ಯಶಸ್ವಿಯಾಯ್ತು 2020 ರ ಬಹರೈನ್ ಬಂಟ ಸಮಿತಿಯ ಮೊದಲ ಕಾರ್ಯಕ್ರಮ

ಬಂಟ ಸಂಘ ಅಂದ್ರೆ ಅಲ್ಲಿ ಸಂಪ್ರದಾಯಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ.ಅದೇ ರೀತಿ ಇತ್ತೀಚೆಗೆ ರಚನೆಗೊಂಡ ಬಹರೈನ್ ಬಂಟ ಸಮಿತಿಯ 2020ರ ಮೊದಲ ಶುಭ ಕಾರ್ಯ ಜರುಗಿದ್ದು ಯಶಸ್ವಿಯಾಗಿದೆ.ಬಹರೈನ್ ಬಂಟ ಸಂಘದ ವತಿಯಿಂದ ಜನವರಿ 24 ರ ಮುಸ್ಸಂಜೆಯ ಶುಭ ಗಳಿಗೆಯಲ್ಲಿ ಸತ್ಯನಾರಾರಣ ಪೂಜೆ ಮತ್ತು ದುರ್ಗಾಪೂಜೆ ಬಹಳ ವಿಜೃಂಭಣೆಯಿಂದ ನಡೆದಿದೆ.

ಬಹರೈನ್‍ನ ಶ್ರೀ ಕೃಷ್ಣಮಂದಿರದಲ್ಲಿ ಪೂಜೆ ಜರುಗಿದ್ದು;ವೇದಮೂರ್ತಿ ನಯನ ಕೃಷ್ಣ ಭಟ್ ಹಾಗೂ ವೇದಮೂರ್ತಿ ಅರುಣ್‍ಶಂಕರ್ ಭಟ್ ಪೌರೋಹಿತ್ಯದಲ್ಲಿ ಶಾಸ್ತ್ರೋಕ್ತವಾಗಿ ಪೂಜೆ ಪುನಸ್ಕಾರಗಳು ಸಂಪನ್ನಗೊಂಡಿದ್ದು; ಬಂಟ ಸಮುದಾಯದ ಸದಸ್ಯರು ಸೇರಿದಂತೆ ಬಹರೈನ್‍ನಲ್ಲಿ ನೆಲೆನಿಂತ ಹಿಂದೂ ಧರ್ಮದ ಸುಮಾರು 1000ಕ್ಕೂ ಹೆಚ್ಚು ಮಂದಿ ಈ ಪೂಜೆಯಲ್ಲಿ ಭಾಗಿಯಾಗಿ ಶ್ರೀ ದೇವರ ಕೃಪೆಗೆ ಪಾತ್ರರಾಗಿದ್ದಾರೆ. ಅಂದಹಾಗೆ 2020 ರ ಬಹರೈನ್ ಬಂಟ ಸಮಿತಿಯ ಮೊಟ್ಟ ಮೊದಲ ಕಾರ್ಯಕ್ರಮದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು ಅಷ್ಟ ರೀತಿಯ ಕಾರ್ಯಕ್ರಮ..

ಬಂಟ ಸುಮದಾಯದ ಮಕ್ಕಳು , ಬಂಟೇತರ ಮಕ್ಕಳು , ಹಿರಿಯರಿಂದ ಭಜನೆ, ಭಜನೆ ಕುಣಿತ, ಸಂಗೀತಸೇವೆ, ಯಕ್ಷಗಾನ, ಭರತನಾಟ್ಯ, ಚಿಂಗಾರಿ ಮೇಳ ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮ ಬಹಳ ಅರ್ಥಪೂರ್ಣ ಹಾಗೂ ಉಳಿದ ಸಮುದಾಯದವರಿಗೂ ಮಾದರಿಯಾಗುವಂತೆ ಮೂಡಿಬಂದಿದೆ. ಇನ್ನು ಈ ಸಂಭ್ರಮದಲ್ಲಿ ಈ ಬಾರಿಯ ಬಹರೈನ್ ಬಂಟ ಸಮಿತಿಯ ಸಮಿತಿಯ ಮುಖ್ಯಸ್ಥರು , ಭಕ್ತಾಧಿಗಳು ಭಾಗವಹಿಸಿದ್ದು ಅನ್ನಪ್ರಸಾದ ಸ್ವೀಕರಿಸಿ ಸಂತೃಪ್ತರಾಗಿದ್ದಾರೆ.

Exit mobile version