ಸುಲಭ ವಿಧಾನದಲ್ಲಿ ಈ ಪಾನೀಯಗಳನ್ನು ಕುಡಿಯುವ ಮೂಲಕ ಬೊಜ್ಜು ಕರಗಿಸಿಕೊಳ್ಳಿ

ಈಗಂತೂ ಎಲ್ಲಾ ವಯಸ್ಸಿನವರಲ್ಲೂ ಕಾಣುವ ಪ್ರಮುಖ ಆರೋಗ್ಯ ಸಮಸ್ಯೆ ಎಂದರೆ ಅದು ಬೊಜ್ಜು..ಬೊಜ್ಜು ಕರಗಿಸಿಕೊಳ್ಳೂವ ಸಲುವಾಗಿ ಮಾಡದ ಕಸರತ್ತುಗಳೇ ಇಲ್ಲ..ಆದರೆ ಮನೆ ಮದ್ದಿನ ಮೂಲಕ ಬೊಜ್ಜಿನ ಸಮಸ್ಯೆಗೆ ಪರಿಹಾರ ಕಾಣಬಹುದು. ದಿನನಿತ್ಯ ಬಳಸುವ ಆಹಾರ ಪದಾರ್ಥಗಳ ದ್ರವ್ಯ ರೂಪಗಳಿಂದ ಜೀರ್ಣ ಕ್ರಿಯೆ ಉತತ್ಮಗೊಳಿಸುವ ಮೂಲಕ ಬೊಜ್ಜನ್ನು ಕರಗಿಸಿಕೊಳ್ಳಬಹುದು.

ಸೋಂಪು ಬೀಜಗಳನ್ನು ರಾತ್ರಿ ನೆನೆ ಹಾಕಿ ಮರುದಿನ ಬೆಳಗ್ಗೆ ಅದರ ನೀರನ್ನು ಸೋಸಿ ಕುಡಿಯುವುದರಿಂದ ನಿಮ್ಮ ದೇಹದ ಕಲ್ಮಶವನ್ನು ಹೊರಹಾಕಿ, ಚಯಾಪಚಯ ಕ್ರಿಯೆ ಸುಸೂತ್ರವಾಗಿ ನಡೆಯಲು ನೆರವಾಗುತ್ತದೆ.
ಜೀರಿಗೆ ಕಾಳುಗಳನ್ನೂ ಇದೇ ರೀತಿ ರಾತ್ರಿ ನೆನೆಹಾಕಿ ಮರುದಿನ ಆ ನೀರನ್ನು ಸೇವಿಸುವುದು ಜೀರ್ಣ ಕ್ರಿಯೆ ಸರಾಗವಾಗಲು ನೆರವಾಗುತ್ತದೆ.
ಓಂ ಕಾಳುಗಳನ್ನು ರಾತ್ರಿ ನೆನೆ ಹಾಕಿ ಬೆಳಗ್ಗೆ ಇನ್ನೂ ಸ್ವಲ್ಪ ನೀರು ಸೇರಿಸಿ, ಚೆನ್ನಾಗಿ ಕುದಿಸಿ. ಅದು ಆರಿದ ನಂತರ ಖಾಳಿ ಹೊಟ್ಟೆಗೆ ಅದನ್ನು ಸೇವಿಸಿ. ಇದು ದೇಹದ ಕೊಬ್ಬನ್ನು ಕರಗಿಸುತ್ತದೆ.
ಲಿಂಬೆ ಪಾನಕ ಎಲ್ಲರಿಗೂ ಪ್ರಿಯ. ನೀರಿಗೆ ಲಿಂಬೆ ರಸ ಹಿಂಡಿ ನಿತ್ಯವೂ ಬೆಳಗ್ಗೆ ಸೇವಿಸಿದರೆ ಜೀರ್ಣ ಕ್ರಿಯೆ ಸುಲಭವಾಗುತ್ತದೆ.
ಶುಂಠೀ ಮತ್ತು ನಿಂಬೆ ಹುಲ್ಲು ಆರೋಗ್ಯಕ್ಕೆ ಉತ್ತಮವಾಗಿದ್ದು, ಹಸಿವನ್ನು ಶಮನಗೊಳಿಸುತ್ತದೆ. ತೂಕನಷ್ಟಕ್ಕೂ ರಾಮಬಾಣ. ಆದ್ದರಿಂದ ಶುಂಠಿ ಹಾಗೂ ನಿಂಬೆ ಹುಲ್ಲನ್ನು ಸ್ವಲ್ಪಗೊಳಿಸಿ, ನೀರಿನಲ್ಲಿ ಕುದಿಸಿ, ಆರಿದ ಮೇಲೆ ಕುಡಿಯುವುದು ಒಳಿತು.
ಹೀಗೆ ದಿನಿತ್ಯದ ಆಹಾರದ ನಡುವೆ ಇಂತಹ ಪಾನೀಯಗಳ ಸೇವನೆಯಿಂದ ಅಧಿಕ ಬೊಜ್ಜನ್ನು ಕರಗಿಸಲು ನೆರವಾಗುತ್ತದೆ.

Exit mobile version