Bengaluru: ಲೋಕಸಭೆಯ ಚುನಾವಣೆಯ ಹಿನ್ನೆಲೆ ಅಭ್ಯರ್ಥಿಗಳ ಪರ ಮತಯಾಚನೆ ಮಾಡುವಾಗ (GT Devegowda Against Siddaramaiah) ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ರನ್ನು
ದೇವೇಗೌಡರೇ ವಿದೇಶಕ್ಕೆ ಕಳಿಸಿಕೊಟ್ಟರು, ಅವನಿಗೆಂದೇ ಪ್ರಧಾನಿ ಮೋದಿ ಪಾಸ್ಪೋರ್ಟ್ ಸಿದ್ಧಮಾಡಿ ಕೊಟ್ಟರು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಎಲ್ಲೆಡೆ ಹೇಳುತ್ತಿದ್ದಾರೆ. ಈ ಸಮಯದಲ್ಲಿ
ರಾಜಕೀಯಕ್ಕಾಗಿ ಸುಳ್ಳು ಹೇಳುವುದು ಶೋಭೆಯಲ್ಲ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ (G T Devegowda) ಕಿಡಿ ಕಾರಿದ್ದಾರೆ.
ರಾಜ್ಯ ಸರ್ಕಾರ ಏಕೆ ತನಿಖೆ ಮಾಡುತ್ತಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಕೇಳಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಹೀಗೆ ಮಾತಾಡಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದಕ್ಕೆ
ಈ ರೀತಿ ಸಕಾ ಸುಮ್ಮನೆ ಆರೋಪಿಸುತ್ತಿದ್ದಾರೆ.ಸಂಸದರಾಗಿ ಆಯ್ಕೆಯಾಗಿ ಪ್ರಮಾಣವಚನ ಸ್ವೀಕರಿಸಿದ ಮೇಲೆ ಅವರಿಗೆ ರೆಡ್ ಪಾಸ್ಪೋರ್ಟ್ (Red Passport) ಕೊಡುತ್ತಾರೆ. ರೆಡ್ ಪಾಸ್ಪೋರ್ಟ್ ಇದ್ದವರು
ವಿದೇಶಗಳಿಗೆ ಹೋಗಬಹುದು. ಅವರಿಗೆ ದೇವೇಗೌಡರ ಸಹಾಯವಾಗಲಿ, ಕುಮಾರಸ್ವಾಮಿಯ (GT Devegowda Against Siddaramaiah) ಸಲಹೆಯಾಗಲಿ ಬೇಕಾಗಿಲ್ಲ ಎಂದಿದ್ದಾರೆ.
ಈ ಹಿಂದೆ ಕಾಂಗ್ರೆಸ್ನಲ್ಲಿ (Congress) ಎಷ್ಟು ಜನ ವಿಡಿಯೋ ಪ್ರಕರಣದಲ್ಲಿ ಸಿಕ್ಕಿಬಿದ್ದವರು ಬಿ ಫಾರ್ಮ್ ನೀಡಿ ಶಾಸಕರಾಗಿದ್ದಾರೆ.ವಿಡಿಯೋ ಹೆಸರಲ್ಲಿ ಪ್ರಖ್ಯಾತಿ ಪಡೆದವರಿದ್ದಾರೆ.ಇನ್ನು ಪ್ರಜ್ವಲ್ ರೇವಣ್ಣ ಈ
ಪ್ರಕರಣದಲ್ಲಿ ಸಾಬೀತಾಗಿ ಬಂದರೆ ನೂರಕ್ಕೆ ನೂರು ಉಚ್ಚಾಟನೆ ಮಾಡುತ್ತೇವೆ ಈಗಾಗಲೇ ಅಮಾನತ್ತು ಕೂಡ ಮಾಡಿದ್ದೇವೆ. ಈ ಮೊದಲೇ ವಿಡಿಯೋ ಪ್ರಕರಣ ನಿಮಗೆ ಗೊತ್ತಿದ್ದರೂ ಚುನಾವಣೆ ಸಮಯದಲ್ಲಿ
ಎಲ್ಲರ ಮನಸ್ಥಿತಿ ಹಾಳುಮಾಡಿದ್ದೀರಿ ಎಂದು ಸಿಎಂ ಸಿದ್ಧರಾಮಯ್ಯ (CM Siddaramaiah) ವಿರುದ್ಧ ಹೇಳಿಕೆ ನೀಡಿದ್ದಾರೆ.
ಇದನ್ನು ಓದಿ: ಕಾಂಗ್ರೆಸ್ OBC ಮೀಸಲಾತಿಯಲ್ಲಿ ಮುಸ್ಲಿಂಮರನ್ನು ಸೇರಿಸಲು ಯತ್ನಿಸುತ್ತಿದೆ: ಬಿಜೆಪಿ ಆರೋಪ