ವರವರ ರಾವ್ ಜಾಮೀನು ಅರ್ಜಿ ನಿರಾಕರಣೆ

ಮುಂಬೈ, ನ. 12: ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಕವಿ ಹಾಗೂ ಹೋರಾಟಗಾರ ವರವರ ರಾವ್ ಅವರಿಗೆ ಜಾಮೀನು ನಿರಾಕರಿಸಿರುವ ಬಾಂಬೆ ಹೈ-ಕೋರ್ಟ್, ವಿಚಾರಣೆಯನ್ನು ನ.17ಕ್ಕೆ ಮುಂದೂಡಿದೆ.

ಈ ನಡುವೆ ಭೀಮಾ ಕೋರೆಗಾಂವ್ ಪ್ರಕರಣದಡಿಯಲ್ಲಿ ಬಂಧಿಯಾಗಿರುವ ವರವರ ರಾವ್ ಅವರ ವೈದ್ಯಕೀಯ ತಪಾಸಣೆಗೆ ಬಾಂಬೆ ಹೈಕೋರ್ಟ್ ಅನುಮತಿ ನೀಡಿದೆ. ಈ ವೇಳೆ ವೈದ್ಯಕೀಯ ವಿಡಿಯೋ ತಪಾಸಣೆ ಸಾಧ್ಯವಾಗದಿದ್ದಲ್ಲಿ ಜೈಲಿಗೆ ತೆರಳಿ ಭೌತಿಕವಾಗಿ ವೈದ್ಯಕೀಯ ಪರೀಕ್ಷೆ ನಡೆಸಬಹುದು ಎಂದ ನ್ಯಾಯಾಲಯ ತಿಳಿಸಿದ್ದು, ನ.16ಕ್ಕೆ ವೈದ್ಯಕೀಯ ತಪಾಸಣೆ ವರದಿ ಸಲ್ಲಿಸಲು ಸೂಚನೆ ನೀಡಿದೆ ಎನ್ನಲಾಗಿದೆ.

Exit mobile version