ಹೊಸದಿಲ್ಲಿ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಮತ್ತೊಮ್ಮೆ ಫೋರ್ಬ್ಸ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ.
ಮುಖೇಶ್ ಅಂಬಾನಿ ಅವರ ಒಟ್ಟು ಆಸ್ತಿ ಮೌಲ್ಯ ಹಿಂದಿನ ವರ್ಷಕ್ಕಿಂತ ಶೇ.14ರಷ್ಟು ಏರಿಕೆಯಾಗಿ, 517:5 ಬಿಲಿಯನ್ ಡಾಲರ್ಗೆ ತಲುಪಿಸಿದ. ಈ ವರ್ಷ ಅವರು ತಮ್ಮ ಆಸ್ತಿಗೆ 37.3 ಬಿಲಿಯನ್ ಹೆಚ್ಚುವರಿ ಮೌಲ್ಯವನ್ನು ಸೇರಿಸಿದ್ದಾರೆ. ಆ ಮೂಲಕ ಅವರ ಒಟ್ಟು ಆಸ್ತಿಯ ಮೌಲ್ಯ ಶೇ.73ರಷ್ಟು ಏರಿಕೆಯಾಗಿದೆ ಎಂದು ಫೋರ್ಬ್ಸ್ ತಿಳಿಸಿದೆ.
ಇನ್ನೂ ಉದ್ಯಮಿ ಗೌತಮ್ ಅದಾನಿ ತಮ್ಮ ಒಟ್ಟು ಆಸ್ತಿ ಮೌಲ್ಯವನ್ನು 25 ಬಿಲಿಯನ್ ಡಾಲರ್ ಗೆ ಹೆಚ್ಚಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದರೆ. ಉದ್ಯಮಿ ಶಿವ ನಾಡರ್ 20.4 ಬಿಲಿಯನ್ ಒಟ್ಟು ಆಸ್ತಿ ಮೌಲ್ಯದೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.