ವಿಷಕಾರಿ ಹೊಗೆಯನ್ನುಣಿಸುತ್ತಿದೆ ಕಾರ್ಕಳದ ಡಂಪಿಂಗ್ ಯಾರ್ಡ್

|Karkala Dumping Yard emitting Toxic Smoke | citizen journalist  | vijayatimes#karkala

ಇದು ಉಡುಪಿ ಜಿಲ್ಲೆಯ ಕಾರ್ಕಳ ಪುರಸಭೆ ವ್ಯಾಪ್ತಿಯ ಕರಿಯಕಲ್ಲು ಘನತ್ಯಾಜ್ಯ ನಿರ್ವಹಣಾ ಘಟಕದ ಚಿತ್ರಣ. ಇಲ್ಲಿ ಕಳೆದ ಸೋಮವಾರ ಭಾರೀ ಬೆಂಕಿ ಅವಘಡ ಸಂಭವಿಸಿತ್ತು. ಈ ಬೆಂಕಿ ಅವಘಡ ಸಂಭವಿಸಿ. ಒಂದು ವಾರ ಕಳೆದರೂ ಸುಮಾರು ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಹೊಗೆ, ವಾಸನೆ ಹರಡುತ್ತಿದೆ.

ಬೃಹತ್ ಪ್ರಮಾಣದಲ್ಲಿ ಪ್ಲಾಸ್ಟಿಕ್‌ನಂತಹ ತ್ಯಾಜ್ಯಗಳು ಇಲ್ಲಿ ಶೇಖರಣೆಯಾಗುವ ಕಾರಣ, ಸಣ್ಣ ಪ್ರಮಾಣದಲ್ಲಿ ಬೆಂಕಿ ಹತ್ತಿಕೊಂಡರು ಇಡೀ ಪ್ರದೇಶಕ್ಕೆ ಹಾನಿಯುಂಟಾಗುತ್ತದೆ. ಅದೇ ರೀತಿಯಲ್ಲಿ ಇಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಂಕಿ ಅವಘಡದಿಂದಾಗಿ ಇಡೀ ಡಂಪಿಂಗ್ ಯಾರ್ಡ್ ಹೊತ್ತಿ ಉರಿದಿದೆ. ಇದರಿಂದಾಗಿ ದಟ್ಟ ವಿಷಕಾರಿ ಹೊಗೆ ವಾತಾವರಣದಲ್ಲಿ ಹರಡಿಕೊಂಡಿದೆ. 

ಈ ಡಂಪಿಂಗ್ ಯಾರ್ಡ್ ಕೇಂದ್ರಭಾಗವಾಗಿದ್ದು, ಇದರ ಸುತ್ತಮುತ್ತ ಮಿಯಾರು, ಸಾಣೂರು, ನಿಟ್ಟೆ, ಪುಲ್ಕೇರಿ, ಕರಿಯಕಲ್ಲು, ಕಾಲಿಕಾಂಬಾ, ದಾನಶಾಲೆ, ಆನೆಕೆರೆ ಹೀಗೆ ಅನೇಕ ಉಪಗ್ರಾಮಗಳಿವೆ. ಇಲ್ಲಿ ಸಾವಿರಾರು ಮನೆಗಳಿರುವ ಕಾರಣ ಇಲ್ಲಿನ ಅನೇಕ ಸಾರ್ವಜನಿಕರು ಶ್ವಾಸ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದು, ಅನೇಕರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೇವಲ ಸಾರ್ವಜನಿಕರಿಗೆ ಮಾತ್ರವಲ್ಲದೇ, ಪ್ರಾಣಿ, ಪಕ್ಷಿಗಳಿಗೂ ತೊಂದರೆಯಾಗಿದೆ. ಇದಕ್ಕೆ ದೃಷ್ಟಾಂತವೆಂದರೆ ಇದೇ ಡಂಪಿಂಗ್ ಯಾರ್ಡ್ ಸಮೀಪದ ಮನೆಯೊಂದರಲ್ಲಿನ ನಾಯಿಯೊಂದು ಈ ತೀವ್ರ ಹೊಗೆಯಿಂದಾಗಿ ಶ್ವಾಸ ಸಂಬಂಧಿ ಕಾಯಿಲೆಗೀಡಾಗಿ ಅಸುನೀಗಿದೆ. ಅಲ್ಲದೇ ಸ್ವಚ್ಛಂದವಾಗಿ ಒಡಾಡುತ್ತಿದ್ದ ಪಕ್ಷಿಗಳಿಗೂ ತೊಂದರೆಯಾಗಿದ್ದು, ಸಂಚಾರವೂ ಕಡಿಮೆಯಾಗಿದೆ ಎನ್ನುತ್ತಾರೆ ಸ್ಥಳೀಯರು…

ಈ ದಟ್ಟ ಹೊಗೆಯ ತೀವ್ರತೆಯಿಂದಾಗಿ ಕರಿಯಕಲ್ಲು ಸುತ್ತಮುತ್ತಲಿನ ಪರಿಸರದ ಸರ್ವನಾಶವಾಗಿದೆ. ಅಲ್ಲದೇ ಈ ಡಂಪಿಂಗ್ ಯಾರ್ಡ್ನಿಂದ 500 ಮೀಟರ್ ದೂರದಲ್ಲಿರುವ ಗೊಮಟೆಶ್ವರ ವಿಗ್ರಹ ಹಾಗೂ ಚತುರ್ಮುಖ ಬಸದಿಗೆ ಹಾನಿಯುಂಟಾಗುತ್ತಿದೆ, ಅಲ್ಲದೇ ಈ ಐತಿಹಾಸಿಕ ಪ್ರವಾಸಿ ತಾಣಗಳಿಗೆ ಆಗಮಿಸುವ ಪ್ರವಾಸಿಗರಿಗೂ ತೊಂದರೆಯುಂಟಾಗುತ್ತಿದೆ.

ಇದು ಇದೇ ಮೊದಲ ಬಾರಿಗೆ ಆಗುತ್ತಿರುವ ಸಮಸ್ಯೆಯೇನಲ್ಲ. ವರ್ಷದಲ್ಲಿ ಮೂರು ಬಾರಿ ಇದೇ ರೀತಿ ಘನತ್ಯಾಜ್ಯಕ್ಕೆ ಬೆಂಕಿ ನೀಡುತ್ತಿದ್ದಾರೆ. ಇದರಿಂದಾಗಿ ಪ್ರತಿವರ್ಷ ಮೂರು ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಎನ್ನುತ್ತಾರೆ ಸ್ಥಳೀಯರು…

ಈ ಘಟನೆಗೆ ಪ್ರಮುಖ ಕಾರಣ ಇಲ್ಲಿನ ಘನತ್ಯಾಜ್ಯವನ್ನು ಸರಿಯಾದ ರೀತಿಯಲ್ಲಿ ಹಂತಹAತವಾಗಿ ನಿರ್ವಹಣೆ ಮಾಡದೇ ಇರುವುದೇ ಪ್ರಮುಖ ಕಾರಣ ಎನ್ನುತ್ತಾರೆ ಸ್ಥಳೀಯರು.

ಈ ಕೋವಿಡ್‌ನಂತಹ ಮಾಹಾಮಾರಿಯೂ ಎಲ್ಲೆಡೆ ಹರುಡುತ್ತಿರುವ ಇಂತಹ ಹೊತ್ತಿನಲ್ಲಿಯೇ ಈ ಘಟನೆ ಸಂಭವಿಸಿರುವುದು ಸ್ಥಳೀಯರ ಆತಂಕ ದುಪ್ಪಟ್ಟಾಗಿಸಿದೆ. ಇದು ನಡೆದಿರುವುದು ಆಕಸ್ಮಿಕವೇ ಆದರೂ, ಸಂಬAಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಸಮಸ್ಯೆಯನ್ನು ಶೀಘ್ರದಲ್ಲಿಯೇ ಸರಿಪಡಿಸಿ, ಅಲ್ಲಿನ ಜನರಿಗೆ ನ್ಯಾಯ ಒದಗಿಸಬೇಕಾಗಿತ್ತು. ಆದರೆ ಒಂದು ವಾರ ಕಳೆದರೂ ಇದನ್ನು ಸರಿಪಡಿಸದೇ ಇರುವುದು ಕಾರ್ಕಳ ಪುರಸಭೆ ಅಧಿಕಾರಿಗಳ ಬೇಜವಬ್ದಾರಿತನದ ಪರಮಾವಧಿ ಎಂದರೆ ತಪ್ಪಾಗಲಾರದು.

ಈ ಸಮಸ್ಯೆಗೆ ಸಂಬಂಧಪಟ್ಟಂತೆ ಸ್ಥಳೀಯ ಸಂಘಟನೆಯ ಪರವಾಗಿ ವಕೀಲ ಎಂ. ಕೆ ವಿಪುಲ್ ತೇಜ್ ಈಗಾಗಲೇ ಲಿಖಿತ ರೂಪದಲ್ಲಿ ಜಿಲ್ಲಾಧಿಕಾರಿಗಳಿಗೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಮುಂಗಳೂರು ವಲಯ ಪರಿಸರ ಮಂಡಳಿಗೆ ದೂರು ನೀಡಿದ್ದಾರೆ. ಅಲ್ಲಿನ ಅಧಿಕಾರಿಗಳು ಯಾವುದೇ ರೀತಿಯ ಸ್ಪಂದನೆಯನ್ನು ವ್ಯಕ್ತಪಡಿಸಿಲ್ಲ.  ಕೂಡಲೇ ಸಂಬAಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಆ ಡಂಪಿAಗ್ ಯಾರ್ಡ್ನ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಹಿಡಿಯಬೇಕು. ಅಲ್ಲಿನ ಸುತ್ತಮುತ್ತಲಿನ ಜನರಿಗೆ ನೆಮ್ಮದಿಯ ಬದುಕನ್ನು ಸಾಧಿಸಲು ಅವಕಾಶ ಮಾಡಿಕೊಡಬೇಕು ಎನ್ನುವುದು ನಮ್ಮ ಆಶಯ.

Exit mobile version