ಮುಚ್ಚಲಿದೆ ಯಾಹೂ ಡಾಟ್ ಕಾಮ್

ನವದೆಹಲಿ, ಅ. 14: ಇದೀಗ ಇ-ಮೇಲ್​ ಎಂದರೆ ಜಿ-ಮೇಲ್​ ಎನ್ನುವ ಪರಿಸ್ಥಿತಿ ಇದೆ. ಆದರೆ ಇದಕ್ಕೂ ಮೊದಲು ಪ್ರಚಲಿತವಾಗಿದ್ದ ಇ-ಮೇಲ್​ಗಳಲ್ಲಿ ಯಾಹೂ ಡಾಟ್​ ಕಾಮ್​ ಒಂದು. ಆದರೆ ಯಾಹು ಡಾಟ್ ಕಾಮ್  ಒಂದು ವರ್ಷದಿಂದ ಅತೀವ ಸಂಕಷ್ಟಕ್ಕೆ ಒಳಗಾಗಿದೆ.  ಇದೀಗ ಇದು ತೀವ್ರ ನಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಇದನ್ನು ಇನ್ನೆರಡು ತಿಂಗಳಿನಲ್ಲಿ ಮುಚ್ಚಲಾಗುತ್ತಿದೆ ಎಂದು ಮಾಹಿತಿ ಮೂಲಗಳು ತಿಳಿಸಿವೆ.

ಯಾಹೂ ಡಾಟ್​ ಕಾಮ್​ ಒಡೆತನದಲ್ಲಿ ಇರುವ ವೆರಿಜೋನ್​ ಈ ವಿಷಯವನ್ನು ಪ್ರಕಟಿಸಿದ್ದಾರೆ.  ಡಿಸೆಂಬರ್ 15ರಿಂದ ಯಾಹೂ ಇ- ಮೇಲ್​ ಸ್ಥಗಿತಗೊಳಿಸಲಾಗುವುದು ಎಂದು ಹೇಳಿದೆ.

2017ರಲ್ಲಿ ವೆರಿಜೋನ್​ ಕಂಪೆನಿ ಯಾಹೂವನ್ನು ಖರೀದಿ ಮಾಡಿತ್ತು. ಹಿಂದೊಮ್ಮೆ ಅತಿದೊಡ್ಡ ಸಂದೇಶ ಬೋರ್ಡ್ ಎಂದೇ ಪ್ರಸಿದ್ಧಿ ಪಡೆದಿದ್ದ ಯಾಹೂ ಇದೀಗ ತನ್ನ ಅನೇಕ ಹಳೆಯ ಬಳಕೆದಾರರು ಇದುವರೆಗೂ ಯಾಹೂ ಡಾಟ್​ ಕಾಮ್​ ಬಳಸುತ್ತಿದ್ದಾರೆ. ಅವರು ಬೇರೆ ಯಾವುದೇ ಇ-ಮೇಲ್​ಗೆ ವರ್ಗಾವಣೆಗೊಂಡಿಲ್ಲ. ಅಂಥವರ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಂಡು ಹೋಗುವುದು ನಮ್ಮ ಕರ್ತವ್ಯವಾಗಿತ್ತು. ಆದರೆ ಇದೀಗ ಕಠಿಣ ನಿರ್ಧಾರ ತೆಗೆದುಕೊಳ್ಳಲೇಬೇಕಾಗಿದೆ ಎಂದು ವೆರಿಜೋನ್​ ಕಂಪೆನಿ ಹೇಳಿದೆ. ಈಗಾಗಲೇ ತುಂಬಾ ನಷ್ಟ ಅನುಭವಿಸಿದ್ದೇವೆ. ಆದ್ದರಿಂದ ತಮಗೆ ಬೇರೆ ದಾರಿ ಇಲ್ಲ ಎಂದು ಕಂಪೆನಿ ಹೇಳಿಕೊಂಡಿದೆ.

ನೀವು ಸ್ವೀಕರಿಸಿರುವ ಅಥವಾ ನಿಮ್ಮ ಇನ್​ಬಾಕ್ಸ್​ನಲ್ಲಿ ಬೇರೆಯವರು ಕಳುಹಿಸಿರುವ ಮೆಸೇಜ್‌. ವಿಡಿಯೋ, ಫೋಟೋಗಳು ಯಾವುದೇ ಕಾರಣಕ್ಕೂ ಡಿಲೀಟ್​ ಆಗುವುದಿಲ್ಲ. ಅವು ಸುರಕ್ಷಿತವಾಗಿ ಇರುತ್ತವೆ. ಆದರೆ ಡಿಸೆಂಬರ್​ 15ರ ನಂತರ ನೀವು ಮೇಲ್​ ಕಳುಹಿಸುವುದು ಹಾಗೂ ಸ್ವೀಕರಿಸುವುದು ಸಾಧ್ಯವಾಗುವುದಿಲ್ಲ ಎಂದಿದೆ.

ಅಮೆರಿಕನ್ ವೈರ್‌ಲೆಸ್ ಸಂವಹನ ಸೇವಾ ಪೂರೈಕೆದಾರ ವೆರಿಜೋನ್​ ಯಾಹೂನ ಇಂಟರ್​ನೆಟ್​ ವ್ಯವಹಾರವನ್ನು 2017ರಲ್ಲಿ 84.8 ಬಿಲಿಯನ್‌ ಡಾಲರ್​ಗೆ ಖರೀದಿ ಮಾಡಿತ್ತು. 2001ರಲ್ಲಿ ಯಾಹೂ ಇಂಟರ್​ನೆಟ್​ ಸೇವೆ ಆರಂಭವಾಗಿತ್ತು.

Exit mobile version