ಮುಖ್ಯ ಚುನಾವಣಾಧಿಕಾರಿಗೆ ಮೈಸೂರು ವಿವಿ ಡಾಕ್ಟರೇಟ್‍

ಮೈಸೂರು, ಅ. 20: ಮೈಸೂರು ವಿಶ್ವವಿದ್ಯಾನಿಲಯ ಸೋಮವಾರ 100ನೇ ಘಟಿಕೋತ್ಸವ ಆಚರಿಸಿಕೊಂಡಿತು. ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಅವರು ಮಂಡಿಸಿದ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್‌ ನೀಡಿ ಗೌರವಿಸಿದೆ.

ಸಂಜೀವ್‌ ಕುಮಾರ್‌ ಅವರು ವಿ.ವಿ.ಯ ಅಭಿವೃದ್ಧಿ ಅಧ್ಯಯನಗಳು ವಿಭಾಗದಲ್ಲಿ ʻಡಾ.ಶ್ರೀಜಯರ್‌ ದೇವರಾಜ್‌ ಅರಸ್‌ ಅವರ ಮಾರ್ಗದರ್ಶನದಲ್ಲಿ ʻMGNREGA, Rights, Processes and Sustainable Livelihood: A Critical Study in Karnataka’ ಮಹಾಪ್ರಬಂಧ ಮಂಡಿಸಿದ್ದರು.

ಸೋಮವಾರ ನಡೆದ ಘಟಿಕೋತ್ಸವದಲ್ಲಿ ಅವರಿಗೆ ಡಾಕ್ಟರೇಟ್‌ ಪದವಿ ಪ್ರದಾನ ಮಾಡಲಾಯಿತು. ಹಿರಿಯ ಐಎಎಸ್‌ ಅಧಿಕಾರಿ ಸಂಜೀವ್‌ ಕುಮಾರ್‌ (58) ಪ್ರಸ್ತುತ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Exit mobile version