ರಾಜ್ಯದಲ್ಲಿ 750ಕ್ಕೇರಿದ ಕೋರೋನಾ ; ಒಂದೇ ದಿನದಲ್ಲಿ ಎಷ್ಟು ಕೇಸ್ ಗೊತ್ತಾ?

ಕೊರೋನಾ ಮಹಾಮಾರಿಯ ಅಟ್ಟಹಾಸ ನಿಲ್ಲುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ವಿಶ್ವವನ್ನೆ ಬಡಿದು ಉರುಳಿಸುತ್ತಿದೆ.. ಇತ್ತ ಭಾರತದಲ್ಲೂ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ .ದಿನಂಪ್ರತಿ ಸಾವಿನ ಸಂಖ್ಯೆ ಜೊತೆಗೆ ಸೋಂಕಿನ ಸಂಖ್ಯೆಯು ಹೆಚ್ಚುತ್ತಿದೆ. ಇತ್ತ ರಾಜ್ಯದಲ್ಲಿ ಲಾಕ್‍ಡೌನ್ ಸಡಿಲಿಕೆ ಹಿನ್ನಲೆ ಮಿತಿಮೀರಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು ಜನರಲ್ಲಿ ಆತಂಕ ಮೂಡಿಸುತ್ತಿದೆ.

ಇಂದು ಒಂದೇ ದಿನಕ್ಕೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಅಚ್ಚರಿಮೂಡಿಸುವಂತೆ ಹೆಚ್ಚಿದ್ದು; ಹೀಗೆ ಮುಂದುವರಿದ್ರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಖ್ಯೆ ಹೆಚ್ಚಾಗಲು ಅಡಿಪಾಯ ಹಾಕಿದಂತಿದೆ.ಇಷ್ಟು ದಿನ ರಾಜ್ಯದಲ್ಲಿ ದಿನಕ್ಕೆ ಅಬ್ಬಬ್ಬಾ ಅಂದ್ರೆ 10 ಪ್ರಕರಣಗಳು ಮಾತ್ರ ದಾಖಲಾಗುತ್ತಿದ್ದವು ಆದ್ರೆ ಲಾಕ್ ಡೌನ್ ಸಡಿಲಿಕೆ ಮಾಡಿದ್ದೆ ತಡ ಗುರುವಾರ ಸಂಜೆಯಿಂದ ಶುಕ್ರವಾರ ಮಧ್ಯಾಹ್ನಕ್ಕೆ ದಾಖಲಾಗಿರುವ ಕೊರೋನಾ ಪ್ರಕರಣ 45 ಕೇಸ್‍ಗಳು . ಇದು ಸ್ವತ: ಆರೋಗ್ಯ ಇಲಾಖೆಯಿಂದ ಹೊರಬಿದ್ದ ಮಾಹಿತಿ. ಈ ಮೂಲಕ ಒಟ್ಟು ರಾಜ್ಯದಲ್ಲಿ ಒಟ್ಟು ಕೊರೋನಾ ಪ್ರಕರಣಗಳ ಸಂಖ್ಯೆ 750 ಕ್ಕೇರಿದೆ.

ಇನ್ನು ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಬೆಂಗಳೂರಲ್ಲಿ 7 ಪ್ರಕರಣಗಳು ದಾಖಲಾಗಿದ್ದು; ಇನ್ನುಳಿದಂತೆ ಬೆಳಗಾವಿ 11, ದಾವಣಗೆರೆ 14, ಉತ್ತರಕನ್ನಡದಲ್ಲಿ 12 ಪ್ರಕರಣಗಳು ದಾಖಲಾಗಿದೆ.ಇನ್ನು ಆರೇಂಜ್ ಝೋನ್‍ನಲ್ಲಿದ್ದ ಉತ್ತರ ಕನ್ನಡ ಈಗ ರೆಡ್ ಝೋನ್‍ಗೆ ಮಾರ್ಪಾಡುಗೊಂಡಿದೆ.

Exit mobile version