ಮಕ್ಕಳಲ್ಲಿ ಕಂಡುಬರುವ ಗ್ಯಾಸ್ ಹಾಗೂ ಮಲಬದ್ಧತೆ ಸಮಸ್ಯೆಗೆ ಇಲ್ಲಿದೆ ಪರಿಹಾರ..

ಪುಟ್ಟ ಮಕ್ಕಳಲ್ಲಿ ಹೆಚ್ಚಾಗಿ ಕಾಣುವ ಆರೋಗ್ಯ ಸಮಸ್ಯೆಗಳ ಪೈಕಿ ಮಲಬದ್ಧತೆ ಹಾಗೂ ಗ್ಯಾಸ್‍ನ ಸಮಸ್ಯೆಯೂ ಒಂದು. ನಿತ್ಯವೂ ಅಜೀರ್ಣ, ವಾಂತಿ ಬೇಧಿಯುಂಟಾಗಿ, ಹೊಟ್ಟೆ ಕಿವುಚಿದಂತಾಗಿ ಮಕ್ಕಳ ಅಳುಮುಖವನ್ನು ನೋಡುವುದು ಸಮಾಧಾನಪಡಿಸುವುದು ಹೆತ್ತವರಿಗೆ ತಲೆನೋವಿನ ವಿಚಾರವಾಗಿಬಿಟ್ಟಿರುತ್ತದೆ.

ಮಗುವಿಗೇಕೆ ಅಜೀರ್ಣ ಸಮಸ್ಯೆ ಜಾಸ್ತಿ?

ನಮ್ಮ ದೇಹದಲ್ಲಿ ಈಸೋಫ್ಯಾಗಲ್ ಸ್ಫಿಂಕ್ಟರ್ ಎಂಬ ವಾಲ್ವ್ ಹೊಟ್ಟೆಯಿಂದ ಅನ್ನನಾಳಕ್ಕೆ ಆಹಾರ ತಿರುಗಿ ಹೋಗದಂತೆ ನೋಡಿಕೊಳ್ಳುತ್ತದೆ. ಮಗುವಿನಲ್ಲಿ ಈ ವಾಲ್ವ್ ಇನ್ನೂ ಬೆಳವಣಿಗೆಯ ಹಂತದಲ್ಲಿದ್ದು ಸಂಪೂರ್ಣ ಬೆಳೆಯಲು ಒಂದು ವರ್ಷದವರೆಗೂ ಸಮಯ ತೆಗೆದುಕೊಳ್ಳಬಹುದು. ಇದು ಮಕ್ಕಳಲ್ಲಿ ಜೀರ್ಣ ಪ್ರಕ್ರಿಯೆ ಸರಿಯಾಗಿ ಆಗದಿರಲು ಪ್ರಮುಖ ಕಾರಣ.

ಇದರಿಂದಲೇ ಆ್ಯಸಿಡ್ ರಿಫ್ಲಕ್ಸ್ ಆಗುವುದು. ಇದಲ್ಲದೆ ಅಪರೂಪಕ್ಕೆ ಇನ್ಫೆಕ್ಷನ್ ಕೂಡಾ ಕಾರಣವಾಗಬಹುದು. ಇನ್ನು ನವಜಾತ ಶಿಶುವು ಹಾಲು ಕುಡಿಯುವಾಗ ಜೊತೆಗೆ ಗಾಳಿಯನ್ನೂ ಎಳೆಯುತ್ತದೆ. ಇದರಿಂದ ಮಗುವು ಪದೇ ಪದೆ ಕಕ್ಕುತ್ತದೆ. ಇನ್ನು ಮಗುವಿಗೆ ದಪ್ಪ ಆಹಾರವನ್ನು ಕೊಡಲಾರಂಭಿಸಿದಾಗ ಮಲಬದ್ಧತೆ ಕಾಡುವುದು ಸಾಮಾನ್ಯ. 

ಮನೆ ಮದ್ದಿನ ಮೂಲಕ ಮಕ್ಕಳ ಜೀರ್ಣ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ

ಈ ರೀತಿಯ ಮನೆ ಮದ್ದುಗಳ ಅಳವಡಿಕೆಯ ಮೂಲಕ ಮಕ್ಕಳಲ್ಲಿ ಕಂಡುಬರುವ ಗ್ಯಾಸ್ ಹಾಗೂ ಮಲಬದ್ಧತೆ ಸಮಸ್ಯೆ ಮುಕ್ತಿ ಕಾಣಬಹುದು. ಇದಕ್ಕೂ ಮಿಗಿಯಾದ ಹೊಟ್ಟೆನೋವು ಕಾಣಿಸಿಕೊಂಡರೆ ವೈದ್ಯರನ್ನು ಭೇಟಿಯಾಗುವುದು ಉತ್ತಮ.

Exit mobile version