ಸುಂಕನೂರು ಜಲ್ಲೆಯ ಮೂಲಭೂತ ಸೌಕರ್ಯದ ಬಗ್ಗೆ

ರಸ್ತೆಯಲ್ಲ ಇದು ಕೆಸರು ಗದ್ದೆ |ಸಿಟಿಜನ್ ಜರ್ನಲಿಸ್ಟ್  | ವಿಜಯ  ಟೈಮ್ಸ್

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಸುಂಕನೂರು ಗ್ರಾಮದ ಕ್ಯಾಂಪ್ ನಲ್ಲಿ ಸುಮಾರು 70 ವರ್ಷದಿಂದ ಹತ್ತಾರು ಕುಟುಂಬಗಳು ವಾಸಿಸುತ್ತಿವೆ. ಆದ್ರೆ ಇಲ್ಲಿನ ಸಾರ್ವಜನಿಕರಿಗೆ ರಸ್ತೆ ಸೌಲಭ್ಯವಿಲ್ಲದೆ ನಡೆದಾಡಲು ತುಂಬಾ ಕಷ್ಟಕರವಾಗಿದೆ. ವಾಹನಗಳು ಇಲ್ಲಿಗೆ ಬರೋದೇ ದುಸ್ಥರವಾಗಿದೆ. ಸಂಪೂರ್ಣ ಹದಗೆಟ್ಟಿರೋ ರಸ್ತೆಯಲ್ಲಿ ವಾಹನ ಬಿಡಿ, ಜನ ಓಡಾಡೋದೇ ಕಷ್ಟಕರವಾಗಿದೆ. ಹೆಂಗಸರು ಮಕ್ಕಳು ವೃದ್ದರು  ಗರ್ಬಿಣಿಯರ ತುರ್ತು ಚಿಕಿತ್ಸೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ರೋಗಿಗಳ ಪರಿಸ್ಥಿತಿ ಹದಗೆಟ್ರೆ ಆಂಬುಲೆನ್ಸ್‌ಗಳು ಕೂಡ ಇಲ್ಲಿಗೆ ಬರೋದೇ ಇಲ್ಲ. ನಡೆದಾಡಲು ಶಕ್ತಿಯಿಲ್ಲದ ಈ ವೃದ್ದರು, ಸಣ್ಣ  ಮಕ್ಕಳು,  ಮಳೆ ಜೋರಾಗಿ ಬಂದು ನೀರು ತುಂಬಿದರೆ ಈ ಕೆಸರಲ್ಲಿ ಹೂತು ಹೋಗುವ ಸಂಭವವಿದೆಯಂತೆ.

ಇನ್ನು ಸುಂಕನೂರು ಗ್ರಾಮದ ಜನರಿಗೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ಬಳಲುತ್ತಿದ್ದಾರೆ. ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಊರಿನ ಹಿತ್ತಲಲ್ಲೇ ಹರಿಯುತ್ತಿರುವ ಕಾಲುವೆ ನೀರನ್ನೇ ಇವರು ಬಳಸಬೇಕಾಗಿದೆ. ಇದರಿಂದ ಜನ ನಾನಾ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಈ ವಿಷಯದ ಬಗ್ಗೆ ಗ್ರಾಮಸ್ಥರು ಇಲ್ಲಿನ ತಹಶೀಲ್ಧಾರ್ ತಾಲೂಕು ಪಂಚಾಯತ್ ಅಧ್ಯಕ್ಷರು, ಪಿಡಿಒ ಮುಂತಾದ ಎಲ್ಲಾ ವರ್ಗದ ಅಧಿಕಾರಿಗಳಿಗೆ ಈ ಸಮಸ್ಯೆ ಕುರಿತು ಅನೇಕ ಬಾರಿ  ಮನವಿ ಸಲ್ಲಿಸಿದರೂ ಇದುವರೆಗೂ ಯಾರಿಂದಲೂ ಸ್ಪಂದನೆ ಸಿಗಲಿಲ್ಲ.

ನೋಡಿದಿರಲ್ಲಾ ಸುಂಕನೂರು ಗ್ರಾಮದ ಹಳ್ಳಿಯ  ಬಡ ಜನರ ಸಮಸ್ಯೆಯನ್ನು. ಇಲ್ಲಿನ ಅಧಿಕಾರಿಗಳು ಆದಷ್ಟು ಬೇಗ ಈ ಭಾಗದ ಜನರ ಕಷ್ಟಗಳನ್ನು ಆಲಿಸಿ ಇಲ್ಲಿನ ಜನರಿಗೆ ಸೂಕ್ತ ರಸ್ತೆ ಮಾಡಿಕೊಡಲಿ. ಜೊತೆಗೆ ಇಲ್ಲಿನ ಜನರ ನೀರಿನ ಸಮಸ್ಯೆಯನ್ನೂ ಪರಿಹರಿಸಲಿ ಅನ್ನೋದೇ ವಿಜಯಟೈಮ್ಸ್ ನ ಆಶಯ.   

Exit mobile version