ಬೆಳಗಾವಿ ಮೂಲಭೂತ ಸೌಕರ್ಯದ ಸಮಸ್ಯೆ

Belagavi infrastructure issues | Citizen journalist | Vijaya times

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಅನೇಕ ರಾಜಕೀಯ ನಾಯಕರು, ಅಧಿಕಾರಿಗಳು ಇದ್ದರೂ ಜನರು ರಸ್ತೆ ಇಲ್ಲದೆ ,ನೀರಿಲ್ಲದೆ ಸಂಕಷ್ಟಕ್ಕೊಳಗಾಗಿದ್ದಾರೆ. ಬೂದಿಹಾಳ ಗ್ರಾಮಸ್ಥರು ತಮ್ಮ ಹೊಲದಲ್ಲಿ ಬೆಳೆಯುವ ಬೆಳೆಗಳನ್ನು ಕಟಾವು ಮಾಡಿ ಮನೆಗೆ ತರಲು ಹರಸಾಹಸ ಪಡಬೇಕಾಗಿದೆ. ಇಲ್ಲಿನ ರಸ್ತೆ ಕೊಚ್ಚೆಯಾಗಿದ್ದು ಕೆಸರು ತುಂಬಿ ನಡೆದಾಡಲು ಸಾದ್ಯವಿಲ್ಲದ ಪರಿಸ್ಥಿತಿ ಎದುರಾಗಿದೆ. ವಾಹನಗಳ ಚಕ್ರಗಳು ಕೆಸರಲ್ಲಿ ಹೂತು ಹೋಗಿ ಕಷ್ಟಪಡುವ ಜನರ ಪರಿಸ್ಥಿತಿಯನ್ನು ಕೇಳುವವರಿಲ್ಲವಾಗಿದೆ. ಮಳೆ ಬಂದರಂತೂ ಇಲ್ಲಿ ನೀರೆಲ್ಲಾ ಮನೆಯ ಒಳಗೆ ನುಗ್ಗುವ ಸ್ಥಿತಿ ನಿರ್ಮಾಣವಾಗುತ್ತದೆ. ಯಾಕೆಂದರೆ ಇಲ್ಲಿ ಒಳಚರಂಡಿ ಇಲ್ಲ. ಮಳೆ ನೀರೆಲ್ಲಾ ಅಲ್ಲಲ್ಲೇ ನಿಂತು ಸಮುದ್ರದಂತೆ ಭಾಸವಾಗುತ್ತದೆ.

ಇಲ್ಲಿ ಮಲಪ್ರಭಾ ನದಿ ಹರಿಯುತ್ತಿದ್ದು ಈ ಗ್ರಾಮ ಮಲಪ್ರಭಾ ನದಿಯಲ್ಲಿ ಮುಳುಗಿ ಮರು ನಿರ್ಮಾಣವಾಗಿ ೫೫ ವರ್ಷಗಳೇ ಕಳೆದರೂ ಯಾವುದೇ ಅಭಿವೃದ್ದಿ ಕಾರ್ಯಗಳು ಇಲ್ಲಿ ನಡೆದಿಲ್ಲ, ಎಂಬುದು ಗ್ರಾಮಸ್ಥರ ಅಳಲು. ಬೂದಿಹಾಳ ಗ್ರಾಮದ ಬಸ್ ತಂಗುದಾಣ ಆಗಲೋ ಈಗಲೋ ಬಿದ್ದು ಹೋಗುವ ಸಂಭವವಿದೆ. ಕೊಚ್ಚೆಯಾಗಿರುವ ರಸ್ತೆಯಲ್ಲಿ ದೂರದಿಂದ ನೀರನ್ನು ಹೊತ್ತು ತರಬೇಕು ಜನರು ನೀರು ತರಲು ಪಡುವ ಪಾಡನ್ನು ಒಮ್ಮೆ ನೋಡಿ. ಎಷ್ಟು ದಿನ ಈ ರೀತಿ ಕಷ್ಟ ಪಡಬಹುದು ಅಧಿಕಾರಿಗಳಿಗೆ ಯಾಕೆ ಇದರ ಬಗ್ಗೆ ನಿರ್ಲಕ್ಷ?

ಬೂದಿಹಾಳ ಗ್ರಾಮದ ಜನರಿಗೆ ರಸ್ತಯ ನಿರ್ಮಾಣ, ಒಳಚರಂಡಿ, ನೀರಿನ ವ್ಯವಸ್ಥೆ, ಬಸ್ ತಂಗುದಾಣ ಮುಂತಾದ ಮೂಲಭೂತ ಸೌಕರ್ಯಗಳನ್ನು ಸಂಬಂಧ ಪಟ್ಟ ಅಧಿಕಾರಿಗಳು ಈ ಸಮಸ್ಯೆಗಳಿಗೆ ಸ್ಪಂದಿಸಿ ಜನರನ್ನು ಸಂಕಷ್ಟಗಳಿAದ ರಕ್ಷಿಸಬೇಕು ಇದು ಗ್ರಾಮಸ್ಥರ ಮನವಿಯಾಗಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಬೂದಿಹಾಳ ಗ್ರಾಮದ ಜನರ ಸಮಸ್ಯೆಗಳನ್ನು ಆದಷ್ಟು ಬೇಗ ಈ ಜಿಲ್ಲೆಯ ಅಧಿಕಾರಿಗಳು ಇದರತ್ತ ಗಮನ ಹರಿಸಿ ಜನರ ಕಷ್ಟಗಳನ್ನು ದೂರ ಮಾಡಲಿ ಮೂಲಭೂತ ಸೌಕರ್ಯಗಳು ಸಿಗಲಿ ಎಂಬುದೇ ವಿಜಯಾ ಟೈಮ್ಸ್ ಆಶಯವಾಗಿದೆ.

Exit mobile version