ಭಾರತೀಯ ರೈಲ್ವೆ ಇಲಾಖೆಯಿಂದ ಹೊಸ ವೇಳಾಪಟ್ಟಿ ರಚನೆ

ನವದೆಹಲಿ, ಅಕ್ಟೋಬರ್ 15: ಲಾಕ್ ಡೌನ್ ಅವಧಿಯಲ್ಲಿ ರೈಲ್ವೆ ಮಂಡಳಿಗೆ ಭಾರೀ ನಷ್ಟ ಉಂಟಾಗಿದ್ದು ಅದನ್ನು ಭರಿಸಿಕೊಳ್ಳಲು ಭಾರತೀಯ ರೈಲ್ವೆ ಇಲಾಖೆಯು ಹೊಸ ವೇಳಾಪಟ್ಟಿಯನ್ನು ರಚನೆ ಮಾಡಿದ್ದು, ಡಿಸೆಂಬರ್‌ 1ರಿಂದ ವೇಳಾಪಟ್ಟಿಯನ್ನು ಜಾರಿಗೊಳಿಸಲಿದೆ.  ಆದ್ದರಿಂದ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುತ್ತಿದ್ದು, ಲಾಭವಿಲ್ಲದ ರೈಲು ಮಾರ್ಗಗಳನ್ನು ರದ್ದುಗೊಳಿಸಲಿದೆ ಎಂದು ಇಲಾಖ ಎತಿಳಿಸಿದೆ.

ಬಿಡುಗಡೆಗೊಳ್ಳಲಿರುವ ಹೊಸ ವೇಳಾಪಟ್ಟಿಯ ಪ್ರಕಾರ 600 ಪ್ಯಾಸೆಂಜರ್ ರೈಲುಗಳ ಸಂಚಾರ ರದ್ದುಗೊಳ್ಳಲಿದೆ. 10,200 ನಿಲ್ದಾಣಗಳಲ್ಲಿನ ರೈಲು ನಿಲುಗಡೆ ಸ್ಥಗಿತವಾಗಲಿದೆ. 1600 ರಾತ್ರಿ ನಿಲ್ದಾಣಗಳನ್ನು ರದ್ದು ಮಾಡಲಾಗುತ್ತದೆ. ಇದೇ ಮೊದಲ ಬಾರಿಗೆ ಅಧಿಕ ನಷ್ಟದಲ್ಲಿನ ಮಾರ್ಗವನ್ನು ರೈಲ್ವೆ ಇಲಾಖೆ ರದ್ದು ಮಾಡುತ್ತಿದ್ದು, ಹೊಸ ರೈಲು ವೇಳಾಪಟ್ಟಿ ಜಾರಿಗೆ ಬಂದ ಕೂಡಲೇ ಇದು ಅನುಷ್ಠಾನಕ್ಕೆ ಬರಲಿದೆ.

ಸಾಮಾನ್ಯ ರೈಲುಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಬೇಡಿಕೆ ಇರುವ ಮಾರ್ಗದಲ್ಲಿ ಮಾತ್ರ ವಿಶೇಷ ರೈಲುಗಳನ್ನು ರೈಲ್ವೆ ಓಡಿಸುತ್ತಿದೆ. ಎಲ್ಲಾ ರೈಲುಗಳ ಸಂಚಾರ ಡಿಸೆಂಬರ್‌ನಲ್ಲಿ ಆರಂಭಗೊಳ್ಳುವ ನಿರೀಕ್ಷೆ ಇದೆ. ಹಬ್ಬಗಳ ಹಿನ್ನಲೆಯಲ್ಲಿ ನವೆಂಬರ್‌ನಲ್ಲಿ 300 ವಿಶೇಷ ರೈಲು ಸಂಚಾರ ನಡೆಸಲಿದೆ. ಪ್ರಸ್ತುತ ಭಾರತೀಯ ರೈಲ್ವೆ ಇಲಾಖೆಯು 310 ವಿಶೇಷ ರೈಲುಗಳು ಮತ್ತು 20 ಜೋಡಿ ಕ್ಲೋನ್ ರೈಲುಗಳ ಸಂಚಾರವನ್ನು ಮಾತ್ರ ನಡೆಸುತ್ತಿವೆ.

Exit mobile version