ರಾಜ್ಯದಲ್ಲಿ ಕೊರೊನಾ ಮರಣ ಪ್ರಮಾಣ ಕಡಿಮೆ: ಸಚಿವ ಡಾ.ಕೆ. ಸುಧಾಕರ್

ರಾಜ್ಯದಲ್ಲಿ ಕೊರೊನಾ ಸೋಂಕಿತರು ಹಾಗೂ ಮೃತರ ಸಂಖ್ಯೆ ಹೆಚ್ಚುತ್ತಿದ್ದರೂ, ಕೊರೊನಾದಿಂದ ಸಂಭವಿಸುತ್ತಿರುವ ಮರಣ ಪ್ರಮಾಣ ಇತರೆ ರಾಜ್ಯಗಳಿಗಿಂತ ಕಡಿಮೆ ಇದೆ.

ದೇಶದ ಪ್ರತಿ ದಶಲಕ್ಷ ಜನಸಂಖ್ಯೆಗೆ ಕೋವಿಡ್‍ನಿಂದ ಮರಣ ಹೊಂದುತ್ತಿರುವವರ ಸಂಖ್ಯೆ ಕರ್ನಾಟಕಕ್ಕಿಂತ ದೆಹಲಿಯಲ್ಲಿ 5 ಪಟ್ಟು ಮತ್ತು ಮಹಾರಾಷ್ಟ್ರದಲ್ಲಿ 3 ಪಟ್ಟು ಹೆಚ್ಚಿದೆ. ಬೆಂಗಳೂರು ನಗರದಲ್ಲಿ ಮರಣ ಪ್ರಮಾಣವು ಇತರೆ ಮಹಾನಗರಗಳಿಗಿಂತ ಕಡಿಮೆ ಇದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಟ್ವೀಟ್‍ ಮಾಡಿದ್ದಾರೆ.

ಪ್ರತಿ ಹತ್ತು ಲಕ್ಷ ಜನಸಂಖ್ಯೆ ಇರುವ ನಗರಗಳಲ್ಲಿ ಮುಂಬೈ(521 ಮೃತರು), ಚೆನ್ನೈ(306 ಮೃತರು), ಪುಣೆ(242 ಮೃತರು), ಅಹಮ್ಮದಾಬಾದ್(223 ಮೃತರು), ದೆಹಲಿ(202 ಮೃತರು), ಕೊಲ್ಕೊತ್ತಾ(182 ಮೃತರು), ಬೆಂಗಳೂರು(115 ಮೃತರು).
ಇನ್ನೂ ರಾಜ್ಯಗಳ (ಪ್ರತಿ 10 ಲಕ್ಷ ಜನಸಂಖ್ಯೆಗೆ) ಮೃತರ ಪ್ರಮಾಣದಲ್ಲಿ ದೆಹಲಿ (202 ಮೃತರು) ಪ್ರಥಮ ಸ್ಥಾನದಲ್ಲಿದ್ದರೆ. ಮಹಾರಾಷ್ಟ್ರ (129 ಮೃತರು), ತಮಿಳುನಾಡು (56 ಮೃತರು) ಹಾಗೂ ಕರ್ನಾಟಕ (39 ಮೃತರು).


Exit mobile version