ಬಿಎಂಎಸ್ ಕಾನೂನು ಕಾಲೇಜಿನಲ್ಲಿ “ಲೆವಿಯೋಸಾ” ಗೆ ಭರ್ಜರಿ ತಯಾರಿ..

ಬೆಂಗಳೂರು,ಸೆ.24: ಬೆಂಗಳೂರಿನ ಬಸವನಗುಡಿಯಲ್ಲಿರುವ ಬಿಎಂಎಸ್ ಲಾ ಕಾಲೇಜು ಹಲವು ವರ್ಷಗಳ ಇತಿಹಾಸವನ್ನು ಹೊಂದಿದ್ದು, ಕಾನೂನು ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಅನೇಕರಿಗೆ ಈ ಕಾಲೇಜು ದಾರಿದೀಪವಾಗಿದೆ. ಇದೇ 25ರ ಬುಧವಾರದಿಂದ 2 ದಿನಗಳ ಕಾಲ ಬಿಎಂಎಸ್ ಕಾನೂನು ವಿದ್ಯಾಲಯದಲ್ಲಿ ಲೆವಿಯೋಸಾ ಎಂಬ ಇಂಟರ್ ಕಾಲೇಜ್ ಕಲ್ಚರಲ್ ಫೆಸ್ಟವಲ್ ಆಯೋಜಿಸಲಾಗಿದೆ. 100ಕ್ಕೂ ಹೆಚ್ಚು ಕಾಲೇಜುಗಳು ಭಾಗವಹಿಸುವ ನಿರೀಕ್ಷೆಯಿರುವ ಈ ಕಾರ್ಯಕ್ರಮದ ಮಿಡಿಯಾ ಪಾರ್ಟ್ನರ್ ಆಗಿ ಐ ಫೋರ್ ಮೀಡಿಯಾ ಸಂಸ್ಥೆ ಜವಾಬ್ದಾರಿ ವಹಿಸಲಿದೆ.

ವಿದ್ಯಾರ್ಥಿ, ವಿದ್ಯಾರ್ಥಿನಿಯರ ಸರ್ವತೋಮುಖ ಬೆಳವಣಿಗೆಯ ಉದ್ದೇಶದಿಂದ ಹಾಗೂ ಅವರಲ್ಲಿರುವ ಬಹುಮುಖ ಪ್ರತಿಭೆಯನ್ನು ಹೊರತರುವ ಯೋಜನೆಯೊಂದಿಗೆ ಒಂದಿಲ್ಲೊಂದು ವಿಭಿನ್ನ ಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಿಎಂಎಸ್ ಕಾನೂನು ವಿದ್ಯಾಲಯವು ಈ ಬಾರಿ ಲೆವಿಯೋಸಾ ಎಂಬ ಇಂಟರ್ ಕಾಲೇಜ್ ಕಲ್ಚರಲ್ ಇವೆಂಟ್ ಮೂಲಕ ಎಲ್ಲರ ಗಮನಸೆಳೆದಿದೆ..2 ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದ ಮೊದಲ ದಿನ ಉದ್ಘಾಟನಾ ಕಾರ್ಯವನ್ನು ನೆರವೇರಿಸಲು ಮುಖ‍್ಯ ಅತಿಥಿಗಳಾಗಿ ಐಜಿಪಿ ಶ್ರೀ ಸೀಮಂತ್ ಕುಮಾರ್ ಐಪಿಎಸ್, ಮಾಜಿ ಎಂಎಲ್ ಸಿ ಹಾಗೂ ನ್ಯಾಷನಲ್ ಅವಾರ್ಡ್ ವಿನ್ನರ್ ನಟಿ ತಾರಾ ಅನುರಾಧಾ, ಹಾಗೂ ಬಿಎಂಎಸ್ ಇಟಿಯ ಡೋನರ್ ಟ್ರಸ್ಟಿ ಆಗಿರುವ ಡಾ.ಬಿಎಸ್ ರಾಗಿಣಿ ನಾರಾಯಣ್ ಆಗಮಿಸಲಿದ್ದಾರೆ.  


ಡಾ.ಅನಿತಾ ಎಫ್.ಎನ್.ಡಿಸೋಝ, ಪ್ರಾಂಶುಪಾಲರು

ಎರಡನೇ ದಿನದಂದು ನಟ ಉಪೇಂದ್ರ, ನಟ ಸೃಜನ್ ಲೋಕೇಶ್ ಸೇರಿದಂತೆ ಚಿತ್ರರಂಗದ ಗಣ‍್ಯರ ಜೊತೆಗೆ ಹಲವು ಕ್ಷೇತ್ರದ ಸಾಧಕರು ಜೊತೆಯಾಗಲಿದ್ದಾರೆ. ಪಕ್ಷಾಂತರ ಎಂಬ ಚರ್ಚಾ ಸ್ಪರ್ಧೆ, ಡಿಜೆ, ಫ್ಯಾಷನ್ ಶೋ, ಹಾಡುಗಾರಿಕೆ, ನೃತ್ಯ ಹೀಗೆ ಹಲವು ಬಗೆಯ ಕಾರ್ಯಕ್ರಮಗಳು ಈ ಅಂತರ್ ಕಾಲೇಜು ಸಾಂಸ್ಕೃತಿಕ ಹಬ್ಬದಲ್ಲಿ ಕಂಡುಬರಲಿದೆ. ಕಾನೂನು ವಿದ್ಯಾರ್ಥಿಗಳಿಗಾಗಿ ವಿಶೇಷ ಸ್ಪರ್ಧೆಗಳನ್ನು ಹಮ್ಮಿಕೊಂಡಿದೆಯಾದರೂ, ಈ ಕಲ್ಚರಲ್ ಫೆಸ್ಟ್ ನಲ್ಲಿ ಅನೇಕ ಕಾಲೇಜುಗಳು ಭಾಗಿಯಾಗುತ್ತಿವೆ..ಕಾನೂನು ಕಾಲೇಜುಗಳು ಮಾತ್ರವಲ್ಲದೆ ಪಿಯುಸಿ ಹಾಗೂ ಅನ್ಯ ವಿಷಯಾಧಾರಿತವಾದ ಪದವಿ ಕಾಲೇಜುಗಳೂ ಸಹ ಈ ವಿಭಿನ್ನ ಫೆಸ್ಟ್ ಗೆ  ಸಾಕ್ಷಿಯಾಗಲಿವೆ..ಈಗಾಗಲೇ ಫೆಸ್ಟ್ ಗಾಗಿ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು ಭರದ ಸಿದ್ಧತೆಯಲ್ಲಿ ತೊಡಗಿದ್ದಾರೆ..

ಒಟ್ನಲ್ಲಿ ಇದೇ 25ರ ಬುಧವಾರ ಸಂಜೆ 6 ಗಂಟೆಯ ಸುಮಾರಿಗೆ ಪ್ರಾರಂಭವಾಗುವ ಲೆವಿಯೋಸಾ ಇಂಟರ್ ಕಾಲೇಜ್ ಕಲ್ಚರಲ್ ಫೆಸ್ಟವಲ್ ತಯಾರಿ ಬಹು ಜೋರಾಗಿದ್ದು, ಸ್ಪರ್ಧಾತ್ಮಕ ಚಿಂತನೆಯ ಜೊತೆಜೊತೆಗೆ ಅನೇಕ ಬಗೆಯ ಸಾಸ್ಕ್ರತಿಕ ಕಾರ್ಯಕ್ರಮಗಳು ಮನಸ್ಸಿಗೆ ಮುದ ನೀಡಲಿವೆ..ಬಿಎಂಎಸ್ ಕಾನೂನು ಕಾಲೇಜಿನ ಈ ವಿಭಿನ್ನ ಪ್ರಯತ್ನಕ್ಕೆ ಐ ಫೋರ್ ಮೀಡಿಯಾ ಸಂಸ್ಥೆಯ ವತಿಯಿಂದ ಬೆಸ್ಟ್ ವಿಶಸ್..

Exit mobile version