ಮತ್ತೆ ಕಠಿಣ ಲಾಕ್ಡೌನ್ ವಿಧಿಸಲು ಮುಂದಾಗುತ್ತಿವೆ ಹಲವು ರಾಷ್ಟ್ರಗಳು

ಬರ್ಲಿನ್, ನ. 2: ಕೋವಿಡ್-19 ವೈರಸ್‍ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಜರ್ಮನಿಯಲ್ಲಿ ನಿರ್ಬಂಧಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದ್ದು, ಈ ನಿರ್ಧಾರಕ್ಕೆ ಯೂರೋಪ್‍ನ ವಿವಿಧೆಡೆಗಳಲ್ಲಿ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಜಗತ್ತಿನಲ್ಲಿ ಅಂದಾಜು 12 ಲಕ್ಷಕ್ಕೂ ಹೆಚ್ಚು ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಯುರೋಪ್‌ ಮತ್ತು ಅಮೆರಿಕದ ಹಲವೆಡೆ ಕೊರೊನಾ ಪ್ರರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಸೋಂಕು ತಡೆ ಕ್ರಮವಾಗಿ ಜರ್ಮನಿಯ ಚಾನ್ಸೆಲರ್ ಏಂಜೆಲಾ ಮರ್ಕೆಲ್, ಸೋಮವಾರದಿಂದ ತಿಂಗಳಾಂತ್ಯದವರೆಗೆ ಲಾಕ್‌ಡೌನ್‌ ಘೋಷಿಸಿದ್ದಾರೆ.
ಆದರೆ ಈ ಲಾಕ್‍ಡೌನ್‍ ವೇಳೆ ಜನರಿಗೆ ಮನೆಯಲ್ಲೇ ಇರುವಂತೆ ನಿರ್ಬಂಧ ವಿಧಿಸದಿದ್ದರೂ, ಬಾರ್‌, ಕೆಫೆ ಮತ್ತು ರೆಸ್ಟೋರೆಂಟ್‌, ಚಿತ್ರಮಂದಿರ, ಓಪೆರಾಗಳು ತಿಂಗಳಾಂತ್ಯದವರೆಗೆ ಮುಚ್ಚುವಂತೆ ಆದೇಶಿಸಲಾಗಿದೆ.
ಜರ್ಮಿನಿ ಜೊತೆಗೆ ಆಸ್ಟ್ರೀಯ, ಫ್ರಾನ್ಸ್‌, ಐರ್ಲೆಂಡ್ ಮತ್ತು ಇಂಗ್ಲೆಂಡ್ ರಾಷ್ಟ್ರಗಳು ಸಹ ತಮ್ಮ ಪ್ರಜೆಗಳಿಗೆ ಮನೆಯಲ್ಲೇ ಇರುವಂತೆ ಸೂಚಿಸಿದ್ದು, ಮಂಗಳವಾರದಿಂದ ನಾಲ್ಕು ವಾರಗಳ ಲಾಕ್‌ಡೌನ್‌ ಅನ್ನು ಘೋಷಿಸಿದೆ. ಅಷ್ಟೇ ಅಲ್ಲದೇ ಬೆಲ್ಜಿಯಂ ಕೂಡ ಕಠಿಣ ಲಾಕ್‌ಡೌನ್‌ ನಿಯಮಗಳನ್ನು ಜಾರಿಗೊಳಿಸಿದೆ.

Exit mobile version