ಬಾಳೆದಿಂಡಿನ ಅದ್ಭುತ ಪ್ರಯೋಜನಗಳು

Green banana bunch on the banana plantation.

ಬಾಳೆಹಣ್ಣುಗಳನ್ನು ಎಲ್ಲರೂ ತಿನ್ನತ್ತಾರೆ,ಇದು ಆರೋಗ್ಯಕ್ಕೆ ಉತ್ತಮವೆಂದು ಎಲ್ಲರಿಗೂ ಗೊತ್ತು, ಬಾಳೆ ಹಣ್ಣಿನಿಂದ ಏನೇನೋ ಖಾದ್ಯಗಳನ್ನುತಯಾರಿಸುತ್ತಾರೆ, ರಸಾಯನ ಮಾಡುತ್ತಾರೆ, ಪಾಯಸ ಮಾಡುತ್ತಾರೆ, ಹಲ್ವ ಮಾಡುತ್ತಾರೆ.  ಹೀಗೆ ಹತ್ತಾರು ಪ್ರಯೋಜನಗಳನ್ನು ಪಡೆದುಕೊಳ್ಳುತ್ತಾರೆ, ಆದರೆ.

ಬಾಳೆದಿಂಡಿನಲ್ಲಿ ಇರುವ ಅದ್ಭುತ ಪ್ರಯೋಜನಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಬಾಳೆ ಗೊನೆಯನ್ನು ಕಡಿದ ಬಳಿಕ ಬಾಳೆ ಗಿಡದ ತಿರುಳುಗಳನ್ನು ತೆಗೆಯುತ್ತಾ ಹೋದಂತೆ ಕೊನೆಯಲ್ಲಿ ಒಂದು ಎಳತಾದ ದಿಂಡು ಸಿಗುತ್ತದೆ. ಈ ದಿಂಡಿನ ರಸವನ್ನು ಕುಡಿದರೆ ಅತ್ಯಂತ ಪರಿಣಾಮಕಾರಿ ಔಷಧೀಯ ಗುಣ ಇದರಲ್ಲಿದೆ.

ಈ ರಸವನ್ನು ಕುಡಿಯುವುದರಿಂದ ಕಿಡ್ನಿಯಲ್ಲಿರುವ ಕಲ್ಲು ಕರಗುತ್ತದೆ. ಮೂತ್ರಕೋಶದಲ್ಲಿ ಯಾವುದೇ ರೀತಿಯ ಕಾಯಿಲೆ ಇದ್ದರೂ ಇದರಲ್ಲಿ ಪರಿಹಾರವಾಗುತ್ತದೆ. ಹೊಟ್ಟೆಯಲ್ಲಿರುವ ಎಲ್ಲಾ ವಿಷಕಾರೀ ಅಂಶಗಳನ್ನು ಹೊರಕಾಕುತ್ತದೆ ಪ್ರತೀ ದಿನ ಇದರ ಸೇವನೆ ಮಾಡುವುದರಿಂದ ದೇಹದ ತೂಕವನ್ನೂ ಕಡಿಮೆ ಮಾಡಿಕೊಳ್ಳಬುದು.  ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಬಹುದು, ಬಿ ಪಿ ಯನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬಹುದು, ಜೀರ್ಣಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು, ದೇಹದ ಆಯಾಸ ಪರಿಹಾರ ಮಾಡಿಕೊಳ್ಳಬಹುದು.

ಇನ್ನು ಬಾಳೆ ಹೂವಿನಿಂದಲೂ ಪಲ್ಯ,ಚಟ್ನಿ,ತಂಬುಳಿ  ಹೀಗೆ ಹಲವಾರು ರೆಸಿಪಿಗಳಿಂದ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಇನ್ನು ಇದರ ಎಲೆಯಂತೂ ಆರೋಗ್ಯಕರವೆಂದು ಪ್ರತೀತಿಯೇ ಇದೆ.

ಬಾಳೆ ದಿಂಡಿನ ಜ್ಯೂಸ್ ನಲ್ಲಂತೂ ಅದ್ಭುತ ಆರೋಗ್ಯ ಗುಣಗಳಿವೆ ಆದ್ದರಿಂದ ಪ್ರತೀ ದಿನ ಬೆಳಗ್ಗೆ ಬರೀ ಹೊಟ್ಟೆಯಲ್ಲಿ ಇದರ ಜ್ಯೂಸನ್ನು ಸೇವಿಸಿ ನೋಡಿ ನಿಮಗೇ ಇದರ ಮಹತ್ವ ತಿಳಿಯುವುದು.

Exit mobile version