ಭಾರತೀಯ ವಾಯುಸೇನೆಗೆ ರಫೇಲ್ ಯುದ್ಧ ವಿಮಾನದ ಬಲ

ಬಹುನಿರೀಕ್ಷಿತ ರಫೇಲ್ ಯುದ್ಧ ವಿಮಾನಗಳು ಅಂಬಾಲಾ ವಾಯುಸೇನಾ ನೆಲೆಗೆ ಬಂದಿಳಿಯುವ ಮೂಲಕ ಭಾರತೀಯ ಸೇನೆಯ ಬಲ ಹೆಚ್ಚಿಸಿವೆ.

ಫ್ರಾನ್ಸ್‍ನ ಮೆರಿಗ್ನಾಕ್‍ ವಾಯುನೆಲೆಯಿಂದ ಜು.27 ರಂದು ಭಾರತಕ್ಕೆ ಹೊರಟ ಐದು ಅತ್ಯಾಧುನಿಕ ರಫೇಲ್ ಯುದ್ದ ವಿಮಾನಗಳು ಯುಎಇಯ ಅಲ್ ದಫ್ರಾ ವಾಯುಸೇನಾ ನೆಲೆ ಮಾರ್ಗವಾಗಿ ಸಂಚರಿಸಿ, ಬುಧವಾರ ಭಾರತದ ವಾಯುನೆಲೆ ಪ್ರವೇಶಿಸಿವೆ.

ರಫೇಲ್ ಯುದ್ಧ ವಿಮಾನಗಳು ಭಾರತೀಯ ವಾಯು ಪ್ರದೇಶ ಪ್ರವೇಶಿಸುತ್ತಿದ್ದಂತೆ ಸು-30ಎಂಕೆಐ ವಿಮಾನಗಳ ಸಾರಥ್ಯದಲ್ಲಿ ಅಂಬಾಲಾ ವಾಯುನೆಲೆಗೆ ಸುರಕ್ಷಿತವಾಗಿ ಬಂದಿಯಿತು. ಭಾರತೀಯ ವಾಯುಸೇವೆಯ ಆರು ನುರಿತ ಪೈಲೆಟ್‍ಗಳು ರಫೇಲ್ ಯುದ್ಧ ವಿಮಾನಗಳನ್ನು ಭಾರತ ತರುವಲ್ಲಿ ಯಶಸ್ವಿಯಾದರು. ಮೊದಲ ಕಂತಿನ ಭಾರತಕ್ಕೆ ಬಂದಿರುವ ಐದು ರಫೇಲ್ ಯುದ್ಧ ವಿಮಾನಗಳಲ್ಲಿ 3 ಸಿಂಗಲ್ ಸೀಟರ್ ಹಾಗೂ 2 ಅವಳಿ ಸೀಟರ್‍ಗಳನ್ನು ಹೊಂದಿವೆ. ಈ ಐದು ರಫೇಲ್ ಯುದ್ಧ ವಿಮಾನಗಳನ್ನು ಫ್ರಾನ್ಸ್‌ನ ಡಸ್ಸಾಲ್ಟ್ ಏವಿಯೇಶನ್ ಸಂಸ್ಥೆ ನಿರ್ಮಿಸಿದೆ.

Exit mobile version