ಬೊಜ್ಜು ಕರಗಿಸುತ್ತೆ “ಮುಟ್ಟಿದರೆ ಮುನಿ” ಗಿಡ

ಮುಟ್ಟಿದರೆ ಮುನಿ ಗಿಡವು ಎಲ್ಲೆಂದರಲ್ಲಿ ಯಥೇಚ್ಟವಾಗಿ ಬೆಳೆಯುತ್ತದೆ. ಇದನ್ನು ಮುಟ್ಟಿದ ತಕ್ಷಣ ಮುದುಡಿಕೊಳ್ಳುವ ಸಸ್ಯವಾಗಿರುವುದರಿಂದ  ಇದನ್ನು ಹೀಗೆ ಕರೆಯಲಾಗುವುದು. ಕನ್ನಡದಲ್ಲಿ ನಾಚಿಕೆ ಮುಳ್ಳು ಎಂದೂ ಕರೆಯಲಾಗುತ್ತದೆ. ಇದರಲ್ಲಿ ಅನೇಕ ಆರೋಗ್ಯವರ್ಧಕ ಗುಣಗಳು ಅಡಕವಾಗಿವೆ.  ಆಯುರ್ವೇಧದಲ್ಲಿ ಔಷಧಿಗಳ ಬಳಕೆಗೂ ಇದನ್ನು ಬಳಸುತ್ತಿದ್ದಾರೆ.

ಇದರ ಕಾಂಡ, ಬೇರುಗಳು, ಎಲೆಗಳು, ಹೂವುಗಳು  ಎಲ್ಲವನ್ನೂ ಔಷಧಿಯಾಗಿ ಬಳಸಿಕೊಳ್ಳಬಹುದಾಗಿದೆ.  ಎಲೆ ಮತ್ತು ಬೇರುಗಳನ್ನು ಚೆನ್ನಾಗಿ ಅರೆದು ಹಾಲಿನೊಂದಿಗೆ ಕುಡಿಯುವುದರಿಂದ ಮಂಡಿನೋವು, ಮಂಡಿಯಲ್ಲಿ ಊತ, ಲಿವರ್  ಸಂಬಂಧಿ ಕಾಯಿಲೆಗಳಿಗೆ ರಾಮಬಾಣವಾಗಿದೆ.

ಇದರ ಎಲೆಗಳನ್ನು ಒಣಗಿಸಿ ಪುಡಿ ಮಾಡಿ ಒಂದು ಲೋಟ ನೀರಿಗೆ ಹಾಕಿ ಖಾಲಿ ಹೊಟ್ಟೆಗೆ  ಸೇವಿಸಿದರೆ ಮೂಲವ್ಯಾದಿ ಸಮಸ್ಯೆ ಪರಿಹಾರವಾಗುತ್ತದೆ. ಬಾಣಂತಿಯರು ಇದರ ಎಲೆಯನ್ನು ಅರೆದು ರಸವನ್ನು ಪ್ರತಿನಿತ್ಯ ಹೊಟ್ಟೆಗೆ ಲೇಪಿಸುತ್ತಿದ್ದರೆ ದಪ್ಪವಾಗಿರುವ ಹೊಟ್ಟೆ ಕರಗುತ್ತಾ ಬರುವುದು.

ಮೂಲವ್ಯಾದಿ, ಕಾಲರಾ, ಸಾಮಾನ್ಯ ವಾಂತಿಬೇಧಿಗೂ ಇದು ಉತ್ತಮ ಔಷದಿಯಾಗಿದೆ. ಅಷ್ಟೇ ಅಲ್ಲದೆ ದೇಹದಲ್ಲಾಗೋ ಗಾಯಕ್ಕೂ ಗುಣಪಡಿಸುವಲ್ಲೂ ಪರಿಣಾಮಕಾಗಿ ಔಷಧಿಯಾಗಲಿದೆ. ಇದರ ಎಲೆಯನ್ನು ಜಜ್ಜಿ ರಸವನ್ನು ಹಚ್ಚಿದರೆ ರಕ್ತ ಸ್ರಾವ ನಿಲ್ಲುವುದು, ಅಲ್ಲದೆ  ಗಾಯ ಬೇಗನೇ ವಾಸಿಯಾಗುತ್ತದೆ. ಇನ್ನು ತಲೆನೋವಿಗೂ ಇದರ ಬೇರನ್ನು ಜೀರಿಗೆ ಜೊತೆ ಹಾಲಿನಲ್ಲಿ ಅರೆದು ಹಣೆಗೆ ಹಚ್ಚಿಕೊಂಡರೆ ತಲೆನೋವು ಗುಣವಾಗುತ್ತದೆ.  ಹೀಗೆ ಹತ್ತು ಹಲವಾರು ಕಾಯಿಲೆಗಳಿಗೆ ಇದು ಪರಿಣಾಮಕಾರಿ ಮನೆಮದ್ದಾಗಿ ಉಪಯೋಗವಾಗುತ್ತದೆ.

Exit mobile version