ಕೊಲ್ಕತ್ತಾ: ಖ್ಯಾತ ಬೆಂಗಾಳಿ ನಟ ಸೌಮಿತ್ರಾ ಚಟರ್ಜಿ(85) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಅನಾರೋಗ್ಯ ಕಾರಣದಿಂದ ಸೌಮಿತ್ರ ಚಟರ್ಜಿ ಅವರಿಗೆ ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಒಂದಕ್ಕಿಂತ ಹೆಚ್ಚು ಜೀವ ರಕ್ಷಕ ಯಂತ್ರಗಳನ್ನು ಅಳವಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದ ಪರಿಣಾಮ ಸೌಮಿತ್ರ ಚಟರ್ಜಿ ಅವರು ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಕ್ಯಾನ್ಸರ್ ನಿಂದ ಬಳಲುತ್ತಿರುವ ಸೌಮಿತ್ರ ಚಟರ್ಜಿ ಅವರಿಗೆ ಇತ್ತೀಚೆಗೆ ಕೊರೊನಾ ಸೋಂಕು ದೃಢಪಟ್ಟಿತ್ತು.