ರಾಜಮನೆತನದ ಖಾಸಗಿ ದರ್ಬಾರ್‌ ಆರಂಭ

ಮೈಸೂರು,ಅ. 17: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ರಾಜಮನೆತನದ ಖಾಸಗಿ ದರ್ಬಾರ್ ಇಂದು ಆರಂಭವಾಯಿತು. ಕೊರೊನಾ ಹಿನ್ನೆಲೆಯಲ್ಲಿ ಮೈಸೂರು ಅರಮನೆಯಲ್ಲಿ ಕೂಡ ರಾಜಮನೆತನದ ಖಾಸಗಿ ದಸರಾ ಕೂಡ ಸರಳ ಮತ್ತು ಸಾಂಪ್ರದಾಯಿಕವಾಗಿತ್ತು.

ದಸರಾ ಮಹೋತ್ಸವದ ಹಿನ್ನೆಲಯಲ್ಲಿ ಇಂದು ಮುಂಜಾನೆಯಿಂದಲೇ ಅರಮನೆಯ ಒಳಗೆ ಹೋಮ ಹವನಗಳು ನಡೆಯಿತು. ತರುವಾಯ ಇಂದು ಬೆಳಿಗ್ಗೆ 6 ಗಂಟೆ 15 ನಿಮಿಷದಿಂದ 6 ಗಂಟೆ 30 ನಿಮಿಷದೊಳಗೆ ಸಲ್ಲುವ ಶುಭ ಲಗ್ನದಲ್ಲಿ ಸಿಂಹಾಸನಕ್ಕೆ ಸಿಂಹವನ್ನು ಜೋಡಣೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.

ತುರವಾಯ ಬೆಳಿಗ್ಗೆ 7 ಗಂಟೆ 45 ನಿಮಿಷದಿಂದ 8 ಗಂಟೆ 15 ನಿಮಿಷದೊಳಗೆ ಸಲ್ಲುವ ಶುಭ ಮುಹೂರ್ಥದಲ್ಲಿರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಕಂಕಣಧಾರಣೆ ಮಾಡಲಾಯಿತು. ತರುವಾಯ ಹಲವು ಖಾಸಗಿ ಕಾರ್ಯಕ್ರಮಗಳು ನಡೆದು ಹತ್ತು ಗಂಟೆ ವೇಳೆ ಖಾಸಗಿ ದರ್ಬಾರ್ ಕೂಡ ನೆರವೇರಿತು. ಜಯಘೋಷದ ಹಿಮ್ಮಳದೊಂದಿಗೆ ಯದುವೀರ್ ಅವರು ಸಿಂಹಾಸನದಲ್ಲಿ ಕುಳಿತರು. ಇದೇ ರೀತಿ ಪ್ರತಿದಿನ ದಸರಾ ಜಂಬೂ ಸವಾರಿ ದಿನದ ತನಕ ಖಾಸಗಿ ದರ್ಬಾರ್ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

Exit mobile version