ಮುಂಬೈನಲ್ಲಿ ಭಾರೀ ಮಳೆ: ಎರಡು ದಿನ ರೆಡ್‍ ಅಲರ್ಟ್‍ ಘೋಷಣೆ

ಮುಂಬೈನಲ್ಲಿ ಕಳೆದ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಧಾರಾಕಾರ ಮಳೆಗೆ ಮುಂಬೈನ ಹಲವು ಪ್ರದೇಶಗಳು ಜಲಾವೃತವಾಗಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

ಮುಂಬೈನ ಗೊರೆಗಾಂವ್, ಕುರ್ಲಾ, ಬಾಂದ್ರಾ ಟಾಕೀಸ್, ದಾದರ್ ಸೇರಿದಂತೆ 26 ಪ್ರದೇಶಗಳ ರಸ್ತೆಗಳಲ್ಲಿ ಮೊಣಕಾಲು ಮಟ್ಟಕ್ಕೆ ನೀರು ನಿಂತಿದೆ. ಬೃಹತ್ ಮುಂಬೈ ಕಾರ್ಪೊರೇಷನ್ ಪ್ರಕಾರ ಕಳೆದ 10 ಗಂಟೆಗಳಲ್ಲಿ ಮುಂಬೈನಲ್ಲಿ 230 ಮಿ.ಮೀ ಮಳೆಯಾಗಿದೆ ಎಂದು ವರದಿಯಾಗಿದೆ.

ಭಾರೀ ಮಳೆಯಿಂದಾಗಿ ಮುಂಬೈನ ಜೀವನಾಡಿ ಆಗಿರುವ ಸ್ಥಳೀಯ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇಂದು ತುರ್ತು ಸೇವೆ ಹೊರತುಪಡಿಸಿ ನಗರದ ಎಲ್ಲಾ ಕಚೇರಿಗಳನ್ನು ಬಂದ್ ಮಾಡಲಾಗಿದೆ. ಅಲ್ಲದೇ ಮುಂದಿನ ಎರಡು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಮುಂಬೈ, ಥಾಣೆ, ರಾಯಘಡ ಹಾಗೂ ರತ್ನಗಿರಿಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

Exit mobile version