ಯುಪಿ ಪೊಲೀಸ್ ವಿರುದ್ಧ ಬಿಜೆಪಿ ನಾಯಕಿ ಕಿಡಿ !

ಮುಂಬೈ: ಉತ್ತರ ಪ್ರದೇಶದ ಹತ್ರಾಸ್‌ ಗ್ಯಾಂಗ್ ರೇಪ್ ಸಂತ್ರಸ್ಥೆಯ ಕುಟುಂಬದ ಭೇಟಿಗೆ ಬರುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರ ಮತ್ತು ಪೊಲೀಸರ ನಡುವೆ ನಡೆದ ಗಲಾಟೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯ ಬಟ್ಟೆಯನ್ನು ಎಳೆದಾಡಿದ ಯುಪಿ ಪೊಲೀಸರ ವಿರುದ್ಧ ಬಿಜೆಪಿ ನಾಯಕಿಯೇ ಕಿಡಿಕಾರಿದ್ದಾರೆ.

ಮಹಿಳಾ ರಾಜಕಾರಣಿಯ ಬಟ್ಟೆಯ ಮೇಲೆ ಕೈ ಹಾಕಲು ಪೊಲೀಸರಿಗೆ ಎಷ್ಟು ಧೈರ್ಯ? ಪೊಲೀಸರು ಯಾವಾಗಲೂ ತಮ್ಮ ಇತಿಮಿತಿಯನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ಪ್ರಿಯಾಂಕಾ ಗಾಂಧಿಯವರ ಬಟ್ಟೆ ಹಿಡಿದ ಪೊಲೀಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಉತ್ತರಪ್ರದೇಶ  ಸಿ ಎಂ ಯೋಗಿ ಆದಿತ್ಯನಾಥ್ ಅವರನ್ನು ಮಹಾರಾಷ್ಟ್ರದ ಬಿಜೆಪಿ ಉಪಾಧ್ಯಕ್ಷೆ ಚಿತ್ರಾ ವಾಘೆ ಅವರು ಆಕ್ರೋಶಿತರಾಗಿ ಟ್ವೀಟ್ ಮಾಡುವ ಮೂಲಕ ಆಗ್ರಹಿಸಿದ್ದಾರೆ.

Exit mobile version