಸ್‍ನಲ್ಲಿ ಕಳೆದ ಭಾನುವಾರ ಸಂಜೆ ಮಾಸ್ಕ್‍ಧಾರಿಗಳಿಂದ  ಜೆ ಎನ್ ಯು  ಸಂಘಟನೆಗಳ ವಿದ್ಯಾರ್ಥಿಗಳ ಮೇಲೆ  ಮಾರಣಾಂತಿಕ ಹಲ್ಲೆ ನಡೆಸಿದ್ದು ,ಇಡೀ ದೇಶವೇ ಇದರ ಬಗ್ಗೆ ಚರ್ಚೆ ನಡೆಸುತ್ತಿದೆ. ಸುಮಾರು 50 ಕ್ಕೂ ಹೆಚ್ಚು ಮಾಸ್ಕ್‍ಧಾರಿಗಳು  17 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು ಹಲ್ಲೆಗೊಳಗಾದ ವಿದ್ಯಾರ್ಥಿಗಳು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ  ಚಿಕಿತ್ಸೆ  ಪಡೆಯುತ್ತಿದ್ದಾರೆ. ಇತ್ತ ಪೊಲೀಸರು ಕ್ಯಾಂಪಸ್‍ಗೆ ಬಿಗಿ ಭಧ್ರತೆಯನ್ನು ನೀಡಿದ್ದಾರೆ .

Exit mobile version