ಬೆನ್ನುನೋವು … ಇದು ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕಾಡೋ ನೋವು .. ಕೆಲವೊಂದು ಕೆಲಸದ ಅಭ್ಯಾಸದಿಂದಾಗಿ ಶರೀರದಲ್ಲಿ ಅಸಮತೋಲನ ಉಂಟಾಗುತ್ತದೆ. ಇದರಿಂದಾಗಿ ಅತೀವವಾದ ಬೆನ್ನುನೋವು ಕಾಣಿಸುವುದರ ಜೊತೆಗೆ ಮನಸ್ಸಿಗೂ ಇದು ತೊಂದರೆಯನ್ನುಂಟು ಮಾಡುತ್ತದೆ.
ಅಂದಹಾಗೆ ಬೆನ್ನು ನೋವಿಗೂ ಮನಸ್ಸಿಗೂ ಸಂಬಂಧವಿದ್ದು, ಬೆನ್ನು ನೋವು ಬಂದಾಕ್ಷಣ ಮನಸ್ಸಿನ ಮೇಲೂ ಈ ನೋವು ಪರಿಣಾಮ ಬೀರುತ್ತದೆ. ಆದರೆ ಯೋಗದಿಂದ ಬೆನ್ನು ನೋವನ್ನು ಸಲೀಸಲಾಗಿ ಹೋಗಲಾಡಿಸುವುದರ ಜೊತೆಗೆ ಮನಸ್ಸನ್ನು ಪ್ರಶಾಂತವಾಗಿರಿಸಬಹುದು. ಬೆನ್ನು ನೋವಿಗೆ ಯೋಗದಲ್ಲಿ ಅತೀ ಸುಲಭವಾದ ಯೋಗಗಳಿದೆ .ಈ ಸರಳವಾದ ಯೋಗವನ್ನು ಯೋಗ ಗುರುಗಳಾದ ಪಿ.ಸಿ ಮುಕಂದ ರಾವ್ ಸರಳವಾಗಿ ಜನರ ಮುಂದಿಟ್ಟಿದ್ದಾರೆ .. ಹಾಗಿದ್ರೆ ಯಾವೆಲ್ಲಾ ಯೋಗಗಳಿಂದ ಬೆನ್ನು ನೋವನ್ನು ದೂರಮಾಡಬಹುದು ಅನ್ನೋದಕ್ಕೆ ಈ ಕೆಳಗಿನ ಯೋಗೋದಯ ವೀಡಿಯೋವನ್ನು ಕ್ಲಿಕ್ ಮಾಡಿ ವೀಕ್ಷಿಸಿ. ಜೊತೆಗೆ ವೀಡಿಯೋವನ್ನು ಲೈಕ್ ಮಾಡಿ ಹಾಗೂ ಕಮೆಂಟ್ ಮಾಡಿ ..
- ದೀಪಿಕಾ