ರವಿಚಂದ್ರನ್ ಜೊತೆಗೆ ನಟಿಸಿದ್ದ ಆ ನಟಿ ಈಗ ರಾಜಕೀಯದಲ್ಲಿ..

ರವಿಚಚಂದ್ರನ್ ನಟನೆಯ “ನೀಲಕಂಠ” ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಮಾದಕ ಬೆಡಗಿ ನಮಿತಾ..ಕನ್ನಡ  ತೆಲಗು, ತಮಿಳು ಮಲಯಾಳಂ ಸೇರಿದಂತೆ ಅನೇಕ ಭಾಷೆಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿರುವ ಈ ನಟಿ ದರ್ಶನ್ ಜೊತೆಗೆ ಇಂದ್ರ,ಹೂ, ನಮಿತಾ ಐ ಲವ್ ಯೂ, ಬೆಂಕಿ ಗಾಳಿ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.

ಹೀಗೆ ಚಿತ್ರರಂಗದಲ್ಲಿ ಭಾರೀ ಬೇಡಿಕೆ ಹೊಂದಿರುವಾಗಲೇ 2017ರಲ್ಲಿ ನಮಿತಾ ವಿವಾಹಿತರಾಗಿ, ಚಿತ್ರರಂಗಕ್ಕೆ ಬೈ ಬೈ ಹೇಳಿದ್ದರು..ಆದ್ರೀಗ ಫುಲ್ ಟೈಂ ರಾಜಕೀಯದಲ್ಲೇ ತೊಡಗಿಸಿಕೊಳ್ಳಲು ಸಿದ್ಧವಾಗ್ತಿದ್ದಾರೆ. ಹೌದು.ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಸಮ್ಮುಖದಲ್ಲಿ ನಮಿತಾರವರು ಈಗ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಈ ವಿಚಾರ ಹಲವರಲ್ಲಿ ಸಂಭ್ರಮ ತಂದರೆ, ಪಡ್ಡೆಗಳ ಬೇಸರಕ್ಕೆ ಕಾರಣವಾಗಿದೆ..ಮೊದಲೇ ಈ ಮಾದಕ ಬೆಡಗಿ ಮದ್ವೆಯಾಗಿ ಸಿನಿ ರಂಗದಿಂದ ದೂರ ಉಳಿದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದ್ದು, ಸದ್ಯ ರಾಜೀಯಕ್ಕಿಳಿದು ಬಣ್ಣದ ಬದುಕಿಗೆ ಬೈ ಬೈ ಹೇಳ್ತಿದ್ದಾರಾ ಅಂತ ಅಭಿಮಾನಿಗಳು ತಲೆ ತಲೆ ಚಚ್ಕೋತಿದ್ದಾರಂತೆ. }#p

Exit mobile version