ಭಾರತೀಯ ವಾಯುಪಡೆಗೆ ರಫೇಲ್‌ ಸೇರ್ಪಡೆ

ನವದೆಹಲಿ, ಅ. 16: ಹರಿಯಾಣದ ಅಂಬಲಾ ವಾಯುನೆಲೆಗೆ ಮೂರ್ನಾಲ್ಕು ರಫೇಲ್ ಯುದ್ಧ ವಿಮಾನಗಳ ನವೆಂಬರ್ ಮೊದಲ ವಾರದಲ್ಲಿ ಸೇರ್ಪಡೆಗೊಳ್ಳಲಿದ್ದು, ಆ ಮೂಲಕ ಭಾರತೀಯ ವಾಯುಪಡೆಯ ಸಾಮರ್ಥ್ಯ ಮತ್ತಷ್ಟು ಪ್ರಬಲವಾಗಲಿದೆ ಎಂದು ಉನ್ನತ ಮಾಹಿತಿ ಮೂಲಗಳಿಂದ ತಿಳಿದು ಬರುತ್ತಿದೆ.

ಮೊದಲ ಹಂತದ ಐದು ಯುದ್ಧ ವಿಮಾನಗಳು ಜುಲೈ 28 ರಂದು ಭಾರತಕ್ಕೆ ಆಗಮಿಸಿದ್ದವು. ಅವುಗಳನ್ನು ಸೆಪ್ಟೆಂಬರ್ 10 ರಂದು ಅಧಿಕೃತವಾಗಿ ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡಿತ್ತು. ಇದೀಗ ಫ್ರಾನ್ಸ್‌ನಲ್ಲಿ ತಯಾರಿಸಲ್ಪಟ್ಟಿರುವ ಯುದ್ಧ ವಿಮಾನಗಳು ಎರಡನೇ ಹಂತದಲ್ಲಿ ಭಾರತಕ್ಕೆ ಆಗಮಿಸುತ್ತಿವೆ.

ಎರಡನೇ ಹಂತದ ರಫೇಲ್ ಯುದ್ಧ ವಿಮಾನಗಳ ಆಗಮನಕ್ಕಾಗಿ ದೇಶದಲ್ಲಿ ಸಕಲ ಸಿದ್ಧತಾ ಕಾರ್ಯಗಳು ನಡೆಯುತ್ತಿವೆ ಎಂದು ಸರ್ಕಾರದ ಮೂಲಗಳು ತಿಳಿಸಿರುವುದಾಗಿ ಮಾಹಿತಿ ದೊರೆತಿದೆ.

Exit mobile version